More

    ವಿಮಾನಯಾನ ಕ್ಷೇತ್ರಕ್ಕೂ ಕಾಲಿಡಲಿ ವಿಆರ್‌ಎಲ್

    ಚಿತ್ರದುರ್ಗ: ಬಸ್‌ಗಳು, ಲಾರಿಗಳ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ವಿಆರ್‌ಎಲ್ ಸಂಸ್ಥೆ ವಿಮಾನಯಾನ ಕ್ಷೇತ್ರಕ್ಕೂ ಕಾಲಿರಿಸಿ ಯಶಸ್ಸು ಸಾಧಿಸಲಿ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಆಶಿಸಿದರು.

    ನಗರದ ವಿಜಯವಾಣಿ ಕಚೇರಿಯಲ್ಲಿ ಶನಿವಾರ ವಿಜಯೋತ್ಸವ-2023 ರ ಅದೃಷ್ಟಶಾಲಿಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಎಲ್ಲರಿಗಿಂತ ಭಿನ್ನವಾಗಿ ಯೋಚಿಸುವ, ಹೊಸತನವನ್ನು ಅನ್ವೇಷಿಸುವ ದೂರದೃಷ್ಟಿಯ ಚಿಂತಕ. ಅವರು ಬಹಳ ಕಷ್ಟಪಟ್ಟು ಮೇಲೆ ಬಂದು ಬೃಹತ್ ಉದ್ಯಮಿಯಾದವರು. ಸ್ಪರ್ಧೆ ಮೂಲಕವೇ ಮುಂದೆ ಬರುವ ಪ್ರಯತ್ನ ಮಾಡುತ್ತಾರೆ. ಸಾರಿಗೆ ಕ್ಷೇತ್ರದಿಂದ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ, ಸಾರ್ವಜನಿಕ ವಲಯಕ್ಕೂ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಪುತ್ರ ಆನಂದ ಸಂಕೇಶ್ವರ ಕೂಡ ತಂದೆಯಂತೆ ಕ್ರಿಯಾಶೀಲರು ಎಂದು ತಿಳಿಸಿದರು.

    ವೋಲ್ವೋ ಬಸ್‌ಗಳು, ಲಾರಿಗಳು ಸೇರಿ ಸಾವಿರಾರು ವಾಹನಗಳನ್ನು ಹೊಂದಿರುವ ಅವರು, ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳಿಗೂ ಅವರ ವಾಹನಗಳು ಸಂಚರಿಸುತ್ತವೆ. ದೇಶ-ವಿದೇಶಗಳಲ್ಲೂ ಈ ಕ್ಷೇತ್ರದ ಮೂಲಕ ಖ್ಯಾತಿ ಗಳಿಸಿದ್ದಾರೆ. ಈಗ ಜಿಲ್ಲೆಗೊಂದರಂತೆ ವಿಮಾನ ನಿಲ್ದಾಣಗಳು ಸ್ಥಾಪನೆಯಾಗುತ್ತಿದ್ದು, ಅವರು ವಿಮಾನಯಾನ ಸೇವೆ ಆರಂಭಿಸಿದರೆ ಯಶಸ್ಸು ಖಚಿತ ಎಂದರು.

    ಮಾಧ್ಯಮ ಕ್ಷೇತ್ರದಲ್ಲೂ ಅಪಾರ ಆಸಕ್ತಿ ಹೊಂದಿರುವ ಸಂಕೇಶ್ವರ ಅವರ ಪರಿಶ್ರಮದಿಂದ ‘ವಿಜಯವಾಣಿ’ ದಿನಪತ್ರಿಕೆ ನಂ. 1 ಸ್ಥಾನದಲ್ಲಿ ಭದ್ರವಾಗಿದೆ. ನನ್ನ ಹೊಳಲ್ಕೆರೆ ಕ್ಷೇತ್ರದ ಹಳ್ಳಿ-ಹಳ್ಳಿಗೂ ಪತ್ರಿಕೆ ತಲುಪುತ್ತದೆ. ಆ ಭಾಗದ ಜನರು ಇದನ್ನು ಅಪ್ಪಿಕೊಂಡಿದ್ದಾರೆ. ಅವರಲ್ಲಿರುವ ಛಲ ಇತರರಿಗೂ ಮಾದರಿ ಎಂದು ಹೇಳಿದರು.

    ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಹಾಗೂ ಚಿತ್ರದುರ್ಗ, ದಾವಣಗೆರೆಯ ಪಾಲುದಾರ ಡೀಲರ್‌ಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts