More

    VIDEO | ಟಿ10 ಪಂದ್ಯದಲ್ಲಿ 22 ಎಸೆತಗಳಲ್ಲಿ 84 ರನ್ ಸಿಡಿಸಿದ ಕ್ರಿಸ್ ಗೇಲ್!

    ಅಬುಧಾಬಿ: ಟಿ20 ಕ್ರಿಕೆಟ್‌ನಲ್ಲಿ ಈಗಾಗಲೆ ಅಬ್ಬರದ ಬ್ಯಾಟಿಂಗ್ ನಿರ್ವಹಣೆಯ ಮೂಲಕ ವಿಖ್ಯಾತಿ ಪಡೆದಿರುವ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಇದೀಗ ಟಿ10 ಕ್ರಿಕೆಟ್ ಮಾದರಿಯಲ್ಲಿ ಅದಕ್ಕಿಂತ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗಮನಸೆಳೆದಿದ್ದಾರೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಕ್ರಿಕೆಟ್ ಲೀಗ್‌ನಲ್ಲಿ ಕೇವಲ 22 ಎಸೆತಗಳಲ್ಲೇ ಅಜೇಯ 84 ರನ್ ಸಿಡಿಸುವ ಮೂಲಕ ಕ್ರಿಸ್ ಗೇಲ್ ಬ್ಯಾಟಿಂಗ್ ಅಬ್ಬರ ತೋರಿದ್ದಾರೆ. 6 ಬೌಂಡರಿ ಮತ್ತು 9 ಸಿಕ್ಸರ್ ಒಳಗೊಂಡ ಅಮೋಘ ಇನಿಂಗ್ಸ್ ಮೂಲಕ 41 ವರ್ಷದ ಕ್ರಿಸ್ ಗೇಲ್, ಟೀಮ್ ಅಬುಧಾಬಿ ತಂಡಕ್ಕೆ ಮರಾಠ ಅರೇಬಿಯನ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ತಂದುಕೊಟ್ಟರು.

    ಸೂಪರ್ ಲೀಗ್ ಹಂತದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮರಾಠ ಅರೇಬಿಯನ್ಸ್ ತಂಡ, ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್‌ಗೆ 97 ರನ್ ಪೇರಿಸಿತು. ಪ್ರತಿಯಾಗಿ ಲ್ಯೂಕ್ ರೈಟ್ ಸಾರಥ್ಯದ ಟೀಮ್ ಅಬುಧಾಬಿ, ಕ್ರಿಸ್ ಗೇಲ್ ಆರ್ಭಟದಿಂದ 5.3 ಓವರ್‌ಗಳಲ್ಲೇ 1 ವಿಕೆಟ್‌ಗೆ 100 ರನ್ ಪೇರಿಸಿ ಜಯಿಸಿತು. ಕ್ರಿಸ್ ಗೇಲ್ ಮೊದಲ ವಿಕೆಟ್‌ಗೆ ಪೌಲ್ ಸ್ಟರ್ಲಿಂಗ್ (11) ಜತೆಗೆ 14 ಎಸೆತಗಳಲ್ಲೇ 47 ರನ್ ಜತೆಯಾಟವಾಡಿದರು. ಬಳಿಕ ಜೋಯಿ ಕ್ಲಾರ್ಕ್ (5*) ಜತೆಗೆ ಮುರಿಯದ 2ನೇ ವಿಕೆಟ್‌ಗೆ 19 ಎಸೆತಗಳಲ್ಲೇ 53 ರನ್ ದೋಚಿ ಇನ್ನೂ 27 ಎಸೆತಗಳು ಬಾಕಿ ಉಳಿದಿರುವಂತೆಯೇ ಗೆಲುವು ತಂದರು.

    ಇದನ್ನೂ ಓದಿ: ಚೆನ್ನೈ ಟೆಸ್ಟ್‌ಗೆ ಆಯ್ಕೆ ಗೊಂದಲದಲ್ಲಿ ಟೀಮ್ ಇಂಡಿಯಾ; 2ನೇ ವೇಗಿ, ಆಲ್ರೌಂಡರ್ ಯಾರು?

    ಎದುರಿಸಿದ ಮೊದಲ 2 ಎಸೆತಗಳಲ್ಲಿ ಒಂದೂ ರನ್ ಗಳಿಸದ ಕ್ರಿಸ್ ಗೇಲ್ ಬಳಿಕ 10 ಎಸೆತಗಳಲ್ಲಿ 50 ರನ್ ಸಿಡಿಸಿದರು. ಈ ಮೂಲಕ 12 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಕ್ರಿಸ್ ಗೇಲ್ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ 2 ಬಾರಿ 12 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಇದಕ್ಕೂ ಮುನ್ನ ಐಪಿಎಲ್ ಟಿ20 ಪಂದ್ಯದಲ್ಲಿ ಅವರು 12 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ್ದರು.

    ಕ್ರಿಸ್ ಗೇಲ್ ಅವರ 22 ಎಸೆತಗಳ ಅಜೇಯ ಇನಿಂಗ್ಸ್‌ನಲ್ಲಿ ಈ ರೀತಿಯಾಗಿ ರನ್ ಪ್ರವಾಹ ಹರಿಯಿತು: 0, 0, 4, 4, 4, 6, 6, 6, 6, 4, 6, 4, 6, 1, 6, 6, 1, 4, 2, 1, 1, 6.

    ವಕೀಲೆಯನ್ನು ವಿವಾಹವಾದ ಕ್ರಿಕೆಟಿಗ ಜೈದೇವ್ ಉನಾದ್ಕತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts