More

    ಕರೊನಾ ಕಂಟಕದ ಕಾರಣ ರಾಜ್ಯದ ಜನತೆಗೆ ವಿಶೇಷ ಪ್ಯಾಕೇಜ್​ ಘೋಷಿಸಿದ ಸಿಎಂ ಬಿಎಸ್​ವೈ

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ರಾಜ್ಯವನ್ನು ಸರ್ಕಾರ ಸ್ತಬ್ಧ ಮಾಡಿದ್ದು, ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ.

    ವಿಧಾನಸಭೆಯ ಬಜೆಟ್​ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಬಿಎಸ್​ವೈ, ರಾಜ್ಯದ 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1 ಸಾವಿರ ರೂ., ಬಿಪಿಎಲ್ ಕಾರ್ಡು​ದಾರರಿಗೆ ಮುಂಗಡವಾಗಿ ಎರಡು ತಿಂಗಳು ಪಡಿತರ ವಿತರಣೆ, ಮನರೇಗಾ ಹೆಚ್ಚುವರಿ ಮಾನವ ದಿನ ಸೃಷ್ಟಿಸಿ ಎರಡು ತಿಂಗಳ ಮುಂಗಡ ಹಣ ಪಾವತಿ ಮತ್ತು ಬಡವರ ಬಂಧು ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದರು.

    ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಅನೇಕ ಸದಸ್ಯರು ಕೊಟ್ಟ ಸಲಹೆಗಳನ್ನು ಗಮನಿಸಿದ್ದೇನೆ. ಕೋವಿಡ್-19 ಕಾರಣಕ್ಕೆ ಜನ ಆತಂಕದಲ್ಲಿ ಇದ್ದಾರೆ. ನಾನು ಅಧಿಕಾರ ಸ್ವೀಕರಿಸಿದ ವೇಳೆ ಪ್ರವಾಹ ಬಂದಿತ್ತು. ನಾನು ಒಬ್ಬನೇ ನೆರೆ ಪೀಡಿತ ಪ್ರದೇಶಗಳಲ್ಲಿ ಓಡಾಡಿ ಕೆಲಸ ಮಾಡಿದ್ದೇನೆ. ದೇಶದಲ್ಲಿ ಎಲ್ಲೂ ನೀಡದಷ್ಟು ಪರಿಹಾರ ಕೊಟ್ಟಿದ್ದೇನೆ. ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ನಾನು ಅಧಿಕಾರ ಸ್ವೀಕರಿಸಿದ ವೇಳೆ ಯಾವ ಅತಂಕ ಇತ್ತೋ ಈಗಲು ಅದೇ ಪರಿಸ್ಥಿತಿ ಇದೆ. ಕರೋನಾ ಇಡೀ ಜಗತ್ತನ್ನು ಬಾಧಿಸುತ್ತಿದೆ. ಒಂದು ತಿಂಗಳ ಹಿಂದೆ ಕರೊನಾ ಸಂಬಂಧ ಮೊದಲ ವರದಿ ಬಂದಾಗ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದಿಂದ ಈ ಬಾರಿ 11,887 ಕೋಟಿ ರೂ. ಕಡಿತವಾಗಿದೆ. ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ‌. ನಮ್ಮ ಪಾಲಿನ ಹಣ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಸಾಲಿಗೆ ಸೇರಿದ ಕಾರಣದಿಂದಾಗಿ ಬಿಹಾರಕ್ಕಿಂತ ನಮಗೆ ಕಡಿಮೆ ಅನುದಾನ ದೊರಕಿದೆ. ಈ ತಾಂತ್ರಿಕ ಸಮಸ್ಯೆ ಬಗೆಹರಿಸುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಇದು ಕೊನೆಯ ಎಚ್ಚರಿಕೆ ಮನೆಬಿಟ್ಟು ಹೊರಗಡೆ ಓಡಾಡಿದರೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ: ಸಿಎಂ ಬಿಎಸ್​ವೈ ಎಚ್ಚರಿಕೆ

    ನ್ಯಾಯಾಲಯಗಳಿಗೆ ಇಂದಿನಿಂದ ರಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts