More

    ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು, ವಿದ್ಯಾರ್ಥಿಗಳಲ್ಲಿ ಹೆಚ್ಚಿದೆ ಆತಂಕ

    ಬಳ್ಳಾರಿ: ಕಂಟೈನ್ಮೆಂಟ್ ಝೋನ್​ನಿಂದ ಬಂದ ವಿದ್ಯಾರ್ಥಿಯೊಬ್ಬ ವಾಹನ ಚಾಲಕನ ಎಡವಟ್ಟಿನಿಂದಾಗಿ ಎಲ್ಲರಂತೆ ಸಾಲಿನಲ್ಲಿ ನಿಂತು ಥರ್ಮಲ್​ ಸ್ಕ್ರೀನಿಂಗ್ ಮಾಡಿಸಿಕೊಂಡಿದ್ದಲ್ಲದೆ, ಕೊಠಡಿಯಲ್ಲಿ ಅವರೊಂದಿಗೇ ಪರೀಕ್ಷೆಗೂ ಕುಳಿತುಕೊಂಡಿದ್ದ. ಈ ಘಟನೆಯಿಂದಾಗಿ ಪರೀಕ್ಷೆಗೆ ಕುಳಿತಿದ್ದ ಇತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಆವರಿಸಿದೆ.

    ಕಂಪ್ಲಿಯ ಎಸ್​ಜೆಎಸ್​ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಕಂಟೈನ್ಮೆಂಟ್ ಝೋನ್​ನಿಂದ ವಿದ್ಯಾರ್ಥಿಯೊಬ್ಬ ಆಗಮಿಸಬೇಕಾಗಿತ್ತು. ಆತನನ್ನು ವಿಶೇಷ ವಾಹನ ಮೂಲಕ ಕರೆತರಲು ನೋಡಲ್ ಅಧಿಕಾರಿಯನ್ನು ನಿಯಮಿಸಲಾಗಿತ್ತು. ಬೆಳಗ್ಗೆ 7ರಿಂದ 8.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಯನ್ನು ತಂದು ಒಪ್ಪಿಸುವ ಹೊಣೆ ನೀಡಲಾಗಿತ್ತು. ಆದರೆ, ಆ ಪರೀಕ್ಷಾರ್ಥಿಯನ್ನು ಕರೆತಂದ ಡ್ರೈವರ್​, 7.15ಕ್ಕೆ ಶಾಲೆ ಗೇಟ್ ಬಳಿಯೇ ಬಿಟ್ಟು ಹೋಗಿದ್ದಾನೆ. ಬಳಿಕ ಎಲ್ಲರಂತೆ ಸಾಲಿನಲ್ಲಿ ನಿಂತು ಥರ್ಮಲ್​ ಸ್ಕ್ರೀನಿಂಗ್ ಮಾಡಿಸಿಕೊಂಡ ಆ ವಿದ್ಯಾರ್ಥಿ, ಕೊಠಡಿಯಲ್ಲಿ ಪರೀಕ್ಷೆಗಾಗಿ ಕುಳಿತಿದ್ದಾನೆ.

    ಇದನ್ನೂ ಓದಿರಿ ಎಸ್​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ದುರಂತ ಅಂತ್ಯಕಂಡ ವಿದ್ಯಾರ್ಥಿನಿ

    ಇತ್ತ ಪರೀಕ್ಷಾ ಮುಖ್ಯ ಅಧೀಕ್ಷಕಿ ಶಕುಂತಲ ಅವರು ವಿಶೇಷ ಪರೀಕ್ಷಾರ್ಥಿಗಾಗಿ ಗೇಟ್ ಬಳಿಯೇ ಕಾಯುತ್ತ ನಿಂತಿದ್ದರು. ಕೊನೆಗೆ 9.30 ಆದರೂ ಪರೀಕ್ಷಾರ್ಥಿಯ ಸುಳಿವಿರದಿದ್ದರಿಂದ ಚಾಲಕನಿಗೆ ಫೋನ್​ ಮಾಡಿ ವಿಚಾರಿಸಿದರು. ಆತನಾಗಲೇ ಪರೀಕ್ಷಾ ಕೇಂದ್ರ ತಲುಪಿದ್ದಾಗಿ ಚಾಲಕ ಹೇಳುತ್ತಿದ್ದಂತೆ ಪರೀಕ್ಷಾ ಕೋಣೆಗೆ ತೆರಳಿ ಆತನನ್ನ ಗುರುತಿಸಿ, ವಿಶೇಷ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.

    ಈ ಘಟನೆಯಿಂದ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮನೆಮಾಡಿತ್ತು.

    ಥರ್ಮಲ್​ ಸ್ಕ್ರೀನಿಂಗ್​ ವೇಳೆ ಕುಸಿದುಬಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts