More

    ಕಲ್ಲಿದ್ದಲು ಹಗರಣ : ಟಿಎಂಸಿ ನಾಯಕನ ಸೋದರನಿಗೆ ಜಾಮೀನು

    ಕೊಲ್ಕತಾ/ನವದೆಹಲಿ : ಪಶ್ಚಿಮ ಬಂಗಾಳದ ಕಲ್ಲಿದ್ದಿಲು ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ದ ನಾಯಕ ವಿನಯ್ ಮಿಶ್ರ ಅವರ ಸೋದರ ವಿಕಾಸ್ ಮಿಶ್ರ ಅವರಿಗೆ ದೆಹಲಿ ಕೋರ್ಟ್ ಇಂದು ಜಾಮೀನು ನೀಡಿದೆ. ವೈದ್ಯಕೀಯ ಸಮಸ್ಯೆಯ ಆಧಾರದ ಮೇಲೆ ಮಿಶ್ರ ಅವರಿಗೆ ಮೇ 15 ನೇ ತಾರೀಖಿನವರೆಗೆ ಜಾಮೀನು ಲಭ್ಯವಾಗಿದೆ.

    ಬಂಗಾಳದ ಕುನುಸ್ತೊರಿಯಾ ಮತ್ತು ಕಜೋರಿಯದಲ್ಲಿರುವ ಈಸ್ಟರ್ನ್ ಕೋಲ್​ಫೀಲ್ಡ್​ ಲಿಮಿಟೆಡ್​ಗೆ ಸೇರಿದ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಕಲ್ಲಿದ್ದಲಿನ ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಳವಿನ ಬಗೆಗೆ ಕಳೆದ ವರ್ಷ ನವೆಂಬರ್​ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಕಲ್ಲಿದ್ದಲು ಮಾಫಿಯಾದವರು ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕರಿಗೆ ಲಂಚ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಹಣವನ್ನು ಪಕ್ಷದ ಯುವ ನಾಯಕ ವಿನಯ್ ಮಿಶ್ರಾ ಮೂಲಕ ಚಾನಲ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಮಿಶ್ರ ವಿರುದ್ಧ ಸಿಬಿಐ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದ್ದು, ಸದ್ಯಕ್ಕೆ ಆತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾ ಸೋಂಕಿತ ಕುಮಾರಸ್ವಾಮಿಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ

    ‘ಮನೆಮನೆಯಲ್ಲಿ ರಾಮಾಯಣ’ ಯೋಜನೆ ! ನಿತ್ಯ ಪಾರಾಯಣ ಮಾಡಲು ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts