More

    ಕೋವಿಡ್​ನಿಂದ ತತ್ತರಿಸಿದ ವಿಶ್ವದ ಯಾವುದೇ ರಾಷ್ಟ್ರ ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಘೋಷಣೆ ಮಾಡಿಲ್ಲ

    ಬೆಂಗಳೂರು: ಲಾಕ್​ಡೌನ್​ ನಂತರ ಕುಸಿದಿರುವ ರಾಷ್ಟ್ರದ ಆರ್ಥಿಕ ಚೇತರಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ನೀಡಿರುವ 20 ಲಕ್ಷ ಕೋಟಿ ಆರ್ಥಿಕ ನೆರವು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಘೋಷಣೆಯಂತೆ ವಿತ್ತ ಸಚಿವರು ಇಂದು ಯಾರಿಗೆ ನೆರವು ನೀಡಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಗೆ 3 ಲಕ್ಷ ಕೋಟಿ ರೂಪಾಯಿ ನೆರವು ನೀಡಿದ್ದಾರೆ.

    ಇದನ್ನೂ ಓದಿ  ಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪಥನ ಮಾಡಿದೆವು

    ಈ ಮೊತ್ತ ಉದ್ಯಮಿಗಳಿಗೆ ಮಾತ್ರ ಸಹಕಾರಿಯಾಗದೆ ಕಾರ್ಮಿಕ ವರ್ಗಕ್ಕೂ ಅನುಕೂಲವಾಗಿದೆ. ಕಾರ್ಮಿಕ ವರ್ಗದ ಆರ್ಥಿಕ ಮಟ್ಟ ಹೆಚ್ಚಲಿದೆ. ಎಂಎಸ್ಎಂಇಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ನೀಡುವ ಯೋಜನೆ ಘೋಷಣೆ ತಕ್ಷಣ ಕೈಗಾರಿಕೆ ಗಳನ್ನು ಮತ್ತೆ ಅರಂಭಿಸಲು ಉತ್ತೇಜನಕಾರಿಯಾಗಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.

    ಕೋವಿಡ್​-19ರಿಂದ ತತ್ತರಿಸಿದ ಜಗತ್ತಿನ ಯಾವ ರಾಷ್ಟ್ರಗಳು ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಘೋಷಣೆ ಮಾಡಿಲ್ಲ. ಆದರೆ ನಮ್ಮ ಪ್ರಧಾನಿಗಳು ಕೈಗಾರಿಕೆಗಳ ಚೇತರಿಕೆಗೆ ನೆರವು ನೀಡಿದ್ದಾರೆ. ಲಾಕ್​ಡೌನ್​ ವ್ಯವಸ್ಥೆಯಿಂದ ಜನರು ಹೊರ ಬಂದು ದುಡಿಮೆ ಆರಂಭಿಸುವ ಪ್ರೆರೇಪಿಸಿದ ಮೊದಲ ದಿಟ್ಟ ಹೆಜ್ಜೆಯಾಗಿದೆ ಎಂದು ಅವರು ಹೊಗಳಿದರು.

    ಕೊನೆಗೂ ಸೆರೆಯಾಯ್ತು ಮಗುವನ್ನು ತಿಂದ ಚಿರತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts