More

    ಹಸಿದವರಿಗೆ ಉಚಿತ ಆಹಾರ

    ಯಾದಗಿರಿ: ಕರೊನಾದಿಂದ ಜಿಲ್ಲೆ ನಲುಗಿ ಹೋಗಿದ್ದು, ನಿರ್ಗತಿಕರು, ದಿನಗೂಲಿ ನಂಬಿದ್ದ ಅಸಂಘಟಿತ ಕಾಮರ್ಿಕರು ಹಾಗೂ ಬದುಕು ಕಟ್ಟಿಕೊಳ್ಳಲು ದೂರದ ಪ್ರದೇಶಕ್ಕೆ ತೆರಳಿದ ಜನರ ಸ್ಥಿತಿ ದಯನೀಯವಾಗಿದೆ. ಇಂಥ ಸಂದರ್ಭದಲ್ಲಿ ಜಿಲ್ಲಾದ್ಯಂತ ವಿವಿಧ ಸಂಘ-ಸಂಸ್ಥೆಗಳು ಉಚಿತ ಅನ್ನ ಸಂತರ್ಪಣೆ ಮೂಲಕ ನಾಗರಿಕ ಪ್ರಜ್ಞೆ ಮೆರೆಯುತ್ತಿವೆ.

    ಗುಳೆ ಜನರು ನಗರದ ಆಯುಷ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಅವರಿದ್ದಲ್ಲಿಗೆ ಜಿಲ್ಲಾ ವಿಕಾಸ ಅಕಾಡೆಮಿಯಿಂದ ಫುಡ್ ಪ್ಯಾಕೇಟ್ ಕೊಡಲಾಗುತ್ತಿದೆ. ಜಿಲ್ಲಾ ಸಂಚಾಲಕ ಶರಣಗೌಡ ಬಾಡಿಯಾಳ ನೇತೃತ್ವದ ತಂಡ ಎಲ್ಲೆಡೆ ನಿರ್ಗರಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡತೊಗಿದೆ. ಶಹಾಪುರದಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಕರ್ತವ್ಯನಿರತ ಸಿಬ್ಬಂದಿ ಸೇರಿ ಕಾರ್ಮಿ ಕರು, ಗುಳೆ ಮಂದಿಗೆ ಅನ್ನಾಹಾರ ಒದಗಿಸತೊಡಗಿದ್ದಾರೆ.

    ಏ.14ರವರೆಗೆ ನಿರಂತರ ಅನ್ನದಾಸೋಹ ಇರಲಿದ್ದು, ಪ್ರತಿನಿತ್ಯ ಕನಿಷ್ಠ 300 ಜನರಿಗೆ ಉಚಿತ ಊಟ ಹಾಗೂ ನೀರು ವಿತರಿಸಲಾಗುವುದು. ಬೇಡಿಕೆಗೆ ಅನುಗುಣ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಒದಗಿಸಲು ಬದ್ಧರಿದ್ದೇವೆ ಎಂದು ಬಾಡಿಯಾಳ ವಿಜಯವಾಣಿಗೆ ತಿಳಿಸಿದರು. ಪ್ರಮುಖರಾದ ಖಂಡಪ್ಪ ದಾಸನ, ಸ್ವಾಮಿದೇವ ದಾಸನಕೇರಿ ಇತರರಿದ್ದರು.

    ಶಿವಾಜಿ ಸೇನೆಯಿಂದ ಊಟ: ಹಳೇ ಬಸ್ ನಿಲ್ದಾಣ ಮೊದಲಾದ ಕಡೆ ಅಖಿಲ ಕರ್ನಾಟಕ ಹಿಂದು ಸಾಮ್ರಾಟ್ ಶಿವಾಜಿ ಸೇನಾ ಸಮಿತಿಯಿಂದ ನಿರ್ಗತಿಕರಿಗೆ ಉಚಿತವಾಗಿ ಅನ್ನ ವಿತರಣೆ ಮಾಡಲಾಯಿತು. ಸೇನಾ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಶೇಗುರಕರ್ ನೇತೃತ್ವದಲ್ಲಿ ತೆರಳಿದ ಸೈನಿಕರು ಅನ್ನ-ಬೇಳೆಯನ್ನು ನಿರ್ಗತಿಕರು, ಅನಾಥರು ಭಿಕ್ಷುಕರಿಗೆ ವಿತರಿಸಿದರು. ಜನತಾ ಕರ್ಫ್ಯೂ ನಿಂದಾಗಿ ತುತ್ತು ಅನ್ನಕ್ಕೆ ಪರದಾಡುತ್ತಿರುವ ಭಿಕ್ಷುಕರು, ಅನಾಥರು, ಕೂಲಿಕಾರ್ಮಿಕರ ನೆರವಿಗೆ ಸೇನಾ ಕಾರ್ಯಕರ್ತರು ಧಾವಿಸಿದ್ದಾರೆ ಎಂದು ಪರಶುರಾಮ ಶೇಗುರಕರ್ ತಿಳಿಸಿದರು. ಸೇನಾ ಕಾರ್ಯಕರ್ತರಾದ ವೆಂಕಟೇಶ ಭೀಮನಹಳ್ಳಿ, ಹುಸೇನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts