More

    ಸಿಎಂ ಬಿಎಸ್​ವೈ ಹುಟ್ಟುಹಬ್ಬ ವಿಶೇಷ: ಓಡಾಟವೇ ಉತ್ಸಾಹದ ಗುಟ್ಟು

    ಯಡಿಯೂರಪ್ಪ ಜೀವನದುದ್ದಕ್ಕೂ ವಿಶ್ರಾಂತಿಯಲ್ಲಿದ್ದ ದಿನಗಳೇ ಕಡಿಮೆ ಎನ್ನಬಹುದಾದ ಹೋರಾಟದ ಜೀವನ ಅವರದ್ದು. ಓಡಾಟವೇ ಅವರ ಉತ್ಸಾಹದ ಗುಟ್ಟು. ಊಟ ಬಿಟ್ಟಾರು, ನಿದ್ದೆ ಕೆಟ್ಟರೂ ಸರಿ ಓಡಾಟ ಬಿಡಲ್ಲ ಎಂಬುದು ಅವರ ಸೂತ್ರ.

    ಒಂದು ಕಡೆ ಜನರ ಸಮಸ್ಯೆಗೆ ದನಿಯಾಗಿ ರಾಜ್ಯ ಸುತ್ತಿದರೆ, ಮತ್ತೊಂದು ಕಡೆ ಪಕ್ಷಕ್ಕಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದ್ದಾರೆ. ಈ ಕಾಲಘಟ್ಟದ ರಾಜಕಾರಣದಲ್ಲಿ ಅತಿ ಹೆಚ್ಚು ಬಾರಿ ರಾಜ್ಯ ಸುತ್ತಾಡಿದವರು ಇವರೇ ಇರಬಹುದೇನೋ. ಕಳೆದೊಂದು ದಶಕದಲ್ಲಿ ಹೆಲಿಕಾಪ್ಟರ್​ನಲ್ಲಿ ಒಂದಷ್ಟು ಓಡಾಟ ಮಾಡಿದ್ದು ಬಿಟ್ಟರೆ, ಹಿಂದಿನ ನಾಲ್ಕು ದಶಕದಲ್ಲಿ ರೈಲು, ಕಾರು, ಬಸ್ಸಿನಲ್ಲೇ ಓಡಾಡಿದ್ದಾರೆ. ಅವರು ತಲುಪದ ರಾಜ್ಯದ ಮೂಲೆಗಳಿಲ್ಲ. ತಾವೆಲ್ಲೇ ಇದ್ದರೂ ರಾಜ್ಯದ ಯಾವ ಭಾಗದ ರಾಜಕೀಯ, ಸಾಮಾಜಿಕ ಪರಿಸ್ಥಿತಿ ಏನಿದೆ? ಅಲ್ಲಿನ ಸ್ಥಳೀಯ ನಾಯಕರು, ಅವರ ಪ್ರಭಾವ ಎಷ್ಟಿದೆ ಎಂದು ಹೇಳುವಷ್ಟು ವಾತಾವರಣವನ್ನು ಅವರು ಅರೆದು ಕುಡಿದಿದ್ದಾರೆ. 2

    018ರ ವಿಧಾನಸಭೆ ಚುನಾವಣೆಗೆ ಮುನ್ನ ಇಡೀ ರಾಜ್ಯದ 224 ವಿಧಾನಸಭಾ ಕ್ಷೇತ್ರಕ್ಕೂ ಯಾತ್ರೆ ಮಾಡಿ ಬಂದರು. ಆಗ ಅವರ ವಯಸ್ಸು 74. ಈ ಸಂದರ್ಭದಲ್ಲೂ ಅವರಿಗೆ ಅದೇ 24ರ ಚೈತನ್ಯ, ಉತ್ಸಾಹ. ನೀವು ಇಷ್ಟೆಲ್ಲ ಸಂಚರಿಸುತ್ತೀರಲ್ಲ ದಣಿವಾಗುವುದಿಲ್ಲವೇ, ರಾಜಕೀಯಕ್ಕೆ ವಿರಾಮ ಇಲ್ಲವೇ ಎಂಬ ‘ವಿಜಯವಾಣಿ’ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದ ಯಡಿಯೂರಪ್ಪ, ‘ಓಡಾಟ ಬಿಟ್ಟೆನೆಂದರೆ ಅಲ್ಲಿಗೆ ನನ್ನ ಕತೆ ಮುಗಿಯಿತು ಎಂದೇ ಅರ್ಥ. ನನ್ನ ಜೀವನದಲ್ಲಿ ವಿರಾಮ ಎಂಬುದು ಇಲ್ಲವೇ ಇಲ್ಲ. ನಾನು ಎಷ್ಟು ಓಡಾಡುತ್ತೇನೋ ಅಷ್ಟು ಆರೋಗ್ಯವಾಗಿರುತ್ತೇನೆ’ ಎಂದು ನಕ್ಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts