More

    ಪತ್ನಿಯ ಯೋಗಾಭ್ಯಾಸ ವಿಡಿಯೋದಲ್ಲಿ ‘ಬೆತ್ತಲಾದ’ ನ್ಯೂಸ್​ ಆ್ಯಂಕರ್​…!

    ಸೌತ್​ ಹ್ಯಾಂಪ್ಟನ್​: ಲಾಕ್​ಡೌನ್​ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಯೋಗ ಕಲಿಸಲು ಮಂದಾದ ಸೆಲೆಬ್ರಿಟಿ ಪತ್ನಿಯೇ ಪತಿಯ ‘ಮಾನ’ ಹರಾಜಾಗಲು ಕಾರಣವಾಗಿದ್ದಾಳೆ.

    ಅಲ್ಲಿಗೆ ಲಾಕ್​ಡೌನ್​ ಕಾರಣದಿಂದಾಗಿ ಮನೆಯಲ್ಲಿಯೇ ವರ್ಕ್​ ಫ್ರಾಮ್​ ಹೋಮ್​ನಿಂದಾದ ಎಡವಟ್ಟಿಗೆ ಮತ್ತೊಂದು ಸೇರ್ಪಡೆಯಾದಂತಾಗಿದೆ.
    ಬ್ರಿಟನ್​ನ ಕ್ರಿಸ್ಟಿನಾಗೆ ಅಷ್ಟಾಂಗ ಯೋಗ ಎಂದರೆ ಎಲ್ಲಿಲ್ಲದ ಪ್ರೀತಿ. ನಿತ್ಯವೂ ಯೋಗಾಭ್ಯಾಸ ಮಾಡುವುದಲ್ಲದೇ, ಇತರರಿಗೂ ಅದನ್ನು ಕಲಿಸುತ್ತಾಳೆ. ಆದರೆ, ಲಾಕ್​ಡೌನ್​ ಅವಧಿ ತರಬೇತಿ ನೀಡುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಯೋಗ ಕಲಿಸುತ್ತಿದ್ದಳು.

    ಇದನ್ನೂ ಓದಿ; ಹತ್ತು ವರ್ಷ 3.5 ಲಕ್ಷ ಜನ ಆ ನಿಧಿಗಾಗಿ ಹುಡುಕಿದ್ದರು; ಅಷ್ಟಕ್ಕೂ ಎಲ್ಲಿತ್ತು? ಎಷ್ಟಿತ್ತು?

    ಅಂತೆಯೇ ಕೆಲ ದಿನಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಅಂಥದ್ದೇ ಒಂದು ವಿಡಿಯೋವನ್ನು ಕ್ರಿಸ್ಟಿನಾ ಅಪ್​ಲೋಡ್​ ಮಾಡಿದ್ದಳು. ವಿಡಿಯೋ ಚಿತ್ರೀಕರಣದ ವೇಳೆ ಆದ ಎಡವಟ್ಟು ಪತಿಗೆ ಭಾರಿ ಮುಜುಗರ ತಂದಿಟ್ಟಿದೆ. ಅಷ್ಟಕ್ಕೂ ಆಕೆ ಪತಿ ಸಿಎನ್​ಎನ್​ ಸುದ್ದಿವಾಹಿನಿಯ ಖ್ಯಾತ ನಿರೂಪಕ ಕ್ರಿಸ್​ ಕೊಮೋ.

    ಮನೆಯ ಹಾಲ್​ನಲ್ಲಿ ಕ್ರಿಸ್ಟಿನಾ ಯೋಗಾಸನಗಳನ್ನು ಮಾಡುತ್ತಿದ್ದರೆ, ಅತ್ತ ಕಿಟಕಿಯಾಚೆ ಕ್ರಿಸ್​ ಮನೆಯ ಹುಲ್ಲುಹಾಸಿಗೆ ಮುಖ ಮಾಡಿ ಬೆತ್ತಲಾಗಿ ನಿಂತಿದ್ದ. ಮಧ್ಯದಲ್ಲೊಂದು ಕಂಬ ಅಡ್ಡವಾಗಿರುವುದರಿಂದ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಮನೆಯಲ್ಲಿ ಪತ್ನಿ ಇರುವಾಗ, ಬೆತ್ತಲಾಗಿ ನಿಲ್ಲಲು ಬೇರಾರಿಗೆ ಸಾಧ್ಯ ಅಲ್ಲವೇ? ಹೀಗಾಗಿ ಆತ ಕ್ರಿಸ್​ ಎಂದು ಮಾಧ್ಯಮಗಳಲ್ಲೂ ಭಾರಿ ಪ್ರಚಾರವಾಯಿತು.

    ಇದನ್ನೂ ಓದಿ; ಒಬ್ಬರಲ್ಲ, 26 ‘ಅನಾಮಿಕ’ರು ಬಲೆಗೆ; ಉತ್ತರಪ್ರದೇಶದಲ್ಲಿ ನಡೆದಿದೆ ಕರ್ನಾಟಕದಂಥದ್ದೇ ಶಿಕ್ಷಕರ ನೇಮಕಾತಿ ಹಗರಣ

    ಕ್ರಿಸ್ಟಿನಾ ಮೂರು ಮಕ್ಕಳ ತಾಯಿ, ವೆಲ್​ನೆಸ್​ ಗುರು. ಪ್ಯೂರಿಸ್ಟ್​ ಎಂಬ ವೇದಿಕೆ ಸಂಸ್ಥಾಪಕಿ. ಇನ್​ಸ್ಟಾಗ್ರಾಂನಲ್ಲಿ ಈಕೆಯ ಯೋಗ ವಿಡಿಯೋಗಳಿಗಾಗಿ 1.5 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಹೀಗಾಗಿ ಈ ವಿಡಿಯೋ ಭಾರಿ ವೈರಲ್​ ಆಗಿದೆ.

    ಪತ್ನಿಯ ಯೋಗಾಭ್ಯಾಸ ವಿಡಿಯೋದಲ್ಲಿ 'ಬೆತ್ತಲಾದ' ನ್ಯೂಸ್​ ಆ್ಯಂಕರ್​...!

    ನನ್ನ ವಿಮಾನದ ಟಿಕೆಟ್​ಗಾಗಿ ತಂದೆ ವರ್ಷದ ಸಂಬಳ ಖರ್ಚು ಮಾಡಿದ್ದರು; ಸಂಕಷ್ಟದ ದಿನ ನೆನೆದ ಗೂಗಲ್​ ಸಿಇಒ ಸುಂದರ್​ ಪಿಚಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts