More

    ಪ್ರೀತಿಯಿಂದ ಬಾಳಿದರೆ ಭೂಮಿಯೇ ಸ್ವರ್ಗ

    ಚಿಕ್ಕಮಗಳೂರು: ದ್ವೇಷ, ಅಸೂಯೆ, ಕೋಪ, ಹಗೆತನದಂತಹ ದುರ್ಗಣಗಳನ್ನು ಬಿಟ್ಟು ಕ್ಷಮೆ, ಪ್ರೀತಿ, ಪರಸ್ಪರ ಅನ್ಯೋನ್ಯತೆಯಿಂದ ಪ್ರೀತಿಸಿ ಬಾಳಿದರೆ ಭೂ ಲೋಕದಲ್ಲೇ ಸ್ವರ್ಗ ಕಾಣಬಹುದು ಎಂದು ಕ್ರೖೆಸ್ತ ದೇವಾಲಯಗಳ ಧರ್ವಧ್ಯಕ್ಷ ಡಾ. ಅಂತೋಣಿಸ್ವಾಮಿ ಹೇಳಿದರು.

    ಕ್ರಿಸ್ಮಸ್ ಅಂಗವಾಗಿ ಗುರುವಾರ ಶಾಸಕ ಸಿ.ಟಿ.ರವಿ ಬಿಷಪ್ ಹೌಸ್ ಹಾಗೂ ಚರ್ಚ್​ಗಳಿಗೆ ಭೇಟಿ ನೀಡಿ ಧರ್ಮಗುರುಗಳನ್ನು ಗೌರವಿಸಿ ಶುಭಕೋರಿದ ನಂತರ ಮಾತನಾಡಿದರು.

    ಯೇಸುಸ್ವಾಮಿ ಬೋಧಿಸಿದ ಸಂದೇಶಗಳನ್ನು ಭಕ್ತರು ಪಾಲಿಸಬೇಕು. ಈ ಜಯಂತಿ ಎಲ್ಲ ಭಕ್ತರಲ್ಲೂ ಸಂತೋಷ ತರುತ್ತದೆ. ದೇವರ ಮತ್ತು ಪರರ ಪ್ರೀತಿ ಸಂದೇಶ ಪಾಲಿಸಬೇಕು ಎಂದರು.

    ಶಾಸಕ ಸಿ.ಟಿ.ರವಿ ಅವರು ಕ್ರೖೆಸ್ತ ಸಮುದಾಯಕ್ಕೆ ಉತ್ತಮ ಅವಕಾಶಗಳನ್ನು ನೀಡುತ್ತ ಸಹಕರಿಸುತ್ತಿದ್ದಾರೆ. ಯಾವುದೆ ಭೇದ ತೋರದೆ ಜನಸಾಮಾನ್ಯರೊಂದಿಗೆ ಪ್ರೀತಿ, ವಿಶ್ವಾಸದಿಂದ ಬೆರೆತು ಎಲ್ಲರನ್ನು ಒಗ್ಗೂಡಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸಿದ್ದರ ಫಲವಾಗಿ ನಾಲ್ಕನೇ ಬಾರಿ ಜನ ಆಯ್ಕೆ ಮಾಡಿದ್ದಾರೆ. ಅಲ್ಲದೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ. ಹೆಚ್ಚು ವರ್ಷ ಸೇವಾಭಾಗ್ಯ ಜನರಿಗೆ ದೊರೆಯಲು ದೇವರು ಆಶೀರ್ವದಿಸಲಿ ಎಂದು ಹಾರೈಸಿದರು.

    ಕರೊನಾ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದನ್ನು ಸಮಾಜದಿಂದ ಮಾಯಾವಾಗುವಂತೆ ಶೀಘ್ರದಲ್ಲಿ ಲಸಿಕೆ ಕಂಡು ಹಿಡಿಯುವಂತೆ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ ಎಂದರು.

    ಶಾಸಕ ಸಿ.ಟಿ.ರವಿ ಮಾತನಾಡಿ, ಯಾವುದೆ ಕಾಲದಲ್ಲೂ ನನನ್ನು ಬೇರೆ ಎಂದು ಭಾವಿಸದೆ ನಿಮ್ಮೊಳಗೊಬ್ಬರಾಗಿ ಪ್ರೀತಿ, ವಿಶ್ವಾಸ ತುಂಬಿದ್ದೀರಿ. ಪ್ರತಿ ವರ್ಷ ಕ್ರಿಸ್ಮಸ್ ಪೂರ್ವದಲ್ಲಿ ಧರ್ವಧ್ಯಕ್ಷರು, ಧರ್ಮಗುರುಗಳ ಆಶೀರ್ವಾದ ಪಡೆದು ಈ ಮೂಲಕ ಕ್ರೖೆಸ್ತರಿಗೆ ಶುಭಕೋರುವ ಪದ್ಧತಿ ಬೆಳೆಸಿಕೊಂಡು ಬರಲಾಗಿದೆ. ಬಡವರ ಕಡೆ ದೃಷ್ಟಿ, ಜಿಲ್ಲೆ ಅಭಿವೃದ್ಧಿಗೆ ಒತ್ತು ಕೊಡಬೇಕೆಂಬ ಗುರುಗಳ ಅಪೇಕ್ಷೆಯನ್ನು ಓರ್ವ ಜನಪ್ರತಿನಿಧಿಯಾಗಿ ಆ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಡೆಸಿ ರಾಜಧರ್ಮ ಪಾಲಿಸುವುದಾಗಿ ಹೇಳಿದರು.

    ಸಿ.ಟಿ.ರವಿ ಅವರು ವಿಜಯಪುರ ಪವಿತ್ರ ಕುಟುಂಬ ದೇವಾಲಯದಲ್ಲಿ ಧರ್ಮಗುರು ಫಾ.ಪೀಠರ್ ಬ್ರಾಂಕ್, ಸಂತ ಜೋಸೇಫರ ಪ್ರಧಾನ ದೇವಾಲಯ, ಬೇಲೂರು ರಸ್ತೆ ಸಂತ ಆಂದ್ರೇಯನ ದೇವಾಲಯಗಳಿಗೆ ಸಿ.ಟಿ.ರವಿ ತೆರಳಿ ಧರ್ಮಗುರುಗಳಿಗೆ ಹಬ್ಬದ ಶುಭ ಕೋರಿದರು.

    ಸಗಾಯಿದಾಸ್, ಫಾ.ಅಂತೋಣಿ ಪಿಂಟೊ, ಫಾದರ್ ವಿಜಯ್ಕುಮಾರ್, ಫಾ.ಜಾರ್ಜ್ ಫರ್ನಾಂಡಿಸ್, ರೋನಿ, ಜೇಮ್್ಸ, ಜೋಸೆಫ್, ರಾಬರ್ಟ್, ಸತ್ಯರಾಜ್, ಗೀತಾ, ಸ್ಟೀವನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts