More

    ರಾಜ್ಯದ ಅಭಿವೃದ್ಧಿಗೆ ಮೂರು ‘E’ ಮಂತ್ರ ಜಪಿಸಿದ ಸಿಎಂ ಬೊಮ್ಮಾಯಿ

    ಬೆಂಗಳೂರು: ರಾಜ್ಯದಲ್ಲಿ ಎದುರಾಗಲಿರುವ ಸಾಲುಸಾಲು ಚುನಾವಣೆ ಸವಾಲುಗಳು ಮತ್ತು ಕರೊನಾ ಬಿಕ್ಕಟ್ಟಿನಿಂದ ಉಂಟಾಗಿರುವ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು (ಮಾ.4) ತಮ್ಮ ಚೊಚ್ಚಲ ಆಯವ್ಯಯವನ್ನು ಮಂಡಿಸುತ್ತಿದ್ದಾರೆ.

    ಬಜೆಟ್​ ಆರಂಭದಲ್ಲಿ ಮೂರು ‘E’ ಮಂತ್ರಗಳನ್ನು ಜಪಿಸಿದ ಸಿಎಂ ಬೊಮ್ಮಾಯಿ, ಶಿಕ್ಷಣ (Education), ಉದ್ಯೋಗ (Employment) ಮತ್ತು ಸಬಲೀಕರಣ (Empowerment)ದ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದರು.

    ಕೋವಿಡ್ ನಡುವೆಯೂ ರಾಜ್ಯವು ಪ್ರಗತಿಯತ್ತ ಮುನ್ನಡೆಯುತ್ತಿದೆ. ವಿವಿಧ ಇಲಾಖೆಗಳ ಸಹಕಾರದಿಂದ ಕೋವಿಡ್ ನಿಯಂತ್ರಣ ಸಾಧ್ಯವಾಗಿದೆ. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಬಜೆಟ್​ ಮಂಡನೆಯ ಆರಂಭದಲ್ಲಿ ಬೊಮ್ಮಾಯಿ ಅವರು ಹೇಳಿದರು.

    ಕೃಷಿ, ಕೈಗಾರಿಕೆಯಲ್ಲಿ ಹೆಚ್ಚಿನ ಪಾಲುದಾರಿಕೆ ತರಲಾಗುತ್ತಿದೆ. ನವ ಭಾರತಕ್ಕಾಗಿ ನವಕರ್ನಾಟಕವನ್ನು ರೂಪಿಸಲಾಗುತ್ತಿದೆ. ಅತಿವೃಷ್ಟಿಯಿಂದ ಅಪಾರ ಹಾನಿಯುಂಟಾಗಿದೆ. ರಾಜ್ಯವು ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಮತ್ತು ಕೋವಿಡ್ ಸಂಕಷ್ಟ ಎದುರಿಸುತ್ತಿದೆ ಎಂದು ಬಜೆಟ್ ಮಂಡನೆ ವೇಳೆ ಸಿಎಂ ಬೊಮ್ಮಾಯಿ ಹೇಳಿದರು.

    LIVE| ಬಜೆಟ್​ ಮಂಡನೆ… ತಜ್ಞರ ಚರ್ಚೆ-ವಿಶ್ಲೇಷಣೆ ಜತೆಗೆ ಕ್ಷಣ ಕ್ಷಣದ ಮಾಹಿತಿಯ ನೇರಪ್ರಸಾರ

    ಬೊಮ್ಮಾಯಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಆದ್ರೆ ಹಿಂದಿರುವವರು ಪರ್ಮಿಷನ್ ಕೊಡ್ಬೇಕಲ್ವಾ?: ಎಚ್​ಡಿಕೆ

    ಸಿಎಂ ಆಗಿ ಮೊದಲ ಬಜೆಟ್​ ಮಂಡನೆ: ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts