More

    ವೇಟಿಂಗ್​ ಲಿಸ್ಟ್​ನಲ್ಲಿದ್ದೀರಾ..? ಚಿಂತೆ ಬೇಡ, ನಿಮಗಾಗಿ ಸಂಚರಿಸಲಿದೆ ವಿಶೇಷ ರೈಲು…!

    ನವದೆಹಲಿ: ಕೆಲ ವಿಶೇಷ ರೈಲುಗಳ ಸಂಚಾರ ಹೊರತುಪಡಿಸಿದರೆ, ಕಳೆದ ನಾಲ್ಕು ತಿಂಗಳಿನಿಂದ ರೈಲ್ವೆ ಸಂಚಾರ ಅಕ್ಷರಶಃ ಸ್ಥಗಿತವಾಗಿತ್ತು. ಮುಂಗಡ ಟಿಕೆಟ್​ ಕಾಯ್ದಿರಿಸಿದವರಿಗೆಲ್ಲ ಇಲಾಖೆ ಹಂತಹಂತವಾಗಿ ಹಣ ಮರುಪಾವತಿಸಿತ್ತು.

    ಸದ್ಯ, ಪ್ರಮುಖ ಮಾರ್ಗಗಳಲ್ಲಿ ವಿಶೇಷ ರೈಲಗಳಷ್ಟೇ ಸಂಚರಿಸುತ್ತಿವೆ. ಆದರೆ, ಬೇಡಿಕೆ ಮಾತ್ರ ಹೆಚ್ಚಾಗುತ್ತಲೇ ಇದೆ. ಅಂದರೆ, ವೇಟಿಂಗ್​ ಲಿಸ್ಟ್​ ಬೆಳೆಯುತ್ತಲೇ ಇದೆ. ಹೀಗಾಗಿ ರೈಲ್ವೆ ಇಲಾಖೆ ‘ತದ್ರೂಪಿ ರೈಲು’ಗಳ ಸಂಚಾರಕ್ಕೆ ನಿರ್ಧರಿಸಿದೆ. ಕೋವಿಡ್​ ಸಂಕಷ್ಟದಿಂದಾಗಿ ತೀವ್ರವಾಗಿ ಆದಾಯ ಕುಸಿತ ಕಂಡಿರುವ ಇಲಾಖೆಗೂ ಇದರಿಂದ ನೆರವಾಗಲಿದೆ.

    ಇದನ್ನೂ ಓದಿ; ವಾರಾಣಸಿ, ಮಥುರಾ ದೇಗುಲ ಜಾಗವನ್ನು ಮುಸ್ಲಿಮರು ಬಿಟ್ಟುಕೊಡಲಿ; ಹೋರಾಟಕ್ಕೂ ನಿರ್ಧಾರ

    ಈಗಾಗಲೇ ನಿಗದಿಯಾಗಿರುವ ಮಾರ್ಗದಲ್ಲಿ ಸಂಚರಿಸುತ್ತಿರುವ ವಿಶೇಷ ರೈಲಿಗೂ ಮುನ್ನ ಅದೇ ಮಾರ್ಗದಲ್ಲಿ ಅದಕ್ಕೂ ಮುಂಚೆ ಸಂಚರಿಸುವ ರೈಲನ್ನು ತದ್ರೂಪಿ ರೈಲು ಎಂದು ಕರೆಯಲಾಗುತ್ತಿದೆ. ಆದರೆ, ಈ ರೈಲುಗಳ ಪ್ರಯಾಣ ಅವಧಿ ಹಾಗೂ ನಿಲುಗಡೆ ನಿಗದಿತ ರೈಲಿಗಿಂತ ಕಡಿಮೆಯಾಗಿರಲಿದೆ. ಮುಂದಿನ 15 ದಿನಗಳಲ್ಲಿ ಈ ರೈಲುಗಳ ಸಂಚಾರ ಆರಂಭವಾಗಲಿದೆ.

    ವಿಶೇಷ ರೈಲುಗಳಲ್ಲಿ ಟಿಕೆಟ್​ಗೆ ಇರುವ ಬೇಡಿಕೆಯನ್ನು ಗಮನಿಸುತ್ತಿದ್ದೇವೆ. ಯಾವುದಾದರೂ ಮಾರ್ಗದಲ್ಲಿ ಬೇಡಿಕೆ ಹೆಚ್ಚಿದ್ದು, 10 ದಿನಗಳಿಗಿಂತಲೂ ಅಧಿಕ ಕಾಲ ವೇಟಿಂಗ್​ ಲಿಸ್ಟ್​ನಲ್ಲಿ ಪ್ರಯಾಣಿಕರು ಕಾಯುತ್ತಿದ್ದರೆ, ಅಂಥ ಮಾರ್ಗದಲ್ಲಿ ತದ್ರೂಪಿ ರೈಲುಗಳನ್ನು ಓಡಿಸಲಾಗುತ್ತದೆ. ವೇಟಿಂಗ್​ ಲಿಸ್ಟ್​ನಲ್ಲಿರುವವರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ರೈಲ್ವೆ ಮಂಡಳಿ ಸಿಇಎ ವಿ.ಕೆ. ಯಾದವ್​ ಮಾಹಿತಿ ನೀಡಿದ್ದಾರೆ.

    ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts