More

    ಸಹಕಾರಿ ಸಂಘ ಕಟ್ಟಿದ ಹಳ್ಳಿ ಯುವಕರು

    ಕೊಕ್ಕರ್ಣೆ: ಹೆಬ್ರಿ ತಾಲೂಕಿನ ಕುಚ್ಚೂರು ಕುಡಿಬೈಲು ಆಸುಪಾಸಿನ ಯುವಕರು ಹುಟ್ಟುಹಾಕಿದ ಶಾಂತಿನಿಕೇತನ ಸೌಹಾರ್ದ ನಿಯಮಿತ ಹೆಬ್ರಿಯ ಕುಡಿಬೈಲ್ ಕುಚ್ಚೂರಿನಲ್ಲಿ ಸೆ.24 ರಂದು ಉದ್ಘಾಟನೆಗೊಳ್ಳಲಿದೆ.

    2011ರಲ್ಲಿ ರಾಜೇಶ್‌ನಾಯ್ಕ, ನರೇಂದ್ರ ಎಸ್., ರವೀಶ್ ಶೆಟ್ಟಿ, ಗಣೇಶ್ ಶೆಟ್ಟಿ, ಜಯಕರ, ನಾಗರಾಜ ಮತ್ತಿತರರು ಸೇರಿ ಯುವ ವೃಂದ ಸ್ಥಾಪಿಸಿದ್ದರು. ಸದಸ್ಯರ ಸಂಖ್ಯೆ ಹೆಚ್ಚಿದಂತೆ ಉಳಿತಾಯದ ಠೇವಣಿಯೂ ಜಾಸ್ತಿಯಾಗಿ ಸಾಲ ಸೌಲಭ್ಯ ಒದಗಿಸಲು ಆರಂಭಿಸಿದ್ದರು. ಹಣಕಾಸು ವ್ಯವಹಾರ ಹೆಚ್ಚಿದಂತೆ ಕೋ ಆಪರೇಟಿವ್ ಸೊಸೈಟಿ ಆರಂಭಿಸುವ ಚಿಂತನೆ ಮೊಳಕೆಯೊಡೆದು ಸದ್ಯ ಕಾರ್ಯಾರಂಭಕ್ಕೆ ದಿನಗಣನೆ ಆರಂಭವಾಗಿದೆ.

    ಪ್ರಸ್ತುತ 16ಲಕ್ಷ ರೂ.ಗೂ ಅಧಿಕ ಠೇವಣಿ, 528 ಮಂದಿ ಸದಸ್ಯರು ಸೊಸೈಟಿಯಲ್ಲಿದ್ದಾರೆ. ನಿಯಮದಂತೆ 13 ಮಂದಿ ಬೋರ್ಡ್ ಆಫ್ ಡೈರೆಕ್ಟರ್ಸ್‌ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧೆಡೆ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ.

    ನಾವು ಯುವಕರೇ ಸೇರಿ ರೂಪಿಸಿದ್ದ ಯುವ ವೃಂದ ಇನ್ನು ಮುಂದೆ ಸೊಸೈಟಿ ಆಗಿ ಕಾರ್ಯ ನಿರ್ವಹಿಸಲಿದೆ. ಹಿಂದೆಯೂ ಎಂದೂ ಹಣಕಾಸು ವಹಿವಾಟಿನಲ್ಲಿ ನಷ್ಟ ಆಗಿದ್ದಿಲ್ಲ. ಲಾಭ ಮಾಡುವುದು ನಮ್ಮ ಉದ್ದೇಶವಲ್ಲ. ಸಮಾಜಮುಖಿ ಸೊಸೈಟಿಯಾಗಿ ಇದು ಕಾರ್ಯ ನಿರ್ವಹಿಸಲಿದೆ.

    – ರಾಜೇಶ್ ನಾಯ್ಕ, ಸೊಸೈಟಿ ನೂತನ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts