More

    ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಪ್ರಜೆಗಳ ಒಗ್ಗಟ್ಟು ಒಡೆಯುವ ಯತ್ನ; ಜನಪರ ಚಿಂತಕಿ, ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಟೀಕೆ

    ಸಿಂಧನೂರು: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಸಿಎಎ ದೇಶದ ಪ್ರಜೆಗಳ ಒಗ್ಗಟ್ಟು ಒಡೆಯುವ ಯತ್ನವಾಗಿದೆ ಎಂದು ಜನಪರ ಚಿಂತಕಿ, ಮಹಿಳಾ ಹೋರಾಟಗಾರ್ತಿ ಕೆ.ನೀಲಾ ದೂರಿದರು.

    ನಗರದ ಸೀಶಕ್ತಿ ಭವನದಲ್ಲಿ ಮಂಗಳವಾರ ಸಂವಿಧಾನ ಹಕ್ಕು ರಕ್ಷಣಾ ಹೋರಾಟ ಸಮಿತಿ ಮಹಿಳಾ ಘಟಕ ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ವಿರೋಸಿ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸಿಎಎ ಸಂವಿಧಾನ ವಿರೋಯಾಗಿದೆ. ಬಿಜೆಪಿಯ ಧರ್ಮಾಧಾರಿತವಾದ ರಾಜಕೀಯಕ್ಕೆ ಅಮಾಯಕ ಮುಸ್ಲಿಮರು ಬಲಿಯಾಗುತ್ತಿದ್ದಾರೆ ಎಂದರು.

    ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬಡತನಕ್ಕೆ ನಿವಾರಣೆಗೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ಸಿಎಎ ಮುಂದಿಟ್ಟುಕೊಂಡು ಸಾಧನೆ ಎಂದು ಬಿಂಬಿಸುತ್ತಿರುವುದರಲ್ಲಿ ಅರ್ಥವಿಲ್ಲ. ಮಹಿಳೆಯರು ಒಗ್ಗಟ್ಟಾಗಿ ಎದುರಿಸಲು ಸಜ್ಜಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

    ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್, ಸಮುದಾಯ ಸಂಘಟನೆ ಅಧ್ಯಕ್ಷ್ಷೆ ಸರಸ್ವತಿ ಪಾಟೀಲ್ ಮಾತನಾಡಿದರು. ಗ್ರಾಮೀಣ ಕೂಲಿಕಾರರ ಸಂಘದ ಅಧ್ಯಕ್ಷೆ ವಿರುಪಮ್ಮ, ಜಮಾಅತೆ ಇಸ್ಲಾಮಿ ಹಿಂದ್ ಖಮರ್‌ಸುಲ್ತಾನಾ, ಫೀಸ್ ಾರ್ ಹುಮ್ಯಾನಿಟಿ ಅಧ್ಯಕ್ಷೆ ಡಾ.ಸಾರಾ, ಮಹಿಳಾ ಬಸವಕೇಂದ್ರ ಅಧ್ಯಕ್ಷೆ ಜಿ.ಜೆ.ದೇವಿರಮ್ಮ, ಸುಧಾಬಾಯಿ, ಶಕುಂತಲಾ ದೇವರಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts