More

    ಚಿತ್ತಾಪುರ; ಭೀಮನಳ್ಳಿ ಗ್ರಾಪಂನಲ್ಲಿ ಹಣ ದುರ್ಬಳಕೆ

    ಚಿತ್ತಾಪುರ: ಭೀಮನಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2023-24ರ 15ನೇ ಹಣಕಾಸು ಯೋಜನೆಯಡಿ ಅಧ್ಯಕ್ಷೆ ಹಾಗೂ ಪ್ರಭಾರಿ ಪಿಡಿಒ ಸೇರಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಸದಸ್ಯ ಅಯ್ಯಪ್ಪ ಪವಾರ್ ರಾಮತೀರ್ಥ ಆರೋಪಿಸಿದ್ದಾರೆ.

    ಪ್ರಭಾರಿ ಪಿಡಿಒ ಅನೀಲಕುಮಾರ ಹಾಗೂ ಅಧ್ಯಕ್ಷೆ ಘಮಲಿಬಾಯಿ ಸೇರಿ 15ನೇ ಹಣಕಾಸು ಯೋಜನೆಯಡಿ ಕ್ರಿಯಾಯೋಜನೆ ತಯಾರಿಸದೆ, ಸಭೆ ಕರೆಯದೆ, ಯಾವೊಬ್ಬ ಸದಸ್ಯರ ಗಮನಕ್ಕೆ ತರದೆ 9.87 ಲಕ್ಷ ರೂ. ಸಾಮಗ್ರಿ ಖರೀದಿಸಿದ ಬಗ್ಗೆ ನಕಲಿ ಬಿಲ್ ಸೃಷ್ಟಿಸಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಹಾಗೂ ನಿಯಮಗಳು 2000 ಕಲಂ 4(2)ಅಡಿ ಹಾಗೂ ಹಣಕಾಸು ಇಲಾಖೆ ನಿರ್ದೇಶನದಂತೆ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಸಾಮಗ್ರಿ ಖರೀದಿಗೆ ಈ ಟೆಂಡರ್ ಕರೆಯಬೇಕು. ಆದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದAತೆ ವಿವಿಧ ಏಜೆನ್ಸಿಗಳಿಗೆ ನಕಲಿ ಬಿಲ್ ಮೂಲಕ ಹಣ ಪಾವತಿಸಿ ಭ್ರಷ್ಟಾಚಾರ ಎಸೆಗಿದ್ದಾರೆ. ತನಿಖೆ ನಡೆಸಿ ದುರ್ಬಳಕೆಯಾದ ಹಣ ವಸೂಲಿ ಜತೆಗೆ ಪಿಡಿಒ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಸೇವೆಯಿಂದ ವಜಾ ಮಾಡಬೇಕು. ಗ್ರಾಪಂ ಅಧ್ಯಕ್ಷರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

    ಜಿಪಂ ಸಿಇಒಗೆ ಸಲ್ಲಿಸಿದ ದೂರಿನನ್ವಯ ತನಿಖೆ ಮಾಡಲು ತಾಪಂ ಇಒ ಮತ್ತು ಲೆಕ್ಕಾಧಿಕಾರಿಗೆ ಸೂಚಿಸಲಾಗಿದೆ. ಆದರೆ ಇವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹೀಗಾಗಿ ಇವರ ಬದಲಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತನಿಖೆಗೆ ನೇಮಿಸಬೇಕು ಇಲ್ಲವೆ ನ್ಯಾಯಾಂಗ ತನಿಖೆ ಮಾಡಬೇಕು. ವಾರದೊಳಗೆ ತನಿಖೆ ನಡೆಸದಿದ್ದರೆ ತಾಪಂ ಎದುರು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

    ಗ್ರಾಪಂ ಸದಸ್ಯರಾದ ಪ್ರೇಮಕುಮಾರ ದೊಡ್ಮನಿ, ಸಂಗೀತಾ ಮೋನಪ್ಪ, ಮಂಜುಳಾ ಶಾಂತರಾಜ, ಸುಹಾಸಿನಿ ಸಾಮುವೆಲ್, ಲಕ್ಷಿö್ಮÃ ಅಯ್ಯಪ್ಪ ಪವಾರ್, ಆಶಾ ಬಸವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts