More

    LIVE| ಬಜೆಟ್​ ಮಂಡನೆ… ತಜ್ಞರ ಚರ್ಚೆ-ವಿಶ್ಲೇಷಣೆ ಜತೆಗೆ ಕ್ಷಣ ಕ್ಷಣದ ಮಾಹಿತಿಯ ನೇರಪ್ರಸಾರ

    ರಾಜ್ಯದಲ್ಲಿ ಎದುರಾಗಲಿರುವ ಸಾಲುಸಾಲು ಚುನಾವಣೆ ಸವಾಲುಗಳು ಮತ್ತು ಕರೊನಾ ಬಿಕ್ಕಟ್ಟಿನಿಂದ ಉಂಟಾಗಿರುವ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು (ಮಾ.4) ತಮ್ಮ ಚೊಚ್ಚಲ ಆಯವ್ಯಯ ಮಂಡನೆಯನ್ನು ಆರಂಭಿಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಬಜೆಟ್​ ಮಂಡನೆ ಆರಂಭವಾಗಿದೆ. ಬಜೆಟ್​ ಕುರಿತ​ ಕ್ಷಣದ ಕ್ಷಣದ ಮಾಹಿತಿಯನ್ನು ಆರ್ಥಿಕ ಹಾಗೂ ರಾಜಕೀಯ ಪರಿಣಿತರ ಚರ್ಚೆ ಮತ್ತು ವಿಶ್ಲೇಷಣೆಯೊಂದಿಗೆ ಈ ಕೆಳಗಿನ ದಿಗ್ವಿಜಯ ನ್ಯೂಸ್ 24×7 ಫೇಸ್​ಬುಕ್​ ಪೇಜ್ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.​​

    ಜನಪ್ರಿಯತೆಯ ಜತೆಗೆ ರಾಜಸ್ವ ಹೆಚ್ಚಳದ ಮೂಲಕ ವಿತ್ತೀಯ ಶಿಸ್ತು ಕಾಪಾಡಲು ಮಾಡುವ ಕಸರತ್ತುಗಳೇನೆಂಬುದು ಕುತೂಹಲಕ್ಕೆ ಎಡೆ ಮಾಡಿದೆ. ಮುಂದಿನ ವರ್ಷ ಏಪ್ರಿಲ್-ಮೇನಲ್ಲಿ ವಿಧಾನಸಭೆ, ಅದಕ್ಕೂ ಮೊದಲೇ ಜಿಪಂ-ತಾಪಂ ಹಾಗೂ ಬಿಬಿಎಂಪಿಗೆ ಚುನಾವಣೆ ನಡೆಯಬೇಕಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದುರುಳಿಸುವ ತಂತ್ರಗಾರಿಕೆಯನ್ನು ಬೊಮ್ಮಾಯಿ ಮೆರೆಯುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts