More

    ಆಯುರ್ವೇದದ ಬಗ್ಗೆ ಅಮೆರಿಕ ಉತ್ಸುಕತೆ- ಕರೊನಾ ಓಡಿಸಲು ಕ್ಲಿನಿಕಲ್ ಟ್ರಯಲ್‌‌

    ನವದೆಹಲಿ: ಭಾರತೀಯ ಪ್ರಾಚೀನ ವೈದ್ಯ ಪದ್ಧತಿಯಾಗಿರುವ ಆಯುರ್ವೇದಿಂದ ಕರೊನಾ ಗುಣಮುಖವಾಗುವ ಬಗ್ಗೆ ಇಡೀ ವಿಶ್ವಕ್ಕೇ ಇದೀಗ ಮನವರಿಕೆ ಶುರುವಾಗಿದೆ.

    ಈ ಪದ್ಧತಿಯ ಬಗ್ಗೆ ಕೆಲವು ಭಾರತೀಯರೇ ಅಸಡ್ಡೆ ತಳೆದಿರುವ ನಡುವೇ ಇದೀಗ ಕರೊನಾ ಓಡಲು ಇದರ ಬಳಕೆ ಕುರಿತಂತೆ ಪ್ರಯೋಗ ನಡೆಸಲು ಅಮೆರಿಕ ಮುಂದಾಗಿದೆ.
    ಈ ಕುರಿತು ಹೇಳಿಕೆ ನೀಡಿರುವ ಅಮೆರಿಕದ ಭಾರತೀಯ ರಾಯಭಾರಿ ತರನಜೀತ್ ಸಿಂಗ್ ಸಂಧು, “ಭಾರತ ಹಾಗೂ ಅಮೆರಿಕದಲ್ಲಿ ಆಯುರ್ವೇದ ಚಿಕಿತ್ಸೆಗೆಂದೇ ತಯಾರಾಗಿರುವ ಔಷಧಿಗಳ ಕ್ಲಿನಿಕಲ್ ಟ್ರಯಲ್ ಜಂಟಿಯಾಗಿ ನಡೆಸಲು ಯೋಜನೆ ರೂಪಿಸುತ್ತಿರುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಮೈಕೈ ನೋವು, ತಲೆನೋವು ಕೂಡ ಕರೊನಾ ಲಕ್ಷಣವಂತೆ!

    ಇದಕ್ಕೆ ಭಾರತ ಮತ್ತು ಅಮೆರಿಕದ ವಿಜ್ಞಾನಿಗಳು ಹಾಗೂ ನುರಿತ ವೈದ್ಯರ ಜತೆ ನಡೆದಿರುವ ಡಿಜಿಟಲ್ ಸಂವಾದದಲ್ಲಿ ಅವರು ಮಾತನಾಡಿದರು. ಆಯುರ್ವೇದವನ್ನು ಉತ್ತೇಜಿಸಲು ನಾವು ರೆಡಿ ಇದ್ದೇವೆ. ಕೋವಿಡ್ -19 ವಿರುದ್ಧ ಹೋರಾಡಲು ಆಯುರ್ವೇದ ವೈದ್ಯರು ಮತ್ತು ಎರಡೂ ದೇಶಗಳ ಸಂಶೋಧಕರು ಆಯುರ್ವೇದ ಔಷಧಿಗಳ ಜಂಟಿ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದಾರೆ” ಎಂದು ಸಂಧು ಹೇಳಿದ್ದಾರೆ.

    ಭಾರತೀಯ ಔಷಧಿ ಕಂಪನಿಗಳು ಕೈಗೆಟುಕುವ ದರದಲ್ಲಿ ಔಷಧಿ ಮತ್ತು ಲಸಿಕೆಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದು, ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ” ಎಂದು ಸಂಧು ಹೇಳಿದ್ದಾರೆ.

    ಭಾರತೀಯ ಔಷಧಿ ಕಂಪನಿಗಳು ಅಮೆರಿಕ ಮೂಲದ ಸಂಸ್ಥೆಗಳೊಂದಿಗೆ ಮೂರು ಸಹಭಾಗಿತ್ವವನ್ನು ಹೊಂದಿವೆ. ಇದು ಭಾರತ ಮತ್ತು ಅಮೆರಿಕಕ್ಕೆ ಮಾತ್ರ ಪ್ರಯೋಜನ ಆಗುವುದಿಲ್ಲದೇ ವಿಶ್ವದಾದ್ಯಂತದ ಶತಕೋಟಿ ಜನರಿಗೆ ಪ್ರಯೋಜನ ಆಗಲಿದೆ ಎಂಬ ವಿಶ್ವಾಸವನ್ನು ಸಂಧು ಹೊಂದಿದ್ದಾರೆ. (ಏಜೆನ್ಸೀಸ್‌)

    ಶವಾಗಾರದಲ್ಲಿದ್ದ ಮೃತ ಸೋಂಕಿತ ಏಕಾಏಕಿ ಕಾಣೆ- ಪತ್ತೆಯಾದದ್ದು ಸ್ಮಶಾನದಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts