More

    ಜಿಲ್ಲಾ ಕೇಂದ್ರದ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಿ ಮುಖ್ಯಮಂತ್ರಿಗೆ ಮನವಿ

    ಚಿತ್ರದುರ್ಗ:ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರವಿರುವ ನಮ್ಮ ತಾಲೂಕಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿವಿಧ ಸೌಲಭ್ಯಗಳಿಗೆ ಇರುವ ಫಲಾನುಭವಿಗಳ ಮಿತಿಯನ್ನು ಹೆಚ್ಚಿಸುವಂತೆ ರಾಜ್ಯಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ನಗರದ ಬಾಲಭವನದಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆ ಮತ್ತು ಪಶುಸಂಗೋಪನೆ ಇಲಾಖೆ ಕೃಷಿ ವಿಕಾಸ ಯೋಜನೆ ಯಡಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳ ಆಯ್ಕೆ ಕಾರ‌್ಯಕ್ರಮದಲ್ಲಿ ಮಾತನಾಡಿ,ಸರ್ಕಾರದ ಯಾವುದೇ ಸೌಲಭ್ಯಗಳು ಇರಲಿ ಅರ್ಹ ಫಲಾನುಭ ವಿಗಳ ಸಂಖ್ಯೆ ಸಹಜವಾಗಿ ಜಿಲ್ಲಾ ಕೇಂದ್ರವಿರುವ ತಾಲೂಕಿನಲ್ಲಿ ಹೆಚ್ಚಾಗಿರುತ್ತದೆ. ಆದ್ದರಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರಿ ಸೌಲಭ್ಯ ಗಳಡಿ ಆಯ್ಕೆ ಮಾಡುವ ಫಲಾನುಭವಿಗಳ ಸಂಖ್ಯೆ ಹೆಚ್ಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕೋರುವುದಾಗಿ ತಿಳಿಸಿದರು.

    ಉದ್ಯೋಗಿನಿ ಸೌಲಭ್ಯಕ್ಕೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದರಿಂದಾಗಿ ಅರ್ಜಿದಾರರ ಸಮ್ಮುಖದಲ್ಲೇ ಲಾಟರಿ ಮೂಲಕ ಫಲಾನುಭವಿಗಳ ಆ ಯ್ಕೆ ಮಾಡಲಾಗಿದೆ. ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಚಿತ್ರದುರ್ಗ ಮತ್ತು ಹಿರೇಗುಂಟನೂರು ಕಸಬಾ ವ್ಯಾಪ್ತಿಯ ಲ್ಲಿ ಪರಿಶಿಷ್ಟ ಜಾತಿ-1,ಪರಿಶಿಷ್ಟ ಪಂಗಡಕ್ಕೆ-2 ಹಾಗೂ ಇತರೆ ಸಮುದಾಯದ ಮೂವರನ್ನು ಆಯ್ಕೆ ಮಾಡಲಾಗಿದೆ.
    ಕೃಷಿ ವಿಕಾಸ ಯೋಜನೆಯಡಿ ಪರಿಶಿಷ್ಟ ಜಾತಿಗೆ -22,ಪರಿಶಿಷ್ಟ ಪಂಗಡದ-16,ಸಾಮಾನ್ಯ ಸಮುದಾಯದ -37 ಫಲಾನುಭವಿಗಳಿಗೆ ರಸ ಮೇವು ತಯಾರಿಸುವ ಕಿಟ್ ನೀಡಲಾಗಿದೆ. ಪಶು ಸಾಕಣೆಗೆ ಪೂರಕವಾಗಿರುವ ಕೌಮ್ಯಾಟ್‌ನ್ನು ಅರ್ಜಿ ಸಲ್ಲಿಸಿದ್ದ ಎಲ್ಲರಿಗೂ ವಿತರಿಸಲಾಗುತ್ತಿದೆ ಎಂದರು.

    ಮುಖ್ಯಮಂತ್ರಿ ಬಾಲಸೇವ ಯೋಜನೆಯಡಿ ಕೋವಿಡ್ ಸಂದರ್ಭದಲ್ಲಿ ಪಾಲಕರನ್ನು ಕಳೆದುಕೊಂಡಿದ್ದ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಸಿಡಿಪಿಒಗಳಾದ ಸುಧಾ,ಲೋಕೇಶಪ್ಪ,ಜಿಲ್ಲಾಅಭಿವೃದ್ಧಿ ನಿರೀಕ್ಷಕ್ಷಿ ಸುವರ್ಣಮ್ಮ,ಲೋಕೇಶಪ್ಪ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts