More

    ವಿಕಾರವಾದ ಮನಸ್ಥಿತಿಯಿಂದ ಜೀವನವೇ ಹಾಳು

    ಹಿರೇಬಾಗೇವಾಡಿ: ಅರಳೀಕಟ್ಟಿ ಶಿವಮೂರ್ತಿ ದೇವರು ಸಮಾಜದಲ್ಲಿನ ಅಂಕುಡೊಂಕು ತಿದ್ದಿ ಸಂಸ್ಕಾರ ನೀಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಿದ್ದು, ಅವರು ಪರಿಪೂರ್ಣ ಸ್ವಾಮೀಜಿಗಳಾಗಲು ಪಟ್ಟಾಧಿಕಾರವಾಗಬೇಕಿದೆ ಎಂದು ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಡಾ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

    ಸಮೀಪದ ಅರಳೀಕಟ್ಟಿ ತೋಂಟದಾರ್ಯ ವಿರಕ್ತಮಠದಲ್ಲಿ ಈಚೆಗೆ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿ ಮತ್ತು ಶ್ರೀಮಠದ ಶಿವಮೂರ್ತಿ ದೇವರ ಪಟ್ಟಾಧಿಕಾರ (ಸಮಾಜ ಸೇವಾ ದೀಕ್ಷಾ ಸಮಾರಂಭ)ದ ವಿಷಯವಾಗಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಮಠಗಳಲ್ಲಿ ಗುರುವಿದ್ದರೆ ಮಾತ್ರ ಸಾರ್ವಜನಿಕರಗೆ ಒಳ್ಳೆಯ ಸಂಸ್ಕಾರ, ನಡೆ-ನುಡಿ, ಆಚಾರ-ವಿಚಾರಗಳು ಸಿಗುತ್ತವೆ. ಟಿವಿಯಲ್ಲಿ ಬರುವ ಮನಸ್ಸನ್ನು ವಿಕಾರಗೊಳಿಸುವ ಕಾರ್ಯಕ್ರಮಗಳಿಂದ ದೂರವಿರಿ. ಅಂಥ ಕಾರ್ಯಕ್ರಮಗಳಿಂದ ಸಂಸ್ಕಾರ ಸಿಗುವುದಿಲ್ಲ. ಬದಲಾಗಿ ವಿಕಾರವಾದ ಮನಸ್ಥಿತಿಯಿಂದಾಗಿ ಜೀವನವೆಲ್ಲ ಹಾಳಾಗುತ್ತದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗಬೇಕೆಂದರೆ ಮಠ ಮಾನ್ಯಗಳ ಸಂಪರ್ಕದಲ್ಲಿರಬೇಕು ಎಂದರು.

    ಕಾರಂಜಿಮಠದ ಗುರುಸಿದ್ಧ ಸಾಮೀಜಿ ಮಾತನಾಡಿ, ಪಟ್ಟಾಧಿಕಾರ ಎಂದರೆ ಬಹಳ ಜವಾಬ್ದಾರಿಯುತವಾದ ಕೆಲಸ. ಈಗಿನಿಂದಲೇ ಪೂರ್ವ ತಯಾರಿ ನಡೆಸಬೇಕಾದುದು ಸಾರ್ವಜನಿಕರ ಜವಾಬ್ದಾರಿ ಎಂದರು.

    ಮುರಗೋಡದ ನೀಲಕಂಠ ಸ್ವಾಮೀಜಿ ಮಾತನಾಡಿ, ಜನರನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯವನ್ನು ತೋಂಟದಾರ್ಯ ಮಠಗಳು ಮಾಡುತ್ತಿವೆ ಎಂದರು. ಶ್ರೀಮಠಕ್ಕೆ ವಿವಿಧ ರೀತಿಯಲ್ಲಿ ದಾನ ನೀಡಿದ ಮಹನೀಯರನ್ನು ಉಪಸ್ಥಿತ ಶ್ರೀಗಳ ವತಿಯಿಂದ ಸನ್ಮಾನಿಸಲಾಯಿತು.
    ಮುತ್ನಾಳ ಕೇದಾರ ಶಾಖಾ ಪೀಠ ಹಿರೇಮಠದ ಶಿವಾನಂದ ಶಿವಾಚಾರ್ಯರು, ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ, ಅರಳೀಕಟ್ಟಿ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ದೇವರು, ಕಮತೇನಟ್ಟಿ ಗುರುದೇವ ದೇವರು, ಅಕ್ಕಲಕೋಟದ ಚನ್ನವಬಸವ ದೇವರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts