More

    ಸಾವಿರ ಮದ್ಯ ಮಳಿಗೆಗೆ ಅವಕಾಶವಿಲ್ಲವೆಂದ ಸಿಎಂ

    ಬೆಂಗಳೂರು: ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಉದ್ದೇಶದಿಂದ ಹೊಸ ಆದಾಯ ಮೂಲಗಳ ಹುಡುಕಾಟ ಹಾಗೂ ಇರುವ ಆದಾಯ ವೃದ್ಧಿಸಲು ಶ್ರಮಹಾಕುತ್ತಿರುವ ಸರ್ಕಾರ, ಹೊಸ ಮದ್ಯದಂಗಡಿ ಪರವಾನಗಿ ಕೊಡಲು ಬಯಸಿತ್ತು. ಆದರೀಗ ತೀವ್ರ ವಿರೋಧ ಕೇಳಿಬಂದ ಹಿನ್ನೆಲೆ ತೀರ್ಮಾನದಿಂದ ಹೆಜ್ಜೆ ಹಿಂದಿಟ್ಟಿದೆ.
    ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿ, ಸಾರ್ವಜನಿಕ ವಲಯದಲ್ಲಿ ನಡೆದಿರುವ ಚರ್ಚೆಯನ್ನು ಇಲ್ಲಿಗೇ ಮುಗಿಸಲು ಬಯಸಿದ್ದಾರೆ.
    ‘ಒಂದು ಸಾವಿರ ಮದ್ಯದಂಗಡಿಗಳನ್ನು ತೆರೆಯುವುದಾಗಿ ಚಿಂತನೆ ನಡೆಸುತ್ತಿರುವುದಾಗಿ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ನಾಣು ತೆರೆಯುವುದಿಲ್ಲ’ ಎಂದು ಸಿಎಂ ಚಿತ್ರದುರ್ಗದಲ್ಲಿ ಸ್ಪಷ್ಟನೆ ನೀಡಿದರು.
    ಸರ್ಕಾರದ ಈ ಪ್ರಸ್ತಾವನೆ ವಿರೋಧಿಸಿ ರಾಜ್ಯದ ವಿವಿಧೆಡೆ ಮಹಿಳೆಯರು ಸಾಂಕೇತಿಕ ಹೋರಾಟ ನಡೆಸಿದ್ದರು. ಅಲ್ಲದೇ ಹಾಲಿ ಮದ್ಯ ಮಾರಾಟದಲ್ಲಿ ತೊಡಗಿರುವವರು ಸಭೆ ನಡೆಸಿ ಅಸಮಾಧಾನ ಹೊರಹಾಕಿದ್ದರು.

    ಆಗಿದ್ದೇನು?

    ಗ್ರಾಮ ಪಂಚಾಯಿತಿಗಳಲ್ಲಿ, ನಗರ ಪ್ರದೇಶದ ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಹೊಸ ಪರವಾನಗಿ ನೀಡುವುದು ಮತ್ತು ಬಳಕೆಯಲ್ಲಿಲ್ಲದ ಪರವಾನಗಿಗಳಿಗೆ ಮರು ಜೀವನ ನೀಡುವುದು ಸೇರಿದಂತೆ ಒಂದು ಸಾವಿರ ಮದ್ಯದಂಗಡಿ ತೆರೆಯಲು ಸರ್ಕಾರ ಬಯಸಿತ್ತು.
    600 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವ ಬಗ್ಗೆ ಪ್ರಸ್ತಾವನೆ ಸಿದ್ಧವಾಗಿತ್ತು. ಹೊಸ ಪರವಾನಗಿ ಸಂಬಂಧ ಅಬಕಾರಿ ಖಾತೆ ಸಚಿವರು ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದ್ದರು.

    ಪ್ರಸ್ತಾವನೆ

    ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಗ್ರಾಮ ಪಂಚಾಯಿತಿಗಳಲ್ಲಿ (ಐದು ಸಾವಿರಕ್ಕಿಂತ ಕಡಿಮೆ ಜನ ಸಂಖ್ಯೆ ) ತಾರಾ ಹೋಟೆಲ್, ಹೋಟೆಲ್ ಮತ್ತು ಬೋರ್ಡಿಂಗ್‌ಗೆ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಇದನ್ನು ತೆಗೆದುಹಾಕಿ ಈ ಎಲ್ಲ ಕಡೆಯೂ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೆ ಆದಾಯ ಹೆಚ್ಚಾಗಲಿದೆ ಎಂಬ ಲೆಕ್ಕಾಚಾರ ಸರ್ಕಾರದ್ದಾಗಿತ್ತು.

    ನಿರಾತಂಕ

    ಜಿಲ್ಲಾ ಕೇಂದ್ರಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸೂಪರ್ ಮಾರ್ಕೆಟ್, ಹೈಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡುವ ಪ್ರಸ್ತಾವನೆ ಮಾತ್ರ ಇನ್ನೂ ಜೀವಂತವಾಗಿದೆ. ಸಿಎಲ್-2 ಎಂಬ ಹೊಸ ವಿಧಾನದ ಮದ್ಯದಂಗಡಿಗೆ ಪರವಾನಗಿ ನೀಡಲು ಉದ್ದೇಶಿಸಲಾಗಿದೆ. ಅದೇ ರೀತಿ 137 ಸ್ಥಳಗಳಲ್ಲಿ ಎಂಎಸ್‌ಐಎಲ್ ಮಳಿಗೆ ತೆರೆಯಲು ಇನ್ನೂ ಅವಕಾಶವಿದೆ. ಇದನ್ನು ಹರಾಜು ಹಾಕಲು ಕೂಡ ಅಬಕಾರಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts