More

    ನ್ಯಾಯಾಲಯಗಳಿಗೆ ಇಂದಿನಿಂದ ರಜೆ

    ಬೆಂಗಳೂರು: ಕರೊನಾ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಮಾ.24ರಿಂದ ಏ.6ರವರೆಗೆ ರಜೆ ಘೊಷಿಸಲಾಗಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದು, ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಹೈಕೋರ್ಟ್ ಪೂರ್ಣಪೀಠದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್ ಪೀಠಗಳ ದಿನನಿತ್ಯದ ಕಾರ್ಯ ಕಲಾಪ ಏ.6ರವರೆಗೆ ಸ್ಥಗಿತಗೊಳ್ಳಲಿದೆ. ತುರ್ತು ಪ್ರಕರಣಗಳ ವಿಚಾರಣೆಗೆ ಬೆಂಗಳೂರಿನಲ್ಲಿ 3 ವಿಶೇಷ ಪೀಠಗಳನ್ನು ರಚಿಸಲಾಗಿದೆ. ಈ ಪೀಠಗಳು ಮಾ.24, 26ರಂದು ಕಾರ್ಯ ನಿರ್ವಹಿಸಿದರೆ ಧಾರವಾಡ, ಕಲಬುರಗಿಯಲ್ಲಿ 2 ವಿಶೇಷ ಪೀಠಗಳಲ್ಲಿ ಮಾ.24ರಂದು ಕಲಾಪ ನಡೆಯಲಿದೆ.

    ಎಲ್ಲ ಜಿಲ್ಲಾ ಹಾಗೂ ತಾಲೂಕಿನ ವಿಚಾರಣಾ ನ್ಯಾಯಾಲಯಗಳು, ಕಾರ್ವಿುಕ, ಕೈಗಾರಿಕಾ ಹಾಗೂ ಕೌಟುಂಬಿಕ ನ್ಯಾಯಾಲಯಗಳಿಗೂ ಏ.6ವರೆಗೆ ರಜೆ ಘೊಷಿಸಲಾಗಿದೆ. ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾ. 24, 27, 31 ಹಾಗೂ ಏ.2ರಂದು ಉಸ್ತುವಾರಿ ಕೋರ್ಟ್​ಗಳು ನಡೆಸಲಿವೆ. ಇತರ ಕೋರ್ಟ್​ಗಳು ಕಾರ್ಯ ನಿರ್ವಹಿಸುವುದಿಲ್ಲ.

    ‘ಕರೊನಾ’ ಹಮ್ ಕ್ಯಾ ಕರೊನಾ: ಪವನ್ ಒಡೆಯರ್ ಧ್ವನಿ, ಪ್ರಥಮ್ ಪಂಚಿಂಗ್ ಡೈಲಾಗ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts