More

    ಸಮಾನ ನಾಗರಿಕ ಸಂಹಿತೆಯನ್ನು ಶ್ಲಾಘಿಸಿದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ

    ಪಣಜಿ : ಗೋವಾದಲ್ಲಿ ಜಾರಿಯಲ್ಲಿರುವ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಎಸ್​.ಎ.ಬೊಬ್ಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ರಚನಾಕಾರರು ಭಾರತಕ್ಕಾಗಿ ಪ್ರಸ್ತಾಪಿಸಿದ ಕಾನೂನು ವ್ಯವಸ್ಥೆ ಇದೇ ಆಗಿದ್ದು, ರಾಜ್ಯದಲ್ಲಿ ಅದನ್ನು ಪ್ರಾಯೋಗಿಕವಾಗಿ ಕಾಣುವ ಅವಕಾಶವಿದೆ ಎಂದಿದ್ದಾರೆ.

    ಗೋವಾದಲ್ಲಿ ಬಾಂಬೆ ಹೈಕೋರ್ಟ್​ನ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಚರ್ಚ್ ಹೊರಗೆ ಸುಯಿಸೈಡ್ ಬಾಂಬರ್​ಗಳ ದಾಳಿ

    “ಸಂವಿಧಾನದ ರಚನೆಕಾರರು ಭಾರತಕ್ಕಾಗಿ ಉದ್ದೇಶಿಸಿದ ಯೂನಿಫಾರಂ ಸಿವಿಲ್ ಕೋಡ್ ಗೋವಾದಲ್ಲಿ ಜಾರಿಯಲ್ಲಿದೆ. ಈ ಸಂಹಿತೆಯ ಅಡಿಯಲ್ಲಿ ನ್ಯಾಯದಾನ ಮಾಡುವ ಅವಕಾಶ ನನಗೆ ಲಭಿಸಿದೆ. ಗೋವಾದ ಎಲ್ಲಾ ನಾಗರೀಕರಿಗೂ ಧರ್ಮದ ಭೇದವಿಲ್ಲದೆ ಮದುವೆ ಮತ್ತು ಆಸ್ತಿ ವಿಚಾರದ ಕಾನೂನುಗಳು ಏಕರೂಪವಾಗಿ ಅನ್ವಯಿಸುತ್ತವೆ” ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು. (ಏಜೆನ್ಸೀಸ್)

    ಹುಟ್ಟಿನಿಂದಲೇ ಶುರುವಾಯ್ತು ಈ ಹೆಣ್ಣು ಮಕ್ಕಳ ಸಂಕಟ… ಆಸ್ಪತ್ರೆಯಲ್ಲೇ ಬಿಟ್ಟು ಕಾಣೆಯಾದ ತಾಯಿತಂದೆ!

    ‘ಸುಳ್ಳು ಸುದ್ದಿ’ ಎಂದು ಹೌಹಾರಿದ ಕಾಂಗ್ರೆಸ್ ನಾಯಕ… ಮತ್ತೆ ‘ಸಾರಿ’ ಕೇಳಿದ್ದೇಕೆ ?!

    “ರೊಕ್ಕ ಕೊಟ್ಟು ಗೋವಾಗೆ ಕಳಿಸ್ತಿದಾರೆ…” ಸಿಡಿ ಲೇಡಿಯ ಎರಡನೇ ಆಡಿಯೋದಲ್ಲಿ ಸ್ಫೋಟಕ ಮಾಹಿತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts