More

    ಪಿಯುಸಿ ಪರೀಕ್ಷೆಗೆ ಗೋಡೆ ಗಡಿಯಾರ

    ಚಿತ್ರದುರ್ಗ: ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 4 ರಿಂದ 23ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಾಗುತ್ತಿದೆ ಎಂದು ಡಿಸಿ ಆರ್.ವಿನೋತ್‌ಪ್ರಿಯಾ ಹೇಳಿದರು.

    ಡಿಸಿ ಕಚೇರಿಯಲ್ಲಿ ಬುಧವಾರ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೇಂದ್ರ ಳ ಮುಖ್ಯಅಧೀಕ್ಷಕರಿಗೆ ಬೇಸಿಕ್ ಮೊಬೈಲ್‌ಫೋನ್ ಬಳಸಲು ಮಾತ್ರ ಅನುಮತಿ ಇದೆ. ಆದರೆ, ವಿದ್ಯಾರ್ಥಿ, ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಮೊಬೈಲ್ ಸೇರಿ ಯಾವುದೇ ವಿದ್ಯುನ್ಮಾನ ಸಾಧನಗಳನ್ನು ಕೇಂದ್ರಕ್ಕೆ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

    ಯಾರೊಬ್ಬರೂ ಕೈಗಡಿಯಾರ ಕಟ್ಟಿಕೊಳ್ಳುವಂತಿಲ್ಲ. ಸಮಯ ಗಮನಿಸಲು ಎಲ್ಲ ಕೊಠಡಿಗಳಲ್ಲಿ ಕಡ್ಡಾಯವಾಗಿ ಗೋಡೆ ಗಡಿಯಾರ ಅಳವಡಿಸಲಾಗಿರುತ್ತದೆ ಎಂದರು.

    ಪರೀಕ್ಷೆ ಅವಧಿ ಮುಗಿಯುವವರೆಗೂ ಯಾವ ವಿದ್ಯಾರ್ಥಿಯನ್ನು ಹೊರಗೆ ಕಳುಸುವಂತಿಲ್ಲ. ಒಂದು ವೇಳೆ ಬಿಟ್ಟರೂ ಪ್ರಶ್ನೆ ಪತ್ರಿಕೆಯನ್ನು ಮೇಲ್ವಿಚಾರಕರು ಪಡೆಯಬೇಕು. ಪರೀಕ್ಷೆ ವೇಳೆ ಛಾಯಾಗ್ರಹಣಕ್ಕೆ ನಿಷೇಧವಿದ್ದು, ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

    ಎಸ್ಪಿ ಜಿ.ರಾಧಿಕಾ ಮಾತನಾಡಿ, ಎಲ್ಲ ಕೇಂದ್ರಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು. ಸೂಕ್ಷ್ಮಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದರು.

    ಪಿಯು ಡಿಡಿ ಆರ್.ನಾಗರಾಜಪ್ಪ ಮಾತನಾಡಿ, ಜಿಲ್ಲೆಯಲ್ಲಿ 16,674 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಲ್ಲಿ 8,823 ಬಾಲಕಿಯರು ಹಾಗೂ 7,851 ಬಾಲಕರು ಇದ್ದಾರೆ ಎಂದು ತಿಳಿಸಿದರು.

    ಎಸಿ ವಿ.ಪ್ರಸನ್ನ, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts