More

    ಮೋದಿ-ಷಾ ಜೊತೆಯಾಗಿ ಚುನಾವಣೆ ಎದುರಿಸಲಾಗದ್ದಕ್ಕೆ ಏಜೆನ್ಸಿ ಸಹಾಯ ಪಡೆಯುತ್ತಿದ್ದಾರೆ: ಸಿಎಂ ಭೂಪೇಶ್ ಬಘೇಲ

    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಯಾಗಿ ಚುನಾವಣೆ ಎದುರಿಸಲಾಗದ್ದಕ್ಕೆ ಏಜೆನ್ಸಿಗಳ ನೆರವು ಪಡೆಯುತ್ತಿದ್ದಾರೆ ಎಂದು ಛತ್ತೀಸ್​​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ ಗಂಭೀರ ಆರೋಪ ಮಾಡಿದ್ದಾರೆ.

    ಜಾರಿ ನಿರ್ದೇಶನಾಲಯ ಕೋಟಿಗಟ್ಟಲೆ ಹಣ ವಶಪಡಿಸಿಕೊಂಡ ಬಳಿಕ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು ಪ್ರತಿಯಾಗಿ ಮೋದಿ-ಷಾ ಬಗ್ಗೆ ಈ ಆರೋಪವನ್ನು ಮಾಡಿದ್ದಾರೆ.

    ಈ ಮೊದಲೇ ಹೇಳಿದಂತೆ ಬಿಜೆಪಿಯು ಛತ್ತೀಸ್​ಗಢ ಚುನಾವಣೆಯಲ್ಲಿ ಇಡಿ, ಐಟಿ, ಡಿಆರ್​ಐ ಮತ್ತು ಸಿಬಿಐ ಮುಂತಾದವುಗಳ ಸಹಾಯ ಪಡೆದುಕೊಳ್ಳುತ್ತಿದೆ ಎಂದು ಬಘೇಲ ಆರೋಪಿಸಿದ್ದಾರೆ. ಅದರಲ್ಲೂ ಜಾರಿ ನಿರ್ದೇಶನಾಲಯ ತಮ್ಮ ತೇಜೋವಧೆ ಮಾಡಲು ಪ್ರಯತ್ನಿಸಿದೆ. ಇಲ್ಲಿನ ಜನಪ್ರಿಯ ಕಾಂಗ್ರೆಸ್ ಸರ್ಕಾರವನ್ನು ಇಡಿ ಮೂಲಕ ಕೇಂದ್ರ ಸರ್ಕಾರ ತೇಜೋವಧೆ ಮಾಡಲು ಹೊರಟಿದೆ ಎಂದೂ ಅವರು ಹೇಳಿದ್ದಾರೆ.

    ಇದನ್ನೂ ಓದಿ: ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

    ಮಹದೇವ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಆಪ್ತರ ಮನೆಗಳ ಮೇಲೆ ದಾಳಿ ಮಾಡಿರುವ ಇಡಿ, ಒಬ್ಬ ಅಪರಿಚಿತ ವ್ಯಕ್ತಿಯ ಹೇಳಿಕೆ ಮೇರೆಗೆ ನಾನು 508 ಕೋಟಿ ರೂ. ಪಡೆದಿದ್ದೇನೆ ಎಂದು ಆರೋಪಿಸಿದೆ. ಇಂಥ ಒಂದು ಆರೋಪವನ್ನು ಇಡಿ ನಾಜೂಕಾಗಿಯೇ ಮಾಡಿದೆ. ಅಂದರೆ ಹೇಳಿಕೆ ಇನ್ನೂ ತನಿಖಾ ಹಂತದಲ್ಲಿದೆ ಎಂದೂ ಇಡಿ ಹೇಳಿದೆ. ಹಾಗಾದರೆ ತನಿಖೆ ಇನ್ನೂ ಪೂರ್ತಿ ಆಗುವ ಮುಂಚೆಯೇ ಮಾಧ್ಯಮ ಹೇಳಿಕೆ ಪ್ರಕಟಿಸಿರುವುದು ಇಡಿಯ ದುರುದ್ದೇಶವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಚುನಾವಣಾ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಎಲ್ಲವೂ ಚುನಾವಣಾ ಆಯೋಗದ ಕೈಯಲ್ಲಿದೆ. ಪೊಲೀಸರ ಜತೆಗೆ ಸಿಆರ್​​ಪಿಎಫ್ ಕೂಡ ತನಿಖೆ ನಡೆಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಅಷ್ಟೊಂದು ದೊಡ್ಡ ಮೊತ್ತ ಛತ್ತೀಸ್​ಗಢದೊಳಗೆ ಹೇಗೆ ಬಂತು ಎಂಬುದಾಗಿಯೂ ಅವರು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ-ಷಾ ಜೊತೆಯಾಗಿ ಚುನಾವಣೆ ಎದುರಿಸಲಾಗದ್ದಕ್ಕೆ ಈ ಏಜೆನ್ಸಿಗಳ ನೆರವು ಪಡೆಯುತ್ತಿದ್ದಾರೆ. ಆದರೆ ಕಾಂಗ್ರೆಸ್​ ಇಡಿ-ಐಟಿಯಂಥ ಏಜೆನ್ಸಿಗಳ ವಿರುದ್ಧ ಹೋರಾಡಲು ಸಿದ್ಧವಿದೆ. ನಾವು ಹೋರಾಡಿ ಗೆಲ್ಲುತ್ತೇವೆ ಎಂದು ಬಘೇಲ ಹೇಳಿದ್ದಾರೆ.

    ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

    ಚಿತ್ರರಂಗದ ಮಂದಿಗೆ ಸಂತಸದ ಸುದ್ದಿ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts