More

    ಸ್ವಯಂ ಬಂದ್: ಸರ್ಕಾರ ಹೇಳೋಕೆ ಮುನ್ನವೇ ಚಿತ್ರರಂಗ ಲಾಕ್

    ಎಲ್ಲವೂ ಸರಿಯಾಯ್ತು ಎನ್ನುತ್ತಿರುವಾಗಲೇ ಕರೊನಾ ಹಾವಳಿ ಮತ್ತೆ ಶುರುವಾಗಿದೆ. ಶೇ. 50ರಷ್ಟಿದ್ದ ಸಿನಿಮಾ ಪ್ರದರ್ಶನಕ್ಕೂ ಕಾಮೋಡ ಕವಿದಿದೆ. ಚಿತ್ರಮಂದಿರಗಳಲ್ಲಿ ಈಗಷ್ಟೇ ಬಿಡುಗಡೆಯಾಗಿದ್ದ ಚಿತ್ರಗಳು ಪ್ರದರ್ಶನ ಮೊಟಕುಗೊಳಿಸಿ, ಚಿತ್ರ ವೀಕ್ಷಣೆಗೆ ಕಾಲ ಪಕ್ವವಾದಾಗ ಮತ್ತೆ ಮರು ಬಿಡುಗಡೆ ಮಾಡುವುದಾಗಿ ಚಿತ್ರತಂಡಗಳು ಹೇಳಿಕೊಂಡಿವೆ. ಇತ್ತ ಚಿತ್ರೀಕರಣದಲ್ಲಿದ್ದ ಸಿನಿಮಾ ಟೀಮ್ಳ ಸ್ಥಿತಿಯೂ ಅತಂತ್ರವಾಗಿದೆ.

    ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವುದರಿಂದ, ಅಗತ್ಯ ಸೇವೆ ಹೊರತುಪಡಿಸಿ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಸರ್ಕಾರ ನಿರ್ಬಂಧ ಹೇರಿದೆ. ಹೀಗಿರುವಾಗ ಕೆಲ ಚಿತ್ರತಂಡಗಳು ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದು, ಮುಂದೇನು ಎಂಬಂಥ ಸ್ಥಿತಿ ನಿರ್ವಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಮಿನರ್ವ ಮಿಲ್​ನಲ್ಲಿ ನಡೆಯುತ್ತಿದ್ದ ಉಪೇಂದ್ರ ಅಭಿನಯದ ‘ಕಬ್ಜ’ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಅದೇ ರೀತಿ ಇತ್ತೀಚೆಗಷ್ಟೇ ಅದ್ದೂರಿ ಸೆಟ್​ನಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ಮಾಡಿಕೊಂಡು, ಏ. 21ರಿಂದ ಮತ್ತೊಂದು ಹಂತದ ಶೂಟಿಂಗ್ ಮಾಡಲು ಪ್ಲಾನ್ ಮಾಡಿದ್ದ ‘ಜೇಮ್್ಸ’ ತಂಡವೂ ಶೂಟಿಂಗ್​ನಿಂದ ಹಿಂದೆ ಸರಿದಿದೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ದೇಶಕ ಚೇತನ್, ‘ಈಗಾಗಲೇ ‘ಜೇಮ್್ಸ’ ಚಿತ್ರದ ಶೇ.70 ಭಾಗದ ಶೂಟಿಂಗ್ ಮುಗಿದಿದೆ. ಏ. 21ರಿಂದ ಶೂಟಿಂಗ್ ಶುರುವಾಗಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಳಿಸಿದ್ದೇವೆ. ಸರ್ಕಾರದ ಆದೇಶದಂತೆ ಮೇ 4ರ ವರೆಗೂ ನಮ್ಮ ಬಳಿ ಉತ್ತರವಿಲ್ಲ’ ಎನ್ನುತ್ತಾರೆ.

    ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್​ನ ‘ಸಖತ್’ ಚಿತ್ರತಂಡವು, ಕೋವಿಡ್ ಎರಡನೇ ಅಲೆ ಎಂಬ ಹಾವಳಿ ಶುರುವಾಗಿದ್ದೇ ತಡ ಚಿತ್ರೀಕರಣ ಸ್ಥಗಿತಗೊಳಿಸಿದೆ. ‘ಇದೇ ಸೋಮವಾರದಿಂದ ಶೂಟಿಂಗ್ ಮಾಡುವ ಪ್ಲಾನ್ ಇತ್ತು. ಆದರೆ, ಎರಡನೇ ಅಲೆ ಹಿನ್ನೆಲೆ ಸದ್ಯಕ್ಕೆ ಎಲ್ಲವೂ ನಿಂತಿದೆ. ಚಿತ್ರದ ಶೇ. 60 ಭಾಗದ ಚಿತ್ರೀಕರಣ ಮುಗಿದಿರುವುದರಿಂದ ಅದರ ಕೆಲಸದಲ್ಲಿಯೇ ತೊಡಗಿಸಿಕೊಳ್ಳಲಿದ್ದೇವೆ’ ಎನ್ನುತ್ತಾರೆ ಸುನಿ.

    ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಹರ್ಸಲ್ ಮುಗಿಸಿ ಶೂಟಿಂಗ್ ಶುರುಮಾಡಿತ್ತು. ಒಂದಷ್ಟು ದಿನಗಳ ಚಿತ್ರೀಕರಣವೂ ನಡೆದಿತ್ತು. ಇದೀಗ ಗುರುವಾರ ಚಿತ್ರೀಕರಣ ಮೊಟಕುಗೊಳಿಸಿ, ಪ್ಯಾಕ್ ಅಪ್ ಮಾಡಿದೆ. ಹರಿ ಸಂತೋಷ್ ನಿರ್ದೇಶನದ ‘ಬೈಟ್ ಲವ್’ ಚಿತ್ರದ ಶೂಟಿಂಗ್ ಕೈಬಿಟ್ಟು ಮೂರು ದಿನಗಳಾದವು. ‘ನಮಗೆ ನಮ್ಮ ತಂಡದ ಆರೋಗ್ಯ ಮುಖ್ಯ. ಇನ್ನು 10 ದಿನದ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗ ನಷ್ಟವಾದರೂ ಪರವಾಗಿಲ್ಲ, ಶೂಟಿಂಗ್ ಕೈಬಿಡುವಂತೆ ನಿರ್ವಪಕರು ಹೇಳಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎನ್ನುತ್ತಾರೆ. ಒಟ್ಟಿನಲ್ಲಿ ಬಿಡುಗಡೆಯಾದ ಚಿತ್ರಗಳು ಪ್ರದರ್ಶನ ಸ್ಥಗಿತಗೊಳಿಸಿದರೆ, ಚಿತ್ರೀಕರಣ ಹಂತದಲ್ಲಿನ ಸಿನಿಮಾಗಳು ಮರಳಿ ಮನೆ ಸೇರಿವೆ. ಚಿತ್ರರಂಗ ಲಯಕ್ಕೆ ಮರಳಿತು ಎನ್ನುವಷ್ಟರಲ್ಲಿಯೇ ಗಾಯದ ಮೇಲೆ ಕರೊನಾ ಎರಡನೇ ಅಲೆ ಬರೆ ಎಳೆದಿದೆ.

    ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ

    ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದರೆ ಆರೋಗ್ಯ ಇಲಾಖೆ ಅಧಿಕಾರಿ​ ಲಂಚ ಸಂಗ್ರಹಿಸುತ್ತಿದ್ರು; ಕಾರಿನಲ್ಲಿ ಕಂತೆ ಕಂತೆ ಹಣ!

    ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts