More

    ಕರಾವಳಿ ಬ್ಯಾಂಕಿಂಗ್ ಅಸ್ತಿತ್ವ, ಅಸ್ಮಿತೆಗೆ ಕೊನೆಯ ಮೊಳೆ

    ಮಂಗಳೂರು: ದೇಶಕ್ಕೆ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಒದಗಿಸಿದ ಅವಿಭಜಿತ ಕನ್ನಡ ಜಿಲ್ಲೆಗೆ ಅವುಗಳಲ್ಲಿ ಒಂದನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

    ಸಿಂಡಿಕೇಟ್ ಬ್ಯಾಂಕ್ ತನ್ನದೇ ನೆಲದಲ್ಲಿ ಹುಟ್ಟಿದ ಕೆನರಾ ಬ್ಯಾಂಕ್ ಜತೆ ಮತ್ತು ಕಾರ್ಪೊರೇಷನ್ ಬ್ಯಾಂಕ್ ಮುಂಬೈಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆ ಏಪ್ರಿಲ್ ಒಂದರಂದು ವಿಲೀನಗೊಳ್ಳುತ್ತಿದೆ.

    ಕರಾವಳಿಯಲ್ಲಿ ಜನಪರ ಹೋರಾಟಕ್ಕೆ ಬಲ ದೊರೆಯುವುದಿಲ್ಲ ಎನ್ನುವುದು ಈ ಮೂಲಕ ಮತ್ತೊಮ್ಮೆ ಸಾಬೀತಾಯಿತು. ಬ್ಯಾಂಕ್ ನೌಕರರು, ವಿವಿಧ ಸಂಘಸಂಸ್ಥೆಗಳ ವಿರೋಧದ ನಡುವೆಯೂ ಕರಾವಳಿಯ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನವಾಗುವ ಜತೆ ಕರಾವಳಿಯಲ್ಲಿ ಅಸ್ತಿತ್ವ ಕಳೆದುಕೊಂಡಂತಾಗಿದೆ. ಕೆನರಾ ಬ್ಯಾಂಕ್ ಮಾತ್ರ ಉಳಿದುಕೊಂಡಿದೆಯಾದರೂ ಅದರ ಕೇಂದ್ರ ಕಚೇರಿ ಬೆಂಗಳೂರಿಗೆ ವರ್ಗಾವಣೆಯಾಗಿದೆ.

    ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ವಿಜಯ ಬ್ಯಾಂಕ್ ಕಳೆದ ಏಪ್ರಿಲ್ ಒಂದರಂದು ಬ್ಯಾಂಕ್ ಆಫ್ ಬರೋಡದ ಜತೆ ವಿಲೀನಗೊಂಡಿತ್ತು.
    ಸರಿಯಾದ ಸಂಪರ್ಕ ವ್ಯವಸ್ಥೆಗಳು ಕೂಡ ಇಲ್ಲದ ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮ ಪಡೆದು ಕರಾವಳಿಯ ಮತ್ತು ದೇಶದ ಆರ್ಥಿಕತೆಗೆ ಚೈತನ್ಯ ತುಂಬಿದ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳು ಹುಟ್ಟೂರಲ್ಲೇ ಅಸ್ತಿತ್ವ ಕಳೆದುಕೊಂಡಿದೆ ಎಂದು ಕಾರ್ಪೋರೇಷನ್ ಬ್ಯಾಂಕ್ ನೌಕರರ ಸಂಘದ ಮಾಜಿ ಮುಖಂಡ ಟಿ.ಆರ್.ಭಟ್ ಪ್ರತಿಕ್ರಿಯಿಸಿದ್ದಾರೆ.

    ಸಿಂಡಿಕೇಟ್ ಬ್ಯಾಂಕ್: ಉದ್ಯಮಿ ಉಪೇಂದ್ರ ಅನಂತ ಪೈ, ಇಂಜಿನಿಯರ್ ವಾಮನ ಕುಡ್ವ, ಡಾ.ಡಾ.ಟಿ.ಎಂ.ಎ.ಪೈ ಸೇರಿ 8000 ರೂ. ಬಂಡವಾಳ ದೊಂದಿಗೆ 1925ರಲ್ಲಿ ಕೆನರಾ ಇಂಡಸ್ಟ್ರಿಯಲ್ ಆ್ಯಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಸ್ಥಾಪಿಸಿದರು. ಇದೇ ಮುಂದೆ ಸಿಂಡಿಕೇಟ್ ಬ್ಯಾಂಕ್ ಆಯಿತು. ಪಿಗ್ಮಿ ಸಂಗ್ರಹದಂತಹ ಯೋಜನೆಗಳ ಮೂಲಕ ಸಣ್ಣ ಅಂಗಡಿ, ವ್ಯಾಪಾರ ನಡೆಸುವವರಲ್ಲಿ ಕೂಡ ಉಳಿತಾಯ ಪ್ರವೃತ್ತಿ ಹುಟ್ಟು ಹಾಕಿದ ಕೀರ್ತಿ ಈ ಬ್ಯಾಂಕ್‌ಗೆ ಸಲ್ಲುತ್ತದೆ.

    ಕಾರ್ಪೋರೇಷನ್ ಬ್ಯಾಂಕ್: 1906, ಮಾರ್ಚ್ 12 ರಂದು ಉಡುಪಿಯಲ್ಲಿ ಖಾನ್ ಬಹದ್ದೂರ್ ಅಬ್ದುಲ್ಲಾ ಹಾಜಿ ಸಾಹೇಬ್ ಅವರಿಂದ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪನೆಯಾಯಿತು. ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪ್ರಧಾನ ವ್ಯಾಪಾರ ಕೇಂದ್ರವಾಗಿದ್ದರೂ ಆರ್ಥಿಕ ಬೆಂಬಲದ ಕೊರತೆ ಇತ್ತು. ಇದನ್ನು ತುಂಬುವ ಉದ್ದೇಶದಿಂದ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಿಸಲಾಗಿತ್ತು. ಈ ಬ್ಯಾಂಕ್ ಸಾರ್ಥಕ 114 ವರ್ಷಗಳನ್ನು ಪೂರೈಸುತ್ತಿದೆ.

    ಕೆನರಾ ಬ್ಯಾಂಕ್: ಅಮ್ಮೆಂಬಳ ಸುಬ್ಬರಾವ್ ಪೈ ನೇತೃತ್ವದಲ್ಲಿ 1906 ರಲ್ಲಿ ಹಿಂದು ಶಾಶ್ವತ ನಿಧಿ ಹೆಸರಿನಿಂದ ಮಂಗಳೂರಿನಲ್ಲಿ ಕೆನರಾ ಬ್ಯಾಂಕ್ ಸ್ಥಾಪನೆಯಾಯಿತು. ಬ್ಯಾಂಕ್‌ನ ಪ್ರಧಾನ ಕಚೇರಿ ಬಹಳ ವರ್ಷಗಳ ಕಾಲ ಮಂಗಳೂರಿನಲ್ಲೇ ಇತ್ತು. ಬಳಿಕ ಬೆಂಗಳೂರಿಗೆ ವರ್ಗಾವಣೆಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts