More

  ಮಹಿಳೆಯರಿಂದ ಮಾರುತಿ ಮಂದಿರ ಸ್ವಚ್ಛತೆ

  ಗೊಳಸಂಗಿ: ಗ್ರಾಮದ ಮಾದರಿ ಬಡಾವಣೆಯ ಮಾರುತಿ ಮಂದಿರ ಆವರಣದ ಸ್ವಚ್ಛತಾ ಕಾರ್ಯವನ್ನು ಬನಶಂಕರಿ ಸ್ವಸಹಾಯ ಸಂಘ, ಆದೀಶ್ವರ ಸ್ವಸಹಾಯ ಸಂಘದ ಮಹಿಳೆಯರು ಶನಿವಾರ ಶ್ರಮದಾನದ ಮೂಲಕ ಕೈಗೊಂಡರು.

  ಈ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಯಲ್ಲಪ್ಪ ಕೊಚ್ಚರಕಿ ಮಾತನಾಡಿ, ಪರಿಸರ ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಉಸಿರಾಗಬೇಕು. ಸ್ವಚ್ಛವಾದ ಪರಿಸರದಲ್ಲಿ ಮೈ, ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಅದರಲ್ಲೂ ದೇವಸ್ಥಾನದಂತ ಪವಿತ್ರ ಜಾಗವನ್ನು ಸ್ವಯಂ ಪ್ರೇರಿತವಾಗಿ ಎಲ್ಲರೂ ಸ್ವಚ್ಛತೆಗೆ ಮುಂದಾಗಬೇಕು ಎಂದರು.

  ಸ್ಥಳೀಯ ಮುಖಂಡ ಗಂಗಾಧರ ಗಣಿ, ಸೇವಾ ಪ್ರತಿನಿಧಿ ರಿಯಾನಾ ಅತಾವಾಲೆ, ಸ್ವಸಹಾಯ ಸಂಘದ ವಿಜಯಲಕ್ಷ್ಮೀ ದೇವಾಂಗಮಠ, ಸೋನಾಬಾಯಿ ಕಾಳಗಿ, ಯಶೋದಾ ಹಡ್ಲಗೇರಿ, ಅನಸೂಯಾ ಕುಪ್ಪಸ್ತ, ಬಸಮ್ಮ ಬಳಬಟ್ಟಿ, ರಿಯಾನಾ ದಳವಾಯಿ ಮತ್ತಿತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts