More

    ರಾಯರ ಆರಾಧನೆ ಸಂಪನ್ನ

    ಮುದಗಲ್: ಸ್ಥಳೀಯ ಕಿಲ್ಲಾದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆ ಮಹೋತ್ಸವ ಭಾನುವಾರ ಸಂಭ್ರಮದಿಂದ ಸಂಪನ್ನವಾಯಿತು.
    ಬೆಳಗ್ಗೆ ರಾಯರ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ ನಂತರ ಅಲಂಕಾರ ಮಾಡಲಾಯಿತು. ಮಧ್ಯಾಹ್ನ ಅನೇಕ ಅರ್ಚಕರ ನೇತೃತ್ವ ಹಾಗೂ ಭಜನೆ, ವಾದ್ಯಮೇಳದೊಂದಿಗೆ ಪಲ್ಲಕ್ಕಿ, ತೊಟ್ಟಿಲು ಸೇವೆ ಹಾಗೂ ರಥೋತ್ಸವ ಜರುಗಿತು. ಭಕ್ತರು ಭಜನೆ, ಕೀರ್ತನೆ ಮೂಲಕ ರಾಘವೇಂದ್ರ ಸ್ವಾಮಿಗಳ ಧ್ಯಾನ ಮಾಡಿದರು. ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮೂರು ದಿನ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಭಕ್ತರು ಭಾಗಿಯಾಗಿದ್ದರು.
    ಡಾ.ಗುರುರಾಜ ದೇಶಪಾಂಡೆ, ವೆಂಕಟೇಶ ಕುಲಕರ್ಣಿ, ನಾರಾಯಣ ರಾವ್ ದೇಶಪಾಂಡೆ, ವಿಜ್ಞಾನಿ ಡಾ.ರಮೇಶ ಬೆಂಗಳೂರು, ಅನಂತರಾವ್ ದೇಶಪಾಂಡೆ,ಯಲ್ಲೋಜಿ ರಾವ್ ಮಸ್ಕಿ, ಗುರುರಾಜ ದೇಶಪಾಂಡೆ, ಹನುಮೇಶ ಪಟವಾರಿ, ವಿಶ್ವನಾಥ ದೇಸಾಯಿ, ರಾಘವೇಂದ್ರ ಗುಮಾಸ್ತೆ, ಶ್ರೀನಿವಾಸ ಸುರಪುರು, ವಿಜಯ ಪಾಟೀಲ್ ಇತರರಿದ್ದರು.

    ರಾಯರ ಆರಾಧನೆ ಸಂಪನ್ನ
    ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಹಿನ್ನೆಲೆಯಲ್ಲಿ ಮುದಗಲ್‌ನಲ್ಲಿರುವ ರಾಯರ ಬೃಂದಾವನವನ್ನು ಅಲಂಕರಿಸಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts