More

    ಅದೃಷ್ಟಶಾಲಿಗಳನ್ನು ಅರಸಿ ಬಂದವು ಆಕರ್ಷಕ ಬಹುಮಾನಗಳು

    ಚಿತ್ರದುರ್ಗ: ದಸರಾ, ದೀಪಾವಳಿ ಹಿನ್ನೆಲೆಯಲ್ಲಿ ವಿಜಯವಾಣಿ ದಿನಪತ್ರಿಕೆಯಿಂದ ಆಯೋಜಿಸಿದ್ದ 12 ನೇ ವರ್ಷದ ವಿಜಯೋತ್ಸವ-2023ರ ಶಾಪಿಂಗ್ ಉತ್ಸವದ ಅದೃಷ್ಟಶಾಲಿಗಳ ಆಯ್ಕೆ ಶನಿವಾರ ಚಿತ್ರದುರ್ಗದ ವಿಜಯವಾಣಿ ಕಚೇರಿಯಲ್ಲಿ ನಡೆಯಿತು.

    ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದರ್​ಕುಮಾರ್ ಮೀನಾ ಹಾಗೂ ಚಿತ್ರದುರ್ಗ, ದಾವಣಗೆರೆಯ ಪಾಲುದಾರ ಡೀಲರ್​ಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    ಪಾಲುದಾರರ ಶೋರೂಂ, ಅಂಗಡಿಗಳಲ್ಲಿ ಮೊಬೈಲ್ ಮೂಲಕ ನೋಂದಾಯಿಸಿಕೊಂಡ ನಂಬರ್​ಗಳನ್ನು ಎಲ್ಲರ ಸಮ್ಮುಖದಲ್ಲಿ ಆನ್​ಲೈನ್ (ಡಿಜಿಟಲ್) ಡ್ರಾ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಯಿತು. ಕಾರು, ದ್ವಿಚಕ್ರ ವಾಹನ, ಟಿವಿ, ರೆಫ್ರಿಜಿರೇಟರ್, ವಾಷಿಂಗ್ ಮಷಿನ್, ಎರಡು ಗ್ರೖೆಂಡರ್, ಎರಡು ಮಿಕ್ಸರ್, ಐದು ಫ್ಯಾನ್ ಮತ್ತಿತರ ಬಹುಮಾನಗಳು ಅದೃಷ್ಟಶಾಲಿ ಗ್ರಾಹಕರ ಪಾಲಾದವು. ಲಕ್ಕಿ ಡ್ರಾ ಮೂಲಕ 3 ಗ್ರಾಂ ಚಿನ್ನದ ನಾಣ್ಯದ ಬಹುಮಾನಕ್ಕೆ ಡೀಲರ್ ಆಯ್ಕೆಯೂ ನಡೆಯಿತು. ಇದೇ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡ ಪಾಲುದಾರರು, ಪ್ರತಿ ವರ್ಷವೂ ವಿಜಯೋತ್ಸವದಿಂದ ಆಗುತ್ತಿರುವ ಲಾಭಗಳ ಕುರಿತು ವಿವರಿಸಿದರು. ಇಂಥದ್ದೊಂದು ಶಾಪಿಂಗ್ ಉತ್ಸವ ಹಮ್ಮಿಕೊಂಡ ಪತ್ರಿಕೆಗೆ ಧನ್ಯವಾದ ಹೇಳಿದರು.

    ಅದೃಷ್ಟಶಾಲಿಗಳನ್ನು ಅರಸಿ ಬಂದವು ಆಕರ್ಷಕ ಬಹುಮಾನಗಳು

    ಸ್ಥಾನಿಕ ಸಂಪಾದಕ ನವೀನ ಎಂ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್.ಕುಮಾರಸ್ವಾಮಿ ಡಿಜಿಟಲ್ ಡ್ರಾ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ವಿಜಯೋತ್ಸವದಲ್ಲಿ ಪಾಲ್ಗೊಂಡ ವರ್ತಕರನ್ನು ಅಭಿನಂದಿಸಿ ಮುಂದೆಯೂ ಹೀಗೆಯೇ ಸಹಕಾರ ನಿರೀಕ್ಷಿಸುವುದಾಗಿ ತಿಳಿಸಿದರು.

    ಪತ್ರಿಕೆ ಉತ್ತುಂಗಕ್ಕೆ ಏರಲಿ: ರೈತರು, ವಿದ್ಯಾರ್ಥಿಗಳನ್ನು ಒಳಗೊಂಡು ಸಾರ್ವಜನಿಕರ ಪರವಾದ ಮಾನವಾಸಕ್ತಿ ವಿಷಯಗಳ ಕುರಿತು ಬೆಳಕು ಚೆಲ್ಲುವ ಕೆಲಸವನ್ನು ‘ವಿಜಯವಾಣಿ’ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮೆಚ್ಚುಗೆ ವ್ಯಕ್ತಪಡಿಸಿದರು. ಆಧುನಿಕ ಆನ್​ಲೈನ್ ಭರಾಟೆ, ಸ್ಪರ್ಧಾತ್ಮಕ ಜಗತ್ತಿನ ನಡುವೆಯೂ ‘ವಿಜಯವಾಣಿ’ ತನ್ನದೇ ಶೈಲಿಯಲ್ಲಿ ಸ್ವಂತಿಕೆ ಉಳಿಸಿಕೊಳ್ಳುವ ಮೂಲಕ ನಂ. 1 ಸ್ಥಾನ ಕಾಪಾಡಿಕೊಂಡು ಬಂದಿರುವುದು ಸುಲಭದ ಮಾತಲ್ಲ. ವಿವಿಧ ಕಾರ್ಯಕ್ರಮಗಳ ಮೂಲಕ ಜನರನ್ನು ಆಕರ್ಷಿಸುವಲ್ಲೂ ಸಫಲವಾಗಿದೆ. ಈ ಪತ್ರಿಕೆಯ ಹೆಸರು ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಆಶಿಸಿದರು.

    ವಿಜಯವಾಣಿ ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ ಸ್ವಾಗತಿಸಿ, ನಿರೂಪಿಸಿದರು. ಮುಖ್ಯ ಉಪಸಂಪಾದಕ ಹರ್ಷ ಪುರೋಹಿತ, ವರದಿಗಾರ ಕೆ.ಎಸ್. ಪ್ರಣವಕುಮಾರ್, ದಾವಣಗೆರೆ ಜಾಹೀರಾತು ವಿಭಾಗದ ಸೀನಿಯರ್ ಆಫೀಸರ್ ಸಿ.ಬಿ.ಶಶಿಧರಮೂರ್ತಿ, ಚಿತ್ರದುರ್ಗ ಪ್ರಸಾರಾಂಗ ವಿಭಾಗದ ಶುಭಾಕರ್, ಛಾಯಾಚಿತ್ರಗ್ರಾಹಕ ವರದರಾಜ್ ಯಾದವ್, ಜಾಹೀರಾತು ವಿಭಾಗದ ಕೊಟ್ರೇಶ್, ಐಟಿ ವಿಭಾಗದ ಮೃತ್ಯುಂಜಯ ತುರ್ಕಾಣಿ ಇತರರಿದ್ದರು.

    ವಿಜಯೋತ್ಸವ ಪತ್ರಿಕೆಯ ವಿಶೇಷ ಕಾರ್ಯಕ್ರಮವಾಗಿದೆ. ಮುಂದಿನ ವರ್ಷವಾದರೂ ದಾವಣಗೆರೆ ಜಿಲ್ಲೆಗೆ ಪ್ರತ್ಯೇಕವಾಗಿ ಒಂದು ಕಾರು ಬಹುಮಾನ ಇಟ್ಟರೆ ಒಳ್ಳೆಯದು.
    l ಬಿ.ಸಿ.ಶಿವಕುಮಾರ್ ಬಿ.ಎಸ್.ಚನ್ನಬಸಪ್ಪ ಆಂಡ್ ಸನ್ಸ್ ಮಾಲೀಕರು, ದಾವಣಗೆರೆ

    ವಿಜಯೋತ್ಸವದ ಜತೆ ಕೈಜೋಡಿಸಿದ ನಂತರ ನಮ್ಮ ವ್ಯಾಪಾರ ಉತ್ತಮವಾಗಿ ವೃದ್ಧಿಯಾಗಿದೆ. ನಮ್ಮ ಗ್ರಾಹಕರೊಬ್ಬರಿಗೆ 3 ವರ್ಷದ ಹಿಂದೆ ಕಾರು ಬಹುಮಾನವಾಗಿ ಬಂದಿತ್ತು.
    l ಸಚಿನ್ ಶ್ರೀಗುರುಕೃಪಾ ಏಜೆನ್ಸಿಸ್, ಚಿತ್ರದುರ್ಗ

    ವಿಜಯೋತ್ಸವದಿಂದ ಈ ಬಾರಿ ಸಾಕಷ್ಟು ಅನುಕೂಲವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ. ಡಿಜಿಟಲ್ ಆಗಿದ್ದರಿಂದ ಅನೇಕರಿಗೆ ನೋಂದಣಿಗೆ ಕಷ್ಟವಾಯಿತು.
    l ಸ್ವಾತಿ ಅರಮನೆ ಸ್ವೀಟ್ಸ್ ವ್ಯವಸ್ಥಾಪಕಿ, ಚಿತ್ರದುರ್ಗ

    ಹೊಸತನದ ಪ್ರಯೋಗಗಳ ಮೂಲಕವೇ ವಿಜಯವಾಣಿ ಇಷ್ಟೊಂದು ಎತ್ತರಕ್ಕೆ ಬೆಳೆದು ನಿಂತಿದೆ. ವಿಜಯೋತ್ಸವದಂತಹ ಕಾರ್ಯಕ್ರಮ ವ್ಯಾಪಾರ ವೃದ್ಧಿಗೆ ಅನುಕೂಲ. ಓದುಗರು, ಪತ್ರಿಕೆ ನಡುವೆ ಬಾಂಧವ್ಯ ಶ್ಲಾಘನೀಯ.
    l ಸಿ.ಕೆ.ತಮ್ಮಣ್ಣ, ಪವನ್ ಜ್ಯುವೆಲರ್ಸ್, ದಾವಣಗೆರೆ

    ದೇಶದಲ್ಲಿ ಶಿಕ್ಷಣದಿಂದಲೇ ಮುಂದೆ ಬರುವವರ ಸಂಖ್ಯೆ ಶೇ. 5 ರಿಂದ 10 ರಷ್ಟಿರ ಬಹುದು. ಸ್ವಂತ ಉದ್ಯಮದಿಂದ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯವೆಂಬ ವಾತಾವರಣ ಸೃಷ್ಟಿ ಯಾಗಿದೆ. ಹೀಗಾಗಿ ವ್ಯಾಪಾರಸ್ಥರಿಗೂ ವಿಜಯವಾಣಿ ಪತ್ರಿಕೆಯಿಂದ ಅನುಕೂಲವಾಗಿದೆ.
    l ವಾಸುದೇವ ರಾಯ್ಕರ್, ರಾಯ್ಕರ್ ಜ್ಯುವೆಲರ್ಸ್, ದಾವಣಗೆರೆ

    ಹೊಸತನದೊಂದಿಗೆ ಮುನ್ನಡೆಯುತ್ತಿರುವ ‘ವಿಜಯವಾಣಿ’ ಪತ್ರಿಕೆ ನವನವೀನ ಕಾರ್ಯಕ್ರಮಗಳ ಮೂಲಕ ಕ್ರಿಯಾಶೀಲವಾಗಿ ಓದುಗರನ್ನು ತಲುಪುತ್ತಿರುವ ಕಾರಣ ನಂ.1 ಸ್ಥಾನಕ್ಕೇರಿದೆ.
    l ಧಮೇಂದರ್​ಕುಮಾರ್ ಮೀನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಇದನ್ನು ಓದಿ: ವಿಮಾನಯಾನ ಕ್ಷೇತ್ರಕ್ಕೂ ಕಾಲಿಡಲಿ ವಿಆರ್‌ಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts