ಚಿತ್ರದುರ್ಗ: ಶಿಕ್ಷಣ ಇಲಾಖೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ 1:1 ಅನುಪಾತದಡಿ ಆಯ್ಕೆ ಪಟ್ಟಿ ಪರಿಶೀಲನೆಗಾಗಿ ಜಿಲ್ಲಾ ಹಂತದ ಕೌನ್ಸ್ಸೆಲಿಂಗ್ ಜ.17ರ ಬೆಳಗ್ಗೆ 10ರಿಂದ 5ರ ವರೆಗೆ ಡಿಡಿಪಿಐ ಕಚೇರಿಯಲ್ಲಿ ನಡೆಯಲಿದೆ.
ವಿಜ್ಞಾನ ಮತ್ತು ಗಣಿತ ಕ್ರಮ ಸಂಖ್ಯೆ 1ರಿಂದ 5ರ ವರೆಗೆ, ಸಮಾಜ ವಿಜ್ಞಾನ 1ರಿಂದ 14ರ ವರೆಗೆ ಹಾಗೂ ಆಂಗ್ಲ ವಿಷಯದ ಕ್ರಮ ಸಂಖ್ಯೆ 1ರಿಂದ 92ರ ವರೆಗೆ ಕೌನ್ಸೆಲಿಂಗ್ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ 08194-222259 ಸಂಪರ್ಕಿಸುವಂತೆ ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ತಿಳಿಸಿದ್ದಾರೆ.