ರಣಾಂಗಣವಾದ ಹಾಸನ ಜಿ.ಪಂ ಸಭೆ: ಎಚ್​.ಡಿ. ರೇವಣ್ಣ, ಅಧ್ಯಕ್ಷೆಯ ವಾಗ್ವಾದದ ನಡುವೆ ಪತ್ನಿ ಭವಾನಿ ಎಂಟ್ರಿ

HD Revanna
Published on

ಹಾಸನ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಆರಂಭವಾದ ಒಂದು ಗಂಟೆಯವರೆಗೂ ಅಧ್ಯಕ್ಷೆ ಶ್ವೇತಾ ದೇವರಾಜ್ ಹಾಗೂ ಮಾಜಿ ಸಚಿವ ಎಚ್​​.ಡಿ. ರೇವಣ್ಣ ನಡುವಿನ ವಾಗ್ವಾದಿಂದಾಗಿ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಜಿ.ಪಂ ಸಭೆಯಲ್ಲಿ ರೇವಣ್ಣ ಅವರು ಅಧ್ಯಕ್ಷೆ ಶ್ವೇತಾ ವಿರುದ್ಧ ಏಕವಚನ ಪ್ರಯೋಗಿಸಿದರು. ಪ್ರತಿಯಾಗಿ ರೇವಣ್ಣ ವಿರುದ್ಧ ತಿರುಗಿ ಬಿದ್ದ ಶ್ವೇತಾ ಅವರು ಮೊದಲು ದಯವಿಡ್ಟು ಗೌರವ ಕೊಡಿ. ನೀನು, ತಾನು ಎಂದು ಮಾತನಾಡಬೇಡಿ ಎಂದು ಪ್ರತಿವಾದಿಸಿದರು. ಇದನ್ನೂ ಓದಿ: ಯುವತಿ ಮನೆಯಿಂದ ಹೊರಬರುತ್ತಿದ್ದಂತೆಯೇ ಗುಂಡಿನ ದಾಳಿ ನಡೆಸಿ ಮಾಜಿ ಪ್ರಿಯಕರ ಪರಾರಿ

ಏಯ್ ನೋಡಮ್ಮ ನಾನು ನಿನ್ನ ಮಾತಾಡ್ಸಿಸ್ತಿಲ್ಲ. ನಾನು ಅವರನ್ನ ಮಾತಾಡಿಸುತ್ತಿರುವೇ ಎಂದು ಸಿಇಓ ಕಡೆ ಬೊಟ್ಟು ಮಾಡಿ ರೇವಣ್ಣ ಅವರು ಆಕ್ರೋಶ ಹೊರ ಹಾಕಿದದರು.

ಕೂಡಲೇ ಪತಿ ರೇವಣ್ಣ ಸಪೋರ್ಟ್‌ಗೆ ಎದ್ದು ಬಂದ ಪತ್ನಿ ಭವಾನಿ ರೇವಣ್ಣ, ಮೊದಲು ನೀನು ಮರ್ಯಾದೆ ಕೊಟ್ಟಿದರಲ್ಲವೇ ಅವರು ಕೊಡೋದು. ನೀವು ಮರ್ಯಾದೆ ಕೊಡೋದು ಕಲಿರಿ ಎಂದು ಅಧ್ಯಕ್ಷೆ ವಿರುದ್ಧ ಮಾತನಾಡಿ, ಪತಿ ಬಳಿ ತೆರಳಿದಾಗ ತಮ್ಮ ಸ್ಥಾನದಲ್ಲೇ ಕೂರುವಂತೆ ಹೇಳಿ ಪತ್ನಿಯನ್ನು ರೇವಣ್ಣ ವಾಪಾಸ್ ಕಳಿಸಿದರು.

ಈ ವೇಳೆ ಶ್ವೇತಾ ದೇವರಾಜ್ ಪರ ಬೆಂಬಲಕ್ಕೆ ಸಭೆಯಲ್ಲಿ ನೆರೆದಿದ್ದ ಜನ ಹಾಗೂ ಎಂಎಲ್​ಸಿ ಗೋಪಾಲಸ್ವಾಮಿ ನಿಂತರು. ಒಟ್ಟಾರೆ ಹಾಸನ ಜಿಲ್ಲಾ ಪಂಚಾಯತ್​ ಸಭಾಂಗಣ ಗೊಂದಲದ ಗೂಡಾಯಿತು. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಡ್ರಗ್ಸ್​ ಚಟಕ್ಕೆ ಬಿದ್ದು ಹೆತ್ತ ಮಗುವನ್ನೇ ಭಾರಿ ಬೆಲೆಗೆ ಮಾರಿದ ದಂಪತಿ: ಆದ್ರೆ ದೇವರ ಆಟವೇ ಬೇರೆ ಇತ್ತು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net