More

    ಸಚಿನ್ ಪೈಲಟ್​ ನಿಷ್ಪ್ರಯೋಜಕ…ಪಕ್ಷದ ಬೆನ್ನಿಗೇ ಚೂರಿ ಹಾಕಿದರು: ಅಶೋಕ್​ ಗೆಹ್ಲೋಟ್​

    ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್​ ನಡುವಿನ ವಿರೋಧ ಮುಂದುವರಿದಿದೆ.ಇಂದು ಸುದ್ದಿಗೋಷ್ಠಿ ನಡೆಸಿದ ಅಶೋಕ್​ ಗೆಹ್ಲೋಟ್​ ಅವರು, ಸಚಿನ್​ ಪೈಲಟ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
    ಸಚಿನ್​ ಪೈಲಟ್​ರನ್ನು ರಾಜಸ್ಥಾನದ ಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅವರಿಗೆ ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದ್ದರೂ ಬೆನ್ನಿಗೆ ಚೂರಿ ಹಾಕಿದರು. ಅವರೊಬ್ಬ ಯೂಸ್​​ಲೆಸ್​ ಎಂದು ಅಶೋಕ್​ ಗೆಹ್ಲೋಟ್​ ಖಾರವಾಗಿ ಆರೋಪಿಸಿದ್ದಾರೆ.

    ಸಚಿನ್​ ಪೈಲಟ್​ ಆಟವಾಡಿದ್ದಾರೆ. ಈ ಸರ್ಕಾರವನ್ನು ಕೆಡವಲು ಪಿತೂರಿ ನಡೆಯುತ್ತಿದೆ. ಅವರ ಮುಖದಲ್ಲಿ ಮುಗ್ಧತೆ ಕಾಣಬಹುದು..ಅವರು ಇಂಗ್ಲಿಷ್​, ಹಿಂದಿ ಭಾಷೆಗಳನ್ನು ಚೆನ್ನಾಗಿ ಮಾತನಾಡಬಹುದು. ಮಾಧ್ಯಮದವರನ್ನೂ ಮರುಳು ಮಾಡಬಹುದು. ಆದರೆ ಈ ರಾಜ್ಯಕ್ಕೇನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೀನಾಕ್ಕೆ ನೇರ ಎಚ್ಚರಿಕೆ; ಭಾರತದೊಂದಿಗೆ ನೌಕಾಪಡೆ ಸಮರಾಭ್ಯಾಸಕ್ಕೆ ಬಂದ ಯುಎಸ್​ಎಸ್​ ನಿಮಿಟ್ಸ್​

    ಪಕ್ಷಕ್ಕಾಗಿ ನೀವೆಷ್ಟು ಕೆಲಸ ಮಾಡಿದಿರಿ? ಏನು ಮಾಡುತ್ತಿದ್ದೀರಿ ಎಂದು ಒಂದು ದಿನಕ್ಕೂ ನಾವ್ಯಾರೂ ಸಚಿನ್​ ಅವರನ್ನು ಪ್ರಶ್ನಿಸಿರಲಿಲ್ಲ. ಕಳೆದ ಏಳುವರ್ಷಗಳಿಂದ ಸಚಿನ್​ ಪೈಲಟ್​ ಅವರು ರಾಜ್ಯದ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು. ಒಂದು ದಿನವೂ ಕಿರಿಯರಾಗಲಿ, ಹಿರಿಯ ಮುಖಂಡರಾಗಲಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಎಂದು ಅಪಸ್ವರ ಎತ್ತಲಿಲ್ಲ. ಅವರಿಗೆ ಎಲ್ಲರೂ ಬೆಂಬಲ ನೀಡುತ್ತಲೇ ಬಂದಿದ್ದೆವು. ಆದರೂ ಪಕ್ಷವನ್ನು ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)

    ರಾಮಮಂದಿರದ ಗರ್ಭಗುಡಿಯಲ್ಲಿ 40 ಕೆಜಿ ತೂಕದ ಬೆಳ್ಳಿಯ ಹಾಸುಗಲ್ಲು; ಆ.3ರಿಂದ ಧಾರ್ಮಿಕ ಕಾರ್ಯಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts