More

    ಆಪರೇಷನ್​ ಕೋಬ್ರಾ: ಬಾವಿಗೆ ಬಿದ್ದ ನಾಗರಹಾವನ್ನು ರಕ್ಷಿಸಿದ ಜನರು; ಬುಸುಗುಟ್ಟುತ್ತಲೇ ಮೇಲೆ ಬಂದ ಸರ್ಪ..

    ಉಡುಪಿ: ಬಾವಿಯ ಹಗ್ಗವೇನಾದರೂ ಒಮ್ಮೆ ಹಾವಂತೆ ಕಂಡರೂ ಅಚ್ಚರಿ ಏನಲ್ಲ. ಆದರೆ ಬಾವಿಯೊಳಗೆ ಸಾಕ್ಷಾತ್ ನಾಗರಹಾವೇ ಕಂಡುಬಂದರೆ ಎಂಥವರಿಗೂ ಆಶ್ಚರ್ಯ ಎನಿಸದೆ ಇರಲಾರದು. ನಾಗರಹಾವೊಂದು ಬಾವಿಗೆ ಬಿದ್ದಿದ್ದು, ಅದನ್ನು ರಕ್ಷಣೆ ಮಾಡುವ ರೋಚಕ ಕಾರ್ಯಾಚರಣೆಯೊಂದು ಇಂದು ಉಡುಪಿಯಲ್ಲಿ ನಡೆದಿದೆ.

    ಉಡುಪಿ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯಕ್​ ಎಂಬವರಿಗೆ ಸೇರಿದ ಬಾವಿಯಲ್ಲಿ ಭಾರಿ ಉದ್ದದ ಈ ನಾಗರಹಾವು ಬಿದ್ದಿದ್ದು, ಅಕಸ್ಮಾತ್ ಕಣ್ಣಿಗೆ ಕಾಣಿಸಿದೆ. ಹೀಗೆ ನೀರಲ್ಲಿದ್ದ ಹಾವು ಮೇಲೆ ಬರಲು ಹೆಣಗಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಅದರ ರಕ್ಷಣೆಗೆ ಮುಂದಾಗಿದ್ದಾರೆ. ವಿಷಪೂರಿತ ಹಾವೆಂದು ಗೊತ್ತಿದ್ದರೂ ಜನರು ಅದನ್ನು ಲೆಕ್ಕಿಸದೆ ರಕ್ಷಣೆ ಮಾಡಿದ್ದಾರೆ. ಮಳೆ ನಡುವೆಯೇ ಈ ಉರಗ ರಕ್ಷಣಾ ಕಾರ್ಯಾಚರಣೆ ನಡೆದಿದೆ.

    ಇದನ್ನೂ ಓದಿ: ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಸಾಲಿಗ್ರಾಮದ ಉರಗ ತಜ್ಞ ಸುಧೀಂದ್ರ ಐತಾಳರಿಗೆ ಮನೆಯವರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅವರ ನೇತೃತ್ವದಲ್ಲಿ ಹಾವನ್ನು ರಕ್ಷಣೆ ಮಾಡಲಾಯಿತು. ಮೊದಲು ಟಯರ್​ವೊಂದನ್ನು ಎರಡು ಹಗ್ಗಗಳ ಮೂಲಕ ಬಾವಿಯೊಳಕ್ಕೆ ಇಳಿಸಲಾಯಿತು. ಬುಸುಗುಡುತ್ತಿದ್ದ ನಾಗರಹಾವನ್ನು ಟಯರ್ ಮೂಲಕ ಮೇಲಕ್ಕೆತ್ತಿ, ನಂತರ ಅದನ್ನು ನಾಜೂಕಾಗಿ ಪೈಪ್​​ವೊಂದರ ಒಳಗೆ ಹೋಗುವಂತೆ ಮಾಡಲಾಗಿದೆ. ಆ ಪೈಪ್​ ಮೂಲಕ ಹಾವನ್ನು ಸೆರೆ ಹಿಡಿದು ಬಳಿಕ ಕಾಡಿನೊಳಕ್ಕೆ ಬಿಡಲಾಗಿದೆ. ಸುರಿವ ಮಳೆಯನ್ನು ಲೆಕ್ಕಿಸದೆ ಬುಸುಗುಟ್ಟುತ್ತಿದ್ದ ಹಾವಿನ ರಕ್ಷಣೆ ಮಾಡಿದ ಸಾಲಿಗ್ರಾಮ ಉರಗ ತಜ್ಞ ಸುಧೀಂದ್ರ ಐತಾಳ್ ಕುರಿತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!

    ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts