More

    ಕಾನೂನು ಸುವ್ಯವಸ್ಥೆ ಕಾಪಾಡುವುದು ಎಲ್ಲ ಪಕ್ಷಗಳ ಜವಾಬ್ದಾರಿ; ಸಿಎಂ ಬೊಮ್ಮಾಯಿ ಹೇಳಿಕೆ

    ಹುಬ್ಬಳ್ಳಿ: ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿ ಆಗಿರುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸ ವಿಚಾರಗಳ ಬಗ್ಗೆ ಪರ – ವಿರೋಧ ಅಭಿಪ್ರಾಯಗಳು ಇರುವುದು ಸಹಜ. ಅದನ್ನು ರಾಜಕೀಯಕರಣ ಮಾಡಬಾರದು ಎಂದರು.

    ಪ್ರಜಾಪ್ರಭುತ್ವ ಜವಾಬ್ದಾರಿ ಅರಿತು ಯಾವ ವಿಷಯವನ್ನು ಎಷ್ಟರಮಟ್ಟಿಗೆ ಒಯ್ಯಬೇಕು ಎಂಬುದನ್ನು ಅರಿತು ಕೆಲಸ ಮಾಡಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಯಾರೂ ಕೂಡ ಮಾಡಬಾರದು ಎಂದು ಹೇಳಿದರು. ಇಂದಿರಾ ಗಾಂಧಿ ಅವರು ವೀರ ಸಾವರ್ಕರ್ ಅವರನ್ನು ದೇಶದ ಶ್ರೇಷ್ಠ ಪುತ್ರ ಎಂದು ಬಣ್ಞಿಸಿದ್ದರು. ಆದರೆ, ಅದೇ ಕಾಂಗ್ರೆಸ್ ನ ಮಣಿಶಂಕರ ಅಯ್ಯರ್ ಅವರು ಸಾವರ್ಕರ್ ಅವರನ್ನು ಅವಮಾನಿಸಿದ್ದರು. ಇತಿಹಾಸದ ವಿಚಾರಗಳ ಬಗ್ಗೆ ಕೆಲವರು ನಂಬಿಕೆ ಇಡುತ್ತಾರೆ. ಕೆಲವರು ವಿರೋದ ವ್ಯಕ್ತ ಪಡಿಸುತ್ತಾರೆ. ಹಾಗಂತ ಬೀದಿಗೆ ಎಳೆದು ತರಬಾರದು ಎಂದರು.

    ಶೀಘ್ರದಲ್ಲೇ ಕಳಸಾ ಬಂಡೂರಿ ಕಾಮಗಾರಿ

    ಕಳಸಾ ಬಂಡೂರಿ, ಮಹದಾಯಿ ಯೋಜನೆ ನೆನಗುದಿಗೆ ಬಿದ್ದಿಲ್ಲ. ಈಗಾಗಲೇ ಸಾಕಷ್ಟು ಪ್ರಗತಿಯಾಗಿದೆ. ಅರಣ್ಯ ಮತ್ತು ಪರಿಸರ ಸಂಬಂಧಿ ವಿಷಯ ಹಾಗೂ ಸಿಡಬ್ಲ್ಯುಸಿ ಅನುಮೋದನೆ ಅಂತಿಮ‌ ಹಂತದಲ್ಲಿದೆ. ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts