More

    ಸರ್ವಪಕ್ಷ ಸಭೆ ಕರೆದ ಸಿಎಂ, ಲಾಕ್​ಡೌನ್​ ಯಾವಾಗ ಗೊತ್ತಾ?

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕರೊನಾ ಅಟ್ಟಹಾಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಳೆ ಸರ್ವ ಪಕ್ಷ ಸಭೆ ಕರೆಯಲು ಸಿಎಂ ಬಿ.ಎಸ್​. ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

    ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಸಾವು-ನೋವಿನ ಪ್ರಮಾಣವೂ ಮಿತಿ ಮೀರುತ್ತಿದೆ. ಈ ಪೈಕಿ ಬೆಂಗಳೂರಿನಲ್ಲೇ ಹೆಚ್ಚು ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಕುರಿತು ನಾಳೆ ಸಿಎಂ ನೇತೃತ್ವದಲ್ಲಿ (ಶುಕ್ರವಾರ) ಬೆಂಗಳೂರಿನ ಸರ್ವ ಪಕ್ಷ ಶಾಸಕರ ಸಭೆ ನಡೆಯಲಿದೆ. ಇದನ್ನೂ ಓದಿರಿ ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು, ವಿದ್ಯಾರ್ಥಿಗಳಲ್ಲಿ ಹೆಚ್ಚಿದೆ ಆತಂಕ

    ಇವತ್ತು ನಾಳೆ ಕೋವಿಡ್ 19 ವಿಚಾರವಾಗಿ ಸರಣಿ ಸಭೆ ನಡೆಸಲಿದ್ದೇವೆ. ನಾಳೆ ಸರ್ವಪಕ್ಷಗಳ ಬೆಂಗಳೂರು ಶಾಸಕರ ಅಭಿಪ್ರಾಯ ಪಡೆಯೋಣ. ಕೋವಿಡ್ ವಿಚಾರವಾಗಿ ತಜ್ಞರಿಂದ ಅಂತಿಮ ವರದಿ ಕೂಡ ಬರಬೇಕಿದೆ. ಹೀಗಾಗಿ ಈಗಲೇ ಲಾಕ್​ಡೌನ್ ಮಾಡುವ ನಿರ್ಧಾರ ಮಾಡಲು ಸಾಧ್ಯವಿಲ್ಲ. ಸಚಿವರು ಭಿನ್ನ ಹೇಳಿಕೆ ನೀಡುತ್ತ ಸಾರ್ವಜನಿಕರಲ್ಲಿ ಲಾಕ್​ಡೌನ್ ಬಗ್ಗೆ ಗೊಂದಲ ಮೂಡಿಸಬಾರದು ಎಂದು ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ನಾಳೆ ನಡೆಯುವ ಸಭೆಯ ಪೂರ್ವಭಾವಿಯಾಗಿ ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಿಎಂ ಸಭೆ ನಡೆಸಿದರು. ಸೋಂಕು ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಿದರು. ಬೆಂಗಳೂರನ್ನು ಲಾಕ್​ಡೌನ್​ ಮಾಡಬೇಕೇ ಅಥವಾ ಬೇಡವೇ, ಸೋಂಕು ನಿಯಂತ್ರಣಕ್ಕೆ ಪರ್ಯಾಯ ಮಾರ್ಗ ಯಾವುದು… ಇವುಗಳ ಬಗ್ಗೆ ನಾಳೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

    ಸಿಎಂ ನೇತೃತ್ವದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು, ಕಂದಾಯ ಸಚಿವ ಆರ್.ಅಶೋಕ್, ಸಚಿವ ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಪೋಲಿಸ್ ಆಯುಕ್ತರು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

    ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts