More

    ದುಶ್ಚಟಗಳಿಂದ ನೆಮ್ಮದಿ ಹಾಳು

    ಚಿತ್ತಾಪುರ: ಆನೇಕರು ದುಶ್ಚಟಗಳ ದಾಸರಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುವುದರ ಜತೆಗೆ ಅಪರಾಧ ಚಟುವಟಿಕೆಗಳಿಗೆ ಕಾರಣರಾಗುತ್ತಿದ್ದಾರೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.

    ಮಹಾತ್ಮ ಗಾಂಧೀಜಿರವರ ೧೫೫ನೇ ಜಯಂತಿ ನಿಮಿತ್ತ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಡಾ.ವೀರೇಂದ್ರ ಹೆಗಡೆ ಹಾಗೂ ಮಾತೃಶ್ರೀ ಡಾ.ಹೇಮಾವತಿ ಅವರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಘಟಕ ಹಾಗೂ ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಗುಟ್ಕಾ, ಮದ್ಯ ವ್ಯಸನಿಯಾಗುತ್ತಿದ್ದಾರೆ. ಇದರಿಂದ ಸಾಮಾಜಿಕ ನೆಮ್ಮದಿ ಹಾಗೂ ಬಹು ಅಂಗಾಂಗ ವೈಫಲ್ಯಗಳು ಎದುರಾಗುತ್ತದೆ. ಜತೆಗೆ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಹೀಗಾಗಿ ಪಾಲಕರು ತಮ್ಮ ಮಕ್ಕಳ ಬಗೆಗೆ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

    ಅಂಬೇಡ್ಕರ್ ವೃತ್ತದಿಂದ ಅಕ್ಕಮಹಾದೇವಿ ದೇವಸ್ಥಾನದವರೆಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಕರ್ಷಕ ಜನಜಾಗೃತಿ ಜಾಥಾ ನಡೆಯಿತು.

    ಯಾದಗಿರಿ ಜಿಲ್ಲಾ ವೇದಿಕೆ ನಿರ್ದೇಶಕ ಕಮಲಾಕ್ಷ ಅಧ್ಯಕ್ಷತೆ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಮುಕ್ತಾರ್ ಪಟೇಲ್, ಪುರಸಭೆ ಸದಸ್ಯ ಶ್ಯಾಮ ಮೇಧಾ, ಮುಖಂಡರಾದ ನಾಗರೆಡ್ಡಿ ಗೋಪಶೇನ್, ಪ್ರಹ್ಲಾದ ವಿಶ್ವಕರ್ಮ ಮಾತನಾಡಿದರು.

    ಶಿವಕುಮಾರ್, ಮೇಲೂರ, ಕೃಷ್ಣಕುಮಾರ, ಸುರೇಶ ಸಾತನೂರ ಇತರರಿದ್ದರು. ಯೋಜನಾಧಿಕಾರಿ ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಬಸಯ್ಯ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts