More

    ಸರ್ಕಾರಿ ಜಾಗ ಒತ್ತುವರಿ ತೆರವು, ತಾಪಂ ಇಒ ಆದೇಶದಂತೆ ಕಾರ್ಯಾಚರಣೆ, ಜೆಸಿಬಿಗೆ ಅಡ್ಡ ಮಲಗಿದ ಒತ್ತುವರಿದಾರರು

    ಸೂಲಿಬೆಲೆ: ತಿಮ್ಮಸಂದ್ರದ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆಯನ್ನು ಗ್ರಾಪಂ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಶುಕ್ರವಾರ ತೆರವುಗೊಳಿಸಿದರು.

    ಲಕ್ಕೊಂಡಹಳ್ಳಿ ಗ್ರಾಪಂ ವ್ಯಾಪ್ತಿಯ ತಿಮ್ಮಸಂದ್ರದಲ್ಲಿ ರಸ್ತೆ ನಿರ್ಮಾಣಕ್ಕೆ ಮೀಸಲಿದ್ದ ಜಾಗದಲ್ಲಿ ಗುಂಡಪ್ಪ ಹಾಗೂ ರಾಮು ಎಂಬುವವರು ಶೆಡ್ ನಿರ್ಮಿಸಿಕೊಂಡಿದ್ದರು. ಶೆಡ್ ಪಕ್ಕದಲ್ಲಿ ನಿವೇಶನ ಹೊಂದಿದ್ದ ರಾಜು ಎನ್ನುವವರು ಸ್ಥಳೀಯ ಠಾಣೆ ಹಾಗೂ ತಾಲೂಕು ಕಾರ್ನಿರ್ವಹಣಾಧಿಕಾರಿಗೆ ದೂರು ನೀಡಿದ್ದರು.

    ರಸ್ತೆ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದ ಇಬ್ಬರಿಗೂ ಗ್ರಾಪಂನಿಂದ ನೋಟಿಸ್ ನೀಡಿದ್ದರೂ ತೆರವಿಗೆ ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಆದೇಶದಂತೆ ಪಿಡಿಒ ಶ್ರುತಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೇಮಲತಾ, ಪೊಲೀಸ್ ವೃತ್ತ ನಿರೀಕ್ಷಕ ರವೀಂದ್ರ ನೇತೃತ್ವದ ತಂಡದೊಂದಿಗೆ ತೆರವುಗೊಳಿಸಲಾಯಿತು.

    ಒತ್ತುವರಿದಾರರ ಹೈಡ್ರಾಮ: ತೆರವುಗೊಳಿಸಲು ಬಂದ ಅಧಿಕಾರಿಗಳ ಮೇಲೆ ಒತ್ತುವರಿದಾರರು ಈ ಜಾಗ ನಮ್ಮದಿದೆ. ಕೆಲವರ ಕುತಂತ್ರದಿಂದ ಸರ್ಕಾರಿ ಜಾಗ ಎಂದು ನಮ್ಮಿಂದ ಜಾಗ ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ. ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಹರಿಹಾಯ್ದರು.
    ಅಷ್ಟೇ ಅಲ್ಲದೆ ಕುಟುಂಬದ ಸದಸ್ಯರು ಜೆಸಿಬಿಗೆ ಅಡ್ಡ ಮಲಗಿ ಹೈಡ್ರಾಮ ನಡೆಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

    ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಆದೇಶದಂತೆ ತೆರವಿಗೆ ಮುಂದಾಗಿದ್ದೇವೆ. ನಕಾಶೆಯಲ್ಲೂ ಕೂಡ ಗ್ರಾಪಂ ರಸ್ತೆ ಎಂದು ನಮೂದಾಗಿದೆ. ಆದ್ದರಿಂದ ಮೇಲಧಿಕಾರಿಗಳ ಆದೇಶ ಪಾಲನೆ ಮಾಡಿದ್ದೇವೆ.
    ಶ್ರುತಿ, ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts