More

    ಸೊಪ್ಪಿನ ಬೆಟ್ಟ ಒತ್ತುವರಿ ತೆರವುಗೊಳಿಸಿ

    ಸಾಗರ: ತಾಲೂಕಿನ ಬೇಳೂರು ಗ್ರಾಮದ ಸ.ನಂ.40ರ ಸೊಪ್ಪಿನ ಬೆಟ್ಟದಲ್ಲಿ ಅನಧಿಕೃತವಾಗಿ ಜಾಗ ಒತ್ತುವರಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಬೇಳೂರು ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

    ಸೊಪ್ಪಿನ ಬೆಟ್ಟವನ್ನು ಗ್ರಾಮಸ್ಥರು ಅನಾದಿ ಕಾಲದಿಂದಲೂ ಕಾಪಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಕೆಲವರು ಜಾಗವನ್ನು ಒತ್ತುವರಿ ಮಾಡಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಸದರಿ ಸ್ಥಳ ಸೊಪ್ಪಿನ ಬೆಟ್ಟವಾಗಿದ್ದು ಲಾಗಾಯ್ತಿನಿಂದ ಅಡಕೆ ತೋಟಗಳಿಗೆ ಹೊಸಮಣ್ಣು, ಸೊಪ್ಪು, ದರಕು ಹಾಗೂ ಒಣಕಟ್ಟಿಗೆ ತರಲು ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
    ಇದೇ ಜಾಗದಲ್ಲಿ ಗ್ರಾಮಸ್ಥರು ಜಾನುವಾರುಗಳನ್ನು ಮೇಯಲು ಬಿಡುವುದು, ಹಸಿರು ಹುಲ್ಲು ಸಂಗ್ರಹಿಸುತ್ತ ಬಂದಿದ್ದಾರೆ. ಏಕಾಏಕಿ ಜಾಗ ಒತ್ತುವರಿ ಮಾಡುತ್ತಿರುವುದರಿಂದ ಭಾಗಾಯತು ನಿರ್ವಹಣೆಗೆ ಧಕ್ಕೆ ಉಂಟಾಗುತ್ತಿದೆ. ಇಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರಾಗಿದ್ದು ದಟ್ಟವಾದ ಕಾಡು ಇದೆ. ಅತಿಕ್ರಮಣದಾರರಿಂದ ಇವೆಲ್ಲ ನಾಶವಾಗುವ ಸಾಧ್ಯತೆ ಇದೆ. ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಜತೆಗೆ ಸೊಪ್ಪಿನ ಬೆಟ್ಟ ರಕ್ಷಣೆಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಅನಧಿಕೃತ ಒತ್ತುವರಿ ತೆರವುಗೊಳಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
    ಗ್ರಾಮಸ್ಥರಾದ ಕೃಷ್ಣಮೂರ್ತಿ, ರಾಘವೇಂದ್ರ ಹೆಗಡೆ, ಮಂಜುನಾಥ್, ಚಂದ್ರು ಪೂಜಾರಿ, ಮಂಜಪ್ಪ ಗೌಡ, ಕೆರೆಯಪ್ಪ, ವಿನಾಯಕ ರಾವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts