More

    ಸ್ವಚ್ಛ ಭಾರತ ನಿರ್ಮಾಣಕ್ಕೆ ಸಹಕರಿಸಿ

    ಹನುಮಸಾಗರ: ಸುತ್ತಲಿನ ವಾತಾವರಣ ಸ್ವಚ್ಛವಾಗಿದ್ದರೆ ಆರೋಗ್ಯದಿಂದ ಜೀವಿಸಲು ಸಾಧ್ಯ. ಅದಕ್ಕಾಗಿ ಸಾರ್ವಜನಿಕರು ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಪಿಡಿಒ ದೇವೇಂದ್ರಪ್ಪ ಕಮತರ ಹೇಳಿದರು.

    ಇದನ್ನೂ ಓದಿ: ಸ್ವಚ್ಛ ಭಾರತ್ ಅಭಿಯಾನ ಯಶಸ್ಸಿಗೆ ಕೈಜೋಡಿಸಿ

    ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಸ್ವಚ್ಛತೆಯೇ ಸೇವೆ, ತ್ಯಾಜ್ಯ ಮುಕ್ತ ಭಾರತ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಗ್ರಾಮಸ್ಥರು ಕಸ ಎಲ್ಲೆಂದರಲ್ಲಿ ಹಾಕಬಾರದು. ಇದರಿಂದ ವಾತಾವರಣ ಹದಗೆಡುತ್ತದೆ.

    ಮನೆಯ ಕಸ ಹಾಕಿಸಿಕೊಳ್ಳಲು ಪಂಚಾಯಿತಿಯ ಕಸದ ವಾಹನ ಮನೆಯ ಬಾಗಿಲಿಗೆ ಬರುತ್ತಾದೆ. ಸರ್ಕಾರ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಹಮ್ಮಿಕೊಂಡಿದೆ.

    ಈ ವೇಳೆ ಪುರಾತನ ದೇವಾಲಯ ಸ್ವಚ್ಛಗೊಳಿಸುವದು, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಿ, ಸ್ವಚ್ಛ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

    ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯರಾದ ಬಸವರಾಜ ಬಿಲ್ಕಾರ, ಮರೇಗೌಡ ಬೋದುರ, ಮುಖಂಡರಾದ ಮೌಲಿ ಮೋಟಗಿ, ನಾಗರಾಜ ಕಂದಗಲ್ಲ, ಸಿಬ್ಬಂದಿಗಳಾದ ಚಂದಯ್ಯ ಹಿರೇಮಠ, ಮಹಾಂತಯ್ಯ ಕೋಮಾರಿ, ವೀರೇಶ ಕೂರ್ನಾಳ, ಬಸವರಾಜ ಶಿವಸಿಂಪಿ, ಮೈಬೂಬ ಇಟಗಿ ಇದ್ದರು.
    ಫೋಟೋ : 16 ಹನುಮಸಾಗರ 2
    ಹನುಮಸಾಗರದ ಗ್ರಾಪಂ ಕಾರ್ಯಾಲಯದಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮಕ್ಕೆ ಪಿಡಿಒ ದೇವೇಂದ್ರಪ್ಪ ಕಮತರ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯರಾದ ಬಸವರಾಜ ಬಿಲ್ಕಾರ, ಮರೇಗೌಡ ಬೋದುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts