More

    ಸಿನಿಮಾ ಶೂಟಿಂಗ್ ವೇಳೆ ಕರೊನಾ ನಿಯಮ ಉಲ್ಲಂಘನೆ

    ಗುಂಡ್ಲುಪೇಟೆ: ಕರೊನಾ ಸೋಂಕು ಹೆಚ್ಚಳದ ನಡುವೆಯೂ ಸರ್ಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ತಾಲೂಕಿನ ಹಂಗಳ ಗ್ರಾಮದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

    ನಟ ಮುರಳಿ ನಟನೆಯ ‘ಮದಗಜ’ ಚಿತ್ರದ ಚಿತ್ರೀಕರಣ ಗ್ರಾಮದಲ್ಲಿ ನಡೆಯುತ್ತಿದ್ದು, ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಚಿತ್ರೀಕರಣ ನೋಡಲು 500ಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಚಿತ್ರೀಕರಣ ನಡೆಯುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿದ ಅಕ್ಕಪಕ್ಕದ ಗ್ರಾಮಗಳ ಜನತೆ ಸ್ಥಳಕ್ಕೆ ಆಗಮಿಸಿದ್ದರಿಂದ ಕೆಲ ಕಾಲ ಜನದಟ್ಟಣೆ ಉಂಟಾಯಿತು. ‘ಚಿತ್ರೀಕರಣ ನಡೆಸಲು ಅನುಮತಿ ನೀಡಿಲ್ಲ ಎಂಬುದಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಹೇಳಿದ್ದಾರೆ’ ಎಂದು ತಾಪಂ ಇಒ ವಿ.ಪಿ. ಕುಲದೀಪ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts