More

    ವಯಸ್ಸಿನೊಂದಿಗೆ ಆವರಿಸಿಕೊಳ್ಳುವ ಕಾಯಿಲೆ; ಇಂದು ಪಾರ್ಕಿನ್ಸನ್​ ದಿನ

    ವಯಸ್ಸಾದಂತೆಲ್ಲ ಉಲ್ಬಣಿಸುವ, ಏಕಾಂಗಿತನದಿಂದ ಇನ್ನಷ್ಟು ಹೆಚ್ಚುವ ಕಾಯಿಲೆ ಪಾರ್ಕಿನ್ಸನ್. ‘ಕಂಪವಾತ’ವೆಂದೂ ಕರೆಯಲಾಗುವ ಈ ಕಾಯಿಲೆಗೆ ಕಾರಣ, ಇದರ ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ತಜ್ಞ ವೈದ್ಯರು ವಿಜಯವಾಣಿ- ದಿಗ್ವಿಜಯ ವಾಹಿನಿ ಕ್ಲಬ್​ಹೌಸ್ ಸಂವಾದದಲ್ಲಿ ಮಾಹಿತಿ ನೀಡಿದ್ದಾರೆ.

    ಜೀವನಶೈಲಿ ಉತ್ತಮವಾಗಿರಲಿ

    ವಯಸ್ಸಿನೊಂದಿಗೆ ಆವರಿಸಿಕೊಳ್ಳುವ ಕಾಯಿಲೆ; ಇಂದು ಪಾರ್ಕಿನ್ಸನ್​ ದಿನ| ಡಾ.ಎಲ್.ಕೆ. ಪ್ರಶಾಂತ್ ಮಣಿಪಾಲ ಆಸ್ಪತ್ರೆಯ ಪಾರ್ಕಿನ್ಸನ್​ ತಜ್ಞ

    ರ್ಪಾನ್ಸನ್ ವಯಸ್ಸಾದಂತೆ ಆವರಿಸಿಕೊಳ್ಳುವ ಕಾಯಿಲೆ. ವೃದ್ಧಾಪ್ಯದಲ್ಲಿ ಮಿದುಳಿನ ನರಗಳ ಚಟುವಟಿಕೆ ಕುಗ್ಗಿ ಡೋಪೋಮಿನ್ ಎಂಬ ರಾಸಾಯನಿಕ ಉತ್ಪತ್ತಿಯಾಗದೇ ರೋಗ ಉಲ್ಬಣವಾಗುತ್ತದೆ. 1817ರಲ್ಲಿ ಜೇಮ್್ಸ ರ್ಪಾನ್ಸನ್ ಎಂಬುವರು ಈ ರೋಗದ ಬಗ್ಗೆ ವಿವರಣೆ ನೀಡಿದ್ದಾರೆ. ಅವರ ನೆನಪಿನಾರ್ಥ ಇದಕ್ಕೆ ರ್ಪಾನ್ಸನ್ ಎಂದು ಹೆಸರಿಡಲಾಗಿದೆ. ಈ ರೋಗವನ್ನು 4 ಪ್ರಮುಖ ಲಕ್ಷಣಗಳಿಂದ ‘ಟ್ರ್ಯಾಪ್​’ (ಟಿಆರ್​ಎಪಿ) ಎಂಬ ಪದದಿಂದ ಸುಲಭವಾಗಿ ಗುರುತಿಸಲಾಗುತ್ತದೆ. ‘ಟಿ- (ಟ್ರೆಮರ್) ಅಕ್ಷರವು ನಡುಕವನ್ನು, ‘ಆರ್’ (ರಿಜಿಡಿಟಿ) ದೇಹದ ಬಿಗಿತ, ‘ಎ’ (ಅಕಿನೆಸಿಯಾ) ನಿಧಾನ ಚಲನೆ ಹಾಗೂ ‘ಪಿ’ (ಪಾಸ್ಚರಲ್ ಇನ್​ಸ್ಟೆಬಿಲಿಟಿ) ಬಾಗಿದ ಭಂಗಿಯಿಂದ ನಡೆಯುವುದಕ್ಕೆ ಕಷ್ಟ ಆಗುವುದನ್ನು ಸೂಚಿಸುತ್ತದೆ.

    ಉತ್ತಮ ಜೀವನಶೈಲಿ ಹೊಂದದೆ ಇದ್ದಲ್ಲಿ ವಯಸ್ಸಾದಂತೆ ರ್ಪಾನ್​ಸೋನಿಸಂ ಕಂಡುಬರುತ್ತದೆ. ಈ ರೋಗ ಕಂಡುಬಂದ ಶೇಕಡ 85 ರಿಂದ 90 ಜನರಿಗೆ ರ್ಪಾನ್ಸನ್ ರೋಗ ಖಚಿತವಾಗುತ್ತದೆ. ಆದರೆ, ಉಳಿದ ಶೇ.10 ಜನರಿಗೆ ತಲೆಯಲ್ಲಿ ಗಡ್ಡೆ, ತಲೆಗೆ ಹೊಡೆತ ಬಿದ್ದಿರುವುದು ಮತ್ತು ಮಿದುಳಿನಲ್ಲಿನ ಸಮಸ್ಯೆಗಳಿಂದಲೂ ರ್ಪಾನ್​ಸೋನಿಸಂ ರೋಗ ಕಾಣಿಸಿಕೊಳ್ಳಬಹುದು. ಇವರಿಗೆ ರ್ಪಾನ್ಸನ್ ಇರುವುದಿಲ್ಲ. ಮುಖ್ಯವಾಗಿ ರ್ಪಾನ್ಸನ್ ಕಾಯಿಲೆಯನ್ನು ಮಾತ್ರೆ, ಇಂಜೆಕ್ಷನ್ ಮತ್ತು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದು.

    ವಂಶವಾಹಿ ಕಾರಣ: ಎಪ್ಪತ್ತು ವಯಸ್ಸಿನ ನಂತರ ಪಾರ್ಕಿನ್ಸನ್​ ರೋಗ ಉಲ್ಬಣವಾಗುತ್ತದೆ. ಆದರೆ, ಕೆಲವರು ಗುಣಮಟ್ಟದ ಜೀವನಶೈಲಿ ನಡೆಸುತ್ತಿದ್ದರೂ ಅನುವಂಶಿಕ ಕಾರಣಗಳಿಂದ 40ನೇ ವರ್ಷಕ್ಕೆ ಈ ಕಾಯಿಲೆ ಕಾಣಿಸಿಕೊಳ್ಳಬಹುದು. ಜತೆಗೆ, ಅತಿ ಒತ್ತಡದ ಕೆಲಸ, ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ವ್ಯಾಯಾಮ ಮಾಡದಿರುವುದು ಹಾಗೂ ಪರಿಸರ ಸಂಬಂಧಿ ಇತರ ಕಾರಣದಿಂದಲೂ ಈ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.

    ನಿಯಂತ್ರಣಕ್ಕೆ ಪಂಚಸೂತ್ರಗಳು

    • ಎಷ್ಟೇ ಒತ್ತಡದ ಕೆಲಸವಿದ್ದರೂ ಗುಣಮಟ್ಟದ ಜೀವನಶೈಲಿ (ಸರಿಯಾದ ಸಮಯಕ್ಕೆ ಊಟ, ನಿದ್ದೆ, ವ್ಯಾಯಾಮ) ರೂಢಿಸಿಕೊಳ್ಳಬೇಕು.
    • ಕುಟುಂಬದ ಇತರ ಸದಸ್ಯರನ್ನು ತೊರೆದು ಒಬ್ಬಂಟಿಗರಾಗಿ ಜೀವನ ಮಾಡಬೇಡಿ.
    • ಆರೋಗ್ಯಕರವಾದ ಸಾಮಾಜಿಕ (ಯೋಗ, ನಗು ಮತ್ತು ಗುಂಪುಕಾರ್ಯ) ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು.
    • ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು.
    • ರೋಗ ಖಚಿತವಾದಲ್ಲಿ ರ್ಪಾನ್ಸನ್ ತಜ್ಞರಿಂದ ಆಗಿಂದಾಗ್ಗೆ ಚಿಕಿತ್ಸೆ ಪಡೆಯಬೇಕು.

    ಸುಲಭ ಚಿಕಿತ್ಸಾ ವಿಧಾನ ಲಭ್ಯ

    ವಯಸ್ಸಿನೊಂದಿಗೆ ಆವರಿಸಿಕೊಳ್ಳುವ ಕಾಯಿಲೆ; ಇಂದು ಪಾರ್ಕಿನ್ಸನ್​ ದಿನ| ಡಾ. ಶರಣ್ ಶ್ರೀನಿವಾಸನ್ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ನರಶಸ್ತ್ರಚಿಕಿತ್ಸಕ

    ರ್ಪಾನ್ಸನ್ ನರವ್ಯವಸ್ಥೆಯನ್ನು ಬಾಧಿಸುವ ಕಾಯಿಲೆ. ಇದಕ್ಕೆ ಆರಂಭದಲ್ಲೇ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ರೀತಿಯಲ್ಲಿ ರ್ಪಾನ್ಸನ್ ಜೀವನಪೂರ್ತಿ ಬಾಧಿಸುವ ಕಾಯಿಲೆ. ಹೀಗಾಗಿ ಇದಕ್ಕೆ ಚಿಕಿತ್ಸೆ ಹಾಗೂ ಔಷಧ ನಿರಂತರವಾಗಿ ಪಡೆಯಬೇಕು. ಇದರಿಂದ ರೋಗಲಕ್ಷಣ ಉಲ್ಬಣಗೊಳ್ಳುವುದನ್ನು ಸಾಧ್ಯವಾದಷ್ಟು ಮುಂದೂಡಬಹುದಾಗಿದೆ. ಈ ಕಾಯಿಲೆಯನ್ನು ಸಾಧ್ಯವಾದಷ್ಟು ಔಷಧಗಳಿಂದಲೇ ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತದೆ. ನಂತರದಲ್ಲಿ ಫಿಜಿಯೋಥೆರಪಿ, ಆಕ್ಯೂಪ್ರೆಷರ್ ಥೆರಪಿ, ಸ್ಲೀಪಿಂಗ್ ಥೆರಪಿ ಸೇರಿ ಹಲವು ಥೆರಪಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಎಲ್ಲ ಚಿಕಿತ್ಸೆಗಳ ನಂತರವೂ ಕಾಯಿಲೆ ಹತೋಟಿಗೆ ಬಾರದಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ರ್ಪಾನ್ಸನ್ ರೋಗಿಗಳಿಗೆ ಔಷಧದ ಜತೆಗೆ ಯೋಗ, ಧ್ಯಾನ, ಆಯುರ್ವೆದ ಸೇರಿ ಪರ್ಯಾಯ ಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ. ಈ ರೋಗಿಗಳಲ್ಲೂ ಹಲವು ವಿಧದವರಿದ್ದಾರೆ. ಕೆಲವರಿಗೆ ಕೈ, ಕಾಲು ನಡುಕ ಇರುತ್ತದೆ, ಇನ್ನೂ ಕೆಲವರಿಗೆ ದೇಹ ಬಿಗಿದಂತೆಯೂ ಆಗುತ್ತದೆ. ವರ್ಷಾನುಗಟ್ಟಲೆ ಕೇವಲ ಒಂದು ಭಾಗದ ಕೈ, ಕಾಲು ನಡುಕ ಹೊಂದಿದವರು, ಎರಡೂ ಭಾಗದ ಕೈ ಕಾಲುಗಳು ನಡುಕ ಹೊಂದಿದವರೂ ಇದ್ದಾರೆ. ಹಾಗಾಗಿ ಅವರ ದೇಹ ಸ್ಥಿತಿ ಆಧರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸಿ ತಲೆಯ ಒಳಭಾಗದಲ್ಲಿ ಪೇಸ್​ವೆುೕಕರ್ ರೀತಿಯ ಬ್ಯಾಟರಿ ಅಳವಡಿಕೆ ಮಾಡಲಾಗುತ್ತದೆ. ಇದು ರೇಡಿಯೋ ಪ್ರೋಗ್ರಾಮಿಂಗ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಎರಡು ವಿಧ ರೀ-ರಿಚಾರ್ಜೆಬಲ್, ನಾನ್ ರಿಚಾರ್ಜೆಬಲ್ ಎಂದು ವಿಂಗಡಿಸಲಾಗುತ್ತದೆ. ರೀ-ರಿಚಾರ್ಜೆಬಲ್ ಬ್ಯಾಟರಿ ಅಳವಡಿಸಿದರೆ (ಅಂದಾಜು ವೆಚ್ಚ 8-10 ಲಕ್ಷ ರೂ.) 2 ವಾರಕ್ಕೊಮ್ಮೆ ಚಾರ್ಚ್ ಮಾಡಿಕೊಳ್ಳಬೇಕಾಗುತ್ತದೆ. ಮತ್ತೊಂದು ಸ್ವರೂಪದ ಬ್ಯಾಟರಿ (ಅಂದಾಜು ವೆಚ್ಚ 10-14 ಲಕ್ಷ ರೂ.) ಅಳವಡಿಸಿದರೆ 4-5 ವರ್ಷಕ್ಕೊಮ್ಮೆ ಮತ್ತೆ ಹೊಸದನ್ನು ಅಳವಡಿಸಬೇಕಾಗುತ್ತದೆ. ಇವೆರಡರ ಹೊರತಾಗಿ ರೀಜನಿಂಗ್ ಸರ್ಜರಿ ಮಾಡಲಾಗುತ್ತದೆ. ಇದರಲ್ಲಿ 12-18 ತಿಂಗಳ ಅವಧಿಯಲ್ಲಿ ಪುನಃ ಚಿಕಿತ್ಸೆ ಮಾಡಲಾಗುತ್ತದೆ.

    ಸ್ಟೆಮ್​ಸೆಲ್​ ಥೆರಪಿ: ಸ್ಟೆಮ್ೆಲ್ ಥೆರಪಿ ಚಿಕಿತ್ಸೆಯಿಂದ ರ್ಪಾನ್ಸನ್ ವಾಸಿಯಾಗುವ ಬಗ್ಗೆ ಈವರೆಗೂ ಎಲ್ಲೂ ದೃಢಪಟ್ಟಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಸದ್ಯಕ್ಕೆ ಔಷಧಗಳಿಂದ ಹಾಗೂ ಗಂಭೀರ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಕಾಯಿಲೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಪ್ರಮುಖವಾಗಿ ಇದು ನರರೋಗ ಸಮಸ್ಯೆ ಆಗಿರುವುದರಿಂದ ಸ್ಟೆಮ್ೆಲ್ ಥೆರಪಿಯಲ್ಲಿ ಪೂರ್ಣಪ್ರಮಾಣದ ಪರಿಣಾಮ ದೊರೆಯುತ್ತಿರುವ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲ.

    ಖುಷಿಯಿಂದ ಬದುಕಿ: ಮಾನವನ ಮಿದುಳಿನಲ್ಲಿ ‘ಡೋಪೋಮಿನ್’ ರಾಸಾಯನಿಕ ಉತ್ಪತ್ತಿ ಕಡಿಮೆ ಆಗುವುದರಿಂದ ಈ ಕಾಯಿಲೆ ಬರುತ್ತದೆ. ಖುಷಿಯಿಂದ, ಲವಲವಿಕೆಯಿಂದ ಇರುವವರಲ್ಲಿ ಡೋಪೋಮಿನ್ ಉತ್ಪತ್ತಿ ಅಗುತ್ತದೆ. ಆದರೆ, ಒಂಟಿತನ, ದುಃಖ, ಕೀಳರಿಮೆ ಅಥವಾ ಅತಿಯಾದ ಚಿಂತೆ ಇದ್ದರೆ ರ್ಪಾನ್ಸನ್ ಕಾಣಿಸಿಕೊಳ್ಳುತ್ತದೆ. ಆಗ, ಡೋಪೋಮಿನ್ ರಾಸಾಯನಿಕವನ್ನು ಕೃತಕವಾಗಿ ಹೆಚ್ಚಳ ಮಾಡಲು ಮಾತ್ರೆ, ಇಂಜೆಕ್ಷನ್, ಥೆರಫಿ ಮತ್ತು ಶಸ್ತ್ರಚಿಕಿತ್ಸೆ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಈ ರೋಗವು 70 ವರ್ಷದ ನಂತರ ಸಹಜವಾಗಿ ಬರುವ ಕಾಯಿಲೆಯಾಗಿದೆ. ವೈದ್ಯಕೀಯ ಅಧ್ಯಯನದ ಪ್ರಕಾರ 85 ವರ್ಷ ದಾಟಿದ ಇಬ್ಬರು ವೃದ್ಧರಲ್ಲಿ ಕಡ್ಡಾಯವಾಗಿ ಒಬ್ಬರಿಗೆ ರ್ಪಾನ್ಸನ್ ಇರುತ್ತದೆ. ಇಲ್ಲವೇ ಅರಳು-ಮರಳು ಕಂಡುಬರುತ್ತದೆ.

    ಕಾಯಿಲೆಯ ವಿವಿಧ ಹಂತಗಳ ಲಕ್ಷಣಗಳು

    • ಹಂತ-1: ದಿನನಿತ್ಯದ ಚಟುವಟಿಕೆ ನಿಧಾನಗತಿ ಆಗುವುದು, ನಡೆಯಲು ಸಮಸ್ಯೆ, ಕೈ ನಡುಗುವುದು.
    • ಹಂತ-2: ಸಾಮಾನ್ಯದಂತೆ ಮೈಯನ್ನು ಸಡಿಲಿಸಲು ಸಮಸ್ಯೆ, ಕೈ ಬಿಗಿಯುವಿಕೆ ಕಂಡುಬರುತ್ತದೆ.
    • ಹಂತ-3: ಕೂರಲು, ನಡೆಯಲು ಇನ್ನೊಬ್ಬರ ಸಹಾಯ ಬೇಕಾಗುತ್ತದೆ.

    ಉಲ್ಬಣದ ಹಂತ: ರಕ್ತದೊತ್ತಡ ಹೆಚ್ಚಾಗುವಿಕೆ, ಮಲ ಮತ್ತು ಮೂತ್ರವಿಸರ್ಜನೆಯಲ್ಲಿ ಸಮಸ್ಯೆ, ನಿದ್ರಾಸಮಸ್ಯೆ, ಆಘ್ರಾಣಿಸುವ ಶಕ್ತಿ ಕುಂದುವುದು, ಖಿನ್ನತೆ ಕಂಡುಬರುತ್ತವೆ.

    ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

    ಸ್ವಾಮೀಜಿ ಕಾರು ಅಪಘಾತ, ಚಾಲಕ ಸ್ಥಳದಲ್ಲೇ ಸಾವು; ಶ್ರೀಗಳು ಆಸ್ಪತ್ರೆಗೆ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts