More

    ಆಟಕ್ಕೂ ಮೊದಲು ಕ್ರೀಡಾಪಟುವಿನ ಕೆನ್ನೆಗೆ ಬಾರಿಸಿದ ಕೋಚ್! ವಿಡಿಯೋ ವೈರಲ್

    ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು, ಭಾರತ ಸೇರಿ ನೂರಾರು ರಾಷ್ಟ್ರಗಳು ಅದರಲ್ಲಿ ಭಾಗವಹಿಸಿವೆ. ಕ್ರೀಡಾಪಟುಗಳ ಜತೆ ಸಾವಿರಾರು ಕೋಚ್​ಗಳೂ ಟೋಕಿಯೋದಲ್ಲಿದ್ದಾರೆ. ಅದರಲ್ಲಿ ಇದೀಗ ಒಬ್ಬ ಕೋಚ್ ಹಾಗೂ ಕ್ರೀಡಾಪಟು ಭಾರೀ ಸುದ್ದಿಯಲ್ಲಿದ್ದಾರೆ.

    ಕ್ರೀಡಾಪಟು ಒಬ್ಬಳು ಆಟಕ್ಕೆ ಸಿದ್ಧವಾಗಿ ಬರುತ್ತಾಳೆ. ಆಟಕ್ಕೂ ಮೊದಲು ಕೊನೆ ಕ್ಷಣದಲ್ಲಿ ಕೋಚ್​, ಆಕೆಯ ಬಟ್ಟೆಯ ಕಾಲರ್ ಹಿಡಿದು ಜಗ್ಗಾಡುತ್ತಾನೆ. ನಂತರ ಎರಡೂ ಕೆನ್ನೆಗೆ ಒಂದೊಂದು ಏಟು ಬಾರಿಸುತ್ತಾನೆ. ಅದಕ್ಕೆ ಏನೂ ಪ್ರತಿಕ್ರಿಯಿಸದ ಕ್ರೀಡಾಪಟು ಸೀದಾ ಆಟವಾಡಲು ತೆರಳುತ್ತಾಳೆ. ಇಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಅಂದ ಹಾಗೆ ಆ ವಿಡಿಯೋದಲ್ಲಿರುವ ಕ್ರೀಡಾಪಟು ಜರ್ಮನಿಯ ಅಥ್ಲೀಟ್ ಮಾರ್ಟಿನಾ ಟ್ರಾಜ್‌ಡೋಸ್‌. ಆಕೆ ಜೂಡೋ ಫೈಟ್​ನ 32ನೇ ರೌಂಡ್ ಆಟ ಆಡುವ ಮೊದಲು ಈ ಘಟನೆ ಸಂಭವಿಸಿರುವುದಾಗಿ ಹೇಳಲಾಗಿದೆ.

    ಈ ಬಗ್ಗೆ ಸ್ವತಃ ಮಾರ್ಟಿನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾನು ಈ ರೀತಿ ಸುದ್ದಿಯಾಗುತ್ತೇ ಎಂದುಕೊಂಡಿರಲಿಲ್ಲ. ಇದು ನಾನೇ ಆಡುವುದಕ್ಕೂ ಮೊದಲು ಅನುಸರಿಸುವ ಕೆಲ ಕ್ರಮಗಳಲ್ಲಿ ಒಂದು. ನನ್ನ ಕೋಚ್ ನನ್ನ ಬಯಕೆಯಂತೆ ನನ್ನ ಕೆನ್ನೆಗೆ ಹೊಡೆದಿದ್ದಾರೆ ಅಷ್ಟೇ ಎಂದು ಆಕೆ ಹೇಳಿದ್ದಾರೆ. ಸಾಮಾನ್ಯವಾಗಿ ಎಲ್ಲ ಕ್ರೀಡಾಪಟುಗಳು ಆಟಕ್ಕೆ ಸ್ಫೂರ್ತಿ ತುಂಬಿಸಿಕೊಳ್ಳುವ ಸಲುವಾಗಿ ಈ ರೀತಿಯ ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವುದುಂಟು. (ಏಜೆನ್ಸೀಸ್)

    ಮುಂದಿನ ವರ್ಷ 3ನೇ ತ್ರೈಮಾಸಿಕದಲ್ಲಿ ಚಂದ್ರಯಾನ 3; ಸಂಸತ್ತಿನಲ್ಲಿ ಉತ್ತರಿಸಿದ ಸಚಿವ

    ಶಿಕ್ಷಕರರೇ ಗಮನಿಸಿ: ಇನ್ನು ಮುಂದೆ ಶಿಕ್ಷಕರ ಸೇವಾ ಸೌಲಭ್ಯಕ್ಕೆ ಭೌತಿಕ ಅರ್ಜಿ ಸ್ವೀಕರಿಸುವುದಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts