More

    ಬೆಳಕು ಕಾಣದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್; ಪವರ್ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ

    ಚಿತ್ರದುರ್ಗ: ದೇಶದಲ್ಲಿ ಕತ್ತಲೆಯಲ್ಲಿದ್ದ 18,374 ಹಳ್ಳಿಗಳಿಗೆ ಕಳೆದ ಎಂಟು ವರ್ಷಗಳಲ್ಲಿ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.

    ನಗರದ ತರಾಸು ರಂಗ ಮಂದಿರದಲ್ಲಿ ಆಯೋಜಿಸಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ, ವಿದ್ಯುತ್ 2047 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ನಿರಂತರವಾಗಿ ದೊರಕುತ್ತಿದೆ. ಭಾರತ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿಕರ ಬದಲಾವಣೆ ತಂದಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ಹೇಳಿದರು.

    ವಿದ್ಯುತ್ ವಿತರಣಾ ವ್ಯವಸ್ಥೆ ಹಾಗೂ ಗ್ರಾಹಕರ ಸೇವೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದರಿಂದ ಕೃಷಿ, ಕೈಗಾರಿಕೆಗಳಿಗೆ ಉತ್ತೇಜನೆ ಸಿಕ್ಕಂತಾಗಿದೆ. ಇಂಗಾಲ ರಹಿತ, ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು, ಇದನ್ನು ಜನರಿಗೆ ತಲುಪಿಸುವ ಕಾರ್ಯ ಬೆಸ್ಕಾಂ ಮಾಡಬೇಕು ಎಂದರು.

    ಬೆಸ್ಕಾಂ ನೌಕರರು ನಿರಂತರ ಹಗಲು-ರಾತ್ರಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಬೆಸ್ಕಾಂ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

    ವಿದ್ಯುತ್ ಸಂಪರ್ಕ ಸಾಧನೆ ಕಿರುಚಿತ್ರ ಪ್ರದರ್ಶನ: ಕೇಂದ್ರದ ಯೋಜನೆಗಳಾದ ಯುನಿವರ್ಸಲ್ ಹೌಸ್‌ಹೋಲ್ಡ್ ಎಲೆಕ್ಟ್ರೀಫಿಕೇಶನ್, ಗ್ರಾಮ ವಿದ್ಯುದ್ದೀಕರಣ, ವಿತರಣಾ ವ್ಯವಸ್ಥೆ ಬಲಪಡಿಸುವುದು, ಫಿಲ್ಮ್ ಆನ್ ಸಾಮರ್ಥ್ಯ ಸೇರ್ಪಡೆ, ಒನ್ ನೇಷನ್ ಒನ್ ಗ್ರಿಡ್, ನವೀಕರಿಸಬಹುದಾದ ಶಕ್ತಿ ಮೂಲಗಳು. ರಾಜ್ಯ ಸರ್ಕಾರದ ವಿದ್ಯುತ್ ಚಾಲಿತ ವಾಹನ ಬಳಕೆದಾರರಿಗೆ ಅರಿವು, ಬೆಳಕು ಯೋಜನೆ, ವಿತರಣಾ ಪರಿವರ್ತಕಗಳ ನಿರ್ವಹಣಾ ಅಭಿಯಾನ ಕುರಿತು ಕಿರು ಚಲನಚಿತ್ರ ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts