More

    ಜಾನಪದ ಮ್ಯೂಸಿಯಂ ಉಳಿವಿಗೆ ಕ್ರಮ; ಸಿಎಂ ಬೊಮ್ಮಾಯಿ ಭರವಸೆ | ರಸ್ತೆಗೆ ತಿಪ್ಪೇಸ್ವಾಮಿ ಹೆಸರಿಡಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ

    ಬೆಂಗಳೂರು: ಕಲಾವಿದ ಪಿ.ಆರ್. ತಿಪ್ಪೇಸ್ವಾಮಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನಿರ್ವಿುಸಿದ ಜಾನಪದ ವಸ್ತುಸಂಗ್ರಹಾಲಯ ಉಳಿಸಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಬೆಂಗಳೂರಿನ ರಸ್ತೆಗೆ ಅವರ ಹೆಸರಿಡಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

    ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ ಶನಿವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಪಿ.ಆರ್. ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಿಪ್ಪೇಸ್ವಾಮಿ ಬಹಳ ಆಸಕ್ತಿಯಿಂದ ಮೈಸೂರು ವಿವಿಯಲ್ಲಿ ಜಾನಪದ ವಸ್ತು ಸಂಗ್ರಹಾಲಯ ನಿರ್ವಿುಸಿದ್ದರು. ಈಗ ಅದು ದುರವಸ್ಥೆಯಲ್ಲಿದ್ದು, ಅಭಿವೃದ್ಧಿಪಡಿಸಬೇಕು ಎಂದು ಮನವಿ ಬಂದಿದ್ದು, ಕಾಯಕಲ್ಪ ನೀಡಲಾಗುವುದು ಎಂದರು.

    ತಿಪ್ಪೇಸ್ವಾಮಿ ಅವರ ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಮರು ಮುದ್ರಣ, ಕಲಾಕೃತಿಗಳ ಡಿಜಿಟಲೀಕರಣ, ಚಿತ್ರಕಲಾ ಪರಿಷತ್ತಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

    ಚಿತ್ರಕಲೆ ಯುಜನರಿಗೆ ಪ್ರೇರಣೆ: ಕನ್ನಡ ನಾಡು ಶ್ರೀಮಂತವಾಗಿರುವುದಕ್ಕೆ ಆರ್ಥಿಕತೆ ಒಂದೇ ಕಾರಣವಲ್ಲ. ಸಂಸ್ಕೃತಿ, ಸಂಸ್ಕಾರ, ಕಲೆ ಮತ್ತು ಸಾಹಿತ್ಯವೂ ಕಾರಣ. ಅದಕ್ಕೆ ಕೊಡುಗೆ ನೀಡಿದ ಕೆಲವೇ ಮಹನೀಯರಲ್ಲಿ ಪಿ.ಆರ್. ತಿಪ್ಪೇಸ್ವಾಮಿಯೂ ಒಬ್ಬರು. ಚಿತ್ರಕಲೆಗೆ ಜೀವದಾನ ಮಾಡುವ ಹಾಗೂ ಮುಂದಿನ ಜನಾಂಗಕ್ಕೆ ಪ್ರೇರಣೆ ನೀಡುವ ಶಕ್ತಿ ತಿಪ್ಪೇಸ್ವಾಮಿ ಕಲೆಗೆ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕು. ಹಾಗಾಗಿ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ, ಚಿತ್ರಕಲೆ ಪ್ರದರ್ಶನ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಬದುಕಿನ ಮಹತ್ವ: ಪಿ.ಆರ್. ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಅವರ ಬದುಕು ಎಷ್ಟು ಮಹತ್ವದ್ದಾಗಿತ್ತು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪ್ರತಿ ವ್ಯಕ್ತಿಯಲ್ಲಿ ಅಭೂತಪೂರ್ವ ಪ್ರತಿಭೆ ಮತ್ತು ಶಕ್ತಿ ಇರುತ್ತದೆ. ಅದು ಹುಟ್ಟಿನ ಉದ್ದೇಶ ಮತ್ತು ಸಾರ್ಥಕತೆಯನ್ನು ನಿರ್ಧರಿಸುತ್ತದೆ. ಯಾರೂ ತಮ್ಮ ಬದುಕಿನ ದಾರಿ ತಾವೇ ನಿರ್ಣಯ ಮಾಡುತ್ತಾರೋ ಅವರು ತಮ್ಮ ಬದುಕಿನ ಹೆಜ್ಜೆ ಗುರುತನ್ನು ಬಿಟ್ಟು ಹೋಗುತ್ತಾರೆ. ಅಂತಹವರ ಸಾಲಿನಲ್ಲಿ ತಿಪ್ಪೇಸ್ವಾಮಿಯೂ ಒಬ್ಬರು ಎಂದರು.

    ಮಾಜಿ ಸಚಿವ ಎಚ್.ಎಂ. ರೇವಣ್ಣ, ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ, ಸಂಚಾಲಕ ರುದ್ರಣ್ಣ ಹರ್ತಿಕೋಟೆ ಮತ್ತಿತರರಿದ್ದರು.

    ಇದನ್ನೂ ಓದಿ: VIDEO| ಉರ್ಫಿ ಜಾವೇದ್ ಹೊಸ ಅವತಾರ; ಮೈಮುಚ್ಚಿಕೊಳ್ಳಲು ಹಾವನ್ನೇ ಬಳಸಿದ ನಟಿ!

    ಕಲಾವಿದರ ಜೀವನ ಬಲುಕಷ್ಟ

    ಮನಸ್ಸಿಗೆ ಆನಂದ ನೀಡುವ ಚಿತ್ರಕಲೆ ಹಾಗೂ ಸಾಹಿತ್ಯ ಬದುಕನ್ನು ಕಷ್ಟಕ್ಕೆ ದೂಡುತ್ತದೆ. ಚಿತ್ರಕಲೆ ನೋಡಲು ವರ್ಣಮಯವಾಗಿರುವಷ್ಟು ಕಲಾವಿದನ ಜೀವನ ಇರುವುದಿಲ್ಲ. ಈಗಿನ ಚಿತ್ರಕಲಾಕಾರರ ಜೀವನ ಬಹಳ ಕಷ್ಟ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ತಿಪ್ಪೇಸ್ವಾಮಿ ಅವರು ಬಿಡಿಸಿರುವ ಚಿತ್ರಗಳು ಬಹಳ ಅದ್ಭುತವಾಗಿವೆ. ಅವು ಬಹುತೇಕ ಮಲೆನಾಡಿನ ಪ್ರಭಾವ ಹೊಂದಿವೆ. ಅವರು ಕೇವಲ ಚಿತ್ರಕಲೆಗೆ ಸೀಮಿತವಾಗದೆ ವಸ್ತುಸಂಗ್ರಹಾಲಯ ಮಾಡುವ ಪ್ರಯತ್ನ ಮಾಡಿದರು. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕು ಎಂದರು. ಇದಕ್ಕೂ ತಿಪ್ಪೇಸ್ವಾಮಿ ಅವರ ಚಿತ್ರಕಲಾ ಪ್ರದರ್ಶನವನ್ನು ಗಣ್ಯರೊಂದಿಗೆ ವೀಕ್ಷಿಸಿದರು.

    ಚಿತ್ರಕಲಾ ಪರಿಷತ್ತಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ತಿಪ್ಪೇಸ್ವಾಮಿ ಅವರು ಧರ್ಮಸ್ಥಳದ ಮಂಜುಷಾ ವಸ್ತು ಸಂಗ್ರಹಾಲಯ ನಿರ್ವಣದಲ್ಲೂ ಕೈಜೋಡಿಸಿದ್ದರು. ಚಿತ್ರಕಲೆಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ.
    | ಬಿ.ಎಲ್. ಶಂಕರ್ ಚಿತ್ರಕಲಾ ಪರಿಷತ್ ಅಧ್ಯಕ್ಷ

    ಕುಂಚಬ್ರಹ್ಮ ತಿಪ್ಪೇಸ್ವಾಮಿ ಅವರ ಜನ್ಮಶತಮಾನೋತ್ಸವವು ವರ್ಷಪೂರ್ತಿ ನಡೆಯಲಿದ್ದು, ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
    | ಶ್ರೀ ನಿರಂಜನಾನಂದಪುರಿ ಸ್ವಾಮೀಜಿ
    ಪೀಠಾಧ್ಯಕ್ಷರು, ಕನಕಗುರು ಪೀಠ ಕಾಗಿನೆಲೆ ಮಹಾಸಂಸ್ಥಾನ

    ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts