More

    ಶಾಲೆಗೆ ಚಕ್ಕರ್… ಕೆಲಸಕ್ಕೆ ಹಾಜರ್..

    ಕಲಘಟಗಿ: ತಾಲೂಕಿನಲ್ಲಿ ಬಾಲ ಕಾರ್ವಿುಕರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳಿವೆ. ಅನೇಕ ಸಣ್ಣ, ಮಧ್ಯಮ ಕೈಗಾರಿಕೆಗಳು, ಹೋಟೆಲ್​ಗಳು, ಅಂಗಡಿ ಮುಂಗಟ್ಟು, ಗ್ಯಾರೇಜ್ ಮತ್ತಿತರೆಡೆ ನೂರಾರು ಬಾಲ ಕಾರ್ವಿುಕರು ದುಡಿಯುತ್ತಿದ್ದಾರೆ. ತಾಲೂಕಿನಲ್ಲಿ ಹೆದ್ದಾರಿಗೆ ಹೊಂದಿಕೊಂಡು ಹಾಗೂ ಅರಣ್ಯದಂಚಿನಲ್ಲಿ 10 ತಾಂಡಾಗಳಿವೆ. ಆರ್ಥಿಕ ಪರಿಸ್ಥಿತಿ ಮತ್ತಿತರ ಕಾರಣಗಳಿಂದಾಗಿ ಈ ತಾಂಡಾಗಳ ಬಹುತೇಕ ಮಕ್ಕಳು ಶಾಲೆ ಬದಲು ಕೆಲಸಕ್ಕೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.

    ಇದ್ದೂ ಇಲ್ಲದಂತಿದೆ ಕಚೇರಿ

    ತಾಲೂಕು ಕೇಂದ್ರದಲ್ಲಿನ ಕಾರ್ವಿುಕ ನಿರೀಕ್ಷಕರ ಕಚೇರಿ ಇದ್ದೂ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಕಾರ್ವಿುಕ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಶೋಕ ಒಡೆಯರ್ ಎಂಬುವರು ಕಲಘಟಗಿಯ ಕಾರ್ವಿುಕ ನಿರೀಕ್ಷಕರ ಕಚೇರಿಯಲ್ಲಿ ಎರಡು ವರ್ಷಗಳಿಂದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೀರಿಕ್ಷಕರ ಕಚೇರಿಯಲ್ಲಿ ಕಾರ್ವಿುಕ ನಿರೀಕ್ಷಕರು, ಒಬ್ಬ ಅಟೆಂಡರ್ ಹುದ್ದೆ ಖಾಲಿ ಇದೆ. ಸದ್ಯ ಒಬ್ಬ ತಾತ್ಕಾಲಿಕ ಕಂಪ್ಯೂಟರ್ ಆಪರೇಟರ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಭಾರ ಕಾರ್ವಿುಕ ನಿರೀಕ್ಷಕರು ಆಗಾಗ ಕಚೇರಿಗೆ ಬಂದು ಹೋಗುತ್ತಾರೆ. ಆದರೆ, ಕಾಟಾಚಾರಕ್ಕೆ ಬಾಲ ಕಾರ್ವಿುಕರ ವಿರೋಧಿ ದಿನ ಆಚರಣೆ, ನಾಮ್ೆವಾಸ್ತೆಗೆ ಕೆಲ ಅಂಗಡಿಗಳಲ್ಲಿ ಬಾಲ ಕಾರ್ವಿುಕರ ಬಳಕೆ ನಿಷೇಧ ಮತ್ತು ನಿಯಂತ್ರಣ ಕುರಿತ ಫಲಕಗಳನ್ನು ಅಳವಡಿಸಿದ್ದು ಬಿಟ್ಟರೆ ಇಲಾಖೆಯಿಂದ ಯಾವುದೇ ಗಮನಾರ್ಹ ಕೆಲಸಗಳಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ನಮ್ಮ ಸಂಸ್ಥೆಯಿಂದ ಬಾಲಕಾರ್ವಿುಕರ ನಿಮೂಲನೆಯ ಕುರಿತು ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ, ಕಾರ್ವಿುಕ ಇಲಾಖೆಯವರು ಸ್ಪಂದಿಸುತ್ತಿಲ್ಲ.

    | ಬಿ.ವೈ. ಪಾಟೀಲ

    ಕಲ್ಯಾಣ ಕಿರಣ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ

    ಎರಡು-ಮೂರು ಕಡೆ ಚಾರ್ಜ್ ಇರುವುದರಿಂದಾಗಿ ನಿಯಮಿತವಾಗಿ ಬರಲಾಗುತ್ತಿಲ್ಲ. ಕಲಘಟಗಿ ತಾಲೂಕಿನಲ್ಲಿ ಬಾಲಕಾರ್ವಿುಕರ ಅಂಕಿ ಸಂಖ್ಯೆ ನಮ್ಮಲ್ಲಿ ಸಿಗುವುದಿಲ್ಲ. ಅವರಿರುವ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ತಾಲೂಕಿನಲ್ಲಿ ಶಾಲೆಯಿಂದ ಹೊರಗುಳಿದ 97 ಮಕ್ಕಳು ಇದ್ದಾರೆ.

    | ಅಶೋಕ ಒಡೆಯರ ಪ್ರಭಾರ ಕಾರ್ವಿುಕ ನಿರೀಕ್ಷಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts