More

    ಜ.28ರಂದು ನನ್ನ ಆರು ತಿಂಗಳ ಸಾಧನೆ ಕುರಿತು ಜನರ ಮುಂದಿಡುವೆ: ಸಿಎಂ ಬೊಮ್ಮಾಯಿ

    ಬೆಂಗಳೂರು: ಜನವರಿ 28ಕ್ಕೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿ ಆರು ತಿಂಗಳು ತುಂಬಲಿದೆ. ಅದೇ ದಿನ ಸಾಧನೆ ರಿಪೋರ್ಟ್ ಕಾರ್ಡ್ ಜನರ ಮುಂದಿಡುವೆ. ಪುಸ್ತಕ ರೂಪದಲ್ಲೂ ಬಿಡುಗಡೆ ಮಾಡುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

    ಆರ್​ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಿಎಂ, ಆರು ತಿಂಗಳಲ್ಲಿ ತೆಗೆದುಕೊಂಡ ನಿರ್ಧಾರ, ಹೊಸ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಮುಂತಾದ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವೆ ಎಂದರು.

    ನನ್ನ ಮುಂದಿಲ್ಲ: ನಿಗಮ- ಮಂಡಳಿಗಳ ಪುನರ್, ಖಾಲಿಯಿರುವ ನಿಗಮದ ಹುದ್ದೆಗಳ ಭರ್ತಿ ಪ್ರಸ್ತಾಪ ನನ್ನ ಮುಂದಿಲ್ಲ. ಪಕ್ಷವೇ ಈ ಬಗ್ಗೆ ಚರ್ಚಿಸಿ ನೀಡಲಿರುವ ಪ್ರಸ್ತಾವನೆ ಅನುಸಾರ ಮುಂದೇನು ಮಾಡಬೇಕೆಂದು ಯೋಚಿಸಿ ತೀರ್ಮಾನಿಸುವೆ ಎಂದು ಸಿಎಂ ಹೇಳಿದರು.

    ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳ ಭರ್ತಿ‌ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರುವೆ. ವರಿಷ್ಠರು ಈ ಕುರಿತು ಚರ್ಚಿಸಿ ಮಾತುಕತೆಗೆ ಕರೆದರೆ ದೆಹಲಿಗೆ ತೆರಳಿ ವಿವರ ಒದಗಿಸಲು ಸಿದ್ಧ. ಖಾಲಿ ಸಚಿವ ಸ್ಥಾನಗಳಿಗೆ ಆಕಾಂಕ್ಷಿಗಳಿರುವುದು‌ ಸಹಜ. ಆ ಕುರಿತು ಬೇಡಿಕೆ ಮಂಡಿಸುವುದು ತಪ್ಪೇನಲ್ಲ ಎಂದು ಹೇಳಿದರು.

    ಸಚಿವ ಉಮೇಶ್ ಕತ್ತಿ ತಮ್ಮ ನಿವಾಸದಲ್ಲಿ ರಹಸ್ಯ ಸಭೆ ನಡೆಸಿರುವುದು ಗೊತ್ತಿಲ್ಲ. ನೀವೇ (ಮಾಧ್ಯಮದವರು) ರಹಸ್ಯ ಸಭೆ ಎನ್ನುತ್ತಿದ್ದೀರಿ, ಹಾಗಿದ್ದ ಮೇಲೆ ನನಗೆ ಗೊತ್ತಾಗುವುದು ಹೇಗೆ? ಆಪ್ತರ ಜತೆ ಸೇರಿಕೊಂಡು ಮಾತನಾಡಿದ ಮಾತ್ರಕ್ಕೆ ರಹಸ್ಯ ಸಭೆ ಎಂದು ಬೇರೆ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ ಎಂದರು.

    ಜ.25ಕ್ಕೆ ಸಭೆ: ಹಣಕಾಸು ಇಲಾಖೆಯೊಂದಿಗೆ ಜ.25ರಂದು ಮತ್ತೊಂದು ಸುತ್ತಿನ ಆಂತರಿಕ ಸಭೆ ನಡೆಸುವೆ. ಇದಾದ ಬಳಿಕ ಇಲಾಖಾವಾರು ಬಜೆಟ್ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸಬೇಕೆಂದಿರುವೆ ಎಂದು ಬೊಮ್ಮಾಯಿ‌ ತಿಳಿಸಿದರು.

    ಸಿದ್ಧಗಂಗಾ ಮಠದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ: ಭಯದ ವಾತಾವರಣ ಸೃಷ್ಟಿ

    10 ರೂ. ಕೊಡೋ ಯೋಗ್ಯತೆ ಇಲ್ಲ, ಕಾರ್ ತಗೋತೀಯಾ? ಎಂದ ಶೋ ರೂಂ ಸಿಬ್ಬಂದಿಗೆ 1 ತಾಸಲ್ಲೇ ಶಾಕ್​ ಕೊಟ್ಟ ಯುವರೈತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts