More

    ನಮ್ಮ ಪ್ರತಿ ನಡೆಯೊಂದಿಗೆ ದೈವ ಹೆಜ್ಜೆ

    ಚಿತ್ರದುರ್ಗ: ಭಗವಂತ ನೀಡುವ ಸೂಚನೆಗಳನ್ನು ಅರ್ಥ ಮಾಡಿಕೊಂಡು ಸಾಗಿದರೆ ಬಾಳು ಬಂಗಾರವಾಗುತ್ತದೆ ಎಂದು ಉತ್ತರಾದಿ ಮಠದ ಶ್ರೀ ಸತ್ತಾತ್ಮತೀರ್ಥ ಶ್ರೀಪಾದರು ಹೇಳಿದರು.

    ನಗರದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಹರಿದಾಸ ಹಬ್ಬದ 3ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಮನ್ ಮಹಾಭಾರತ-ಭೀಷ್ಮ ಪರ್ವ ಕುರಿತು ಪ್ರವಚನ ನೀಡಿದರು.

    ದೇವರು ಎಲ್ಲಿದ್ದಾನೆ ಎಂಬುದು ಜನಸಾಮಾನ್ಯರ ಪ್ರಶ್ನೆ. ಆದರೆ, ಭಗವಂತ ಎಲ್ಲ ಕಡೆ ನಮ್ಮನ್ನು ರಕ್ಷಿಸುತ್ತಾ ನಮ್ಮ ಜತೆಗೆ ಹೆಜ್ಜೆ ಹಾಕುತ್ತಿರುತ್ತಾನೆ. ಕೆಲ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡರೆ ದೇವರು ಕಾಣಿಸುತ್ತಾನೆ ಎಂದರು.

    ಎಲ್ಲವನ್ನೂ ಶಾಸವನ್ನೇ ಓದಿ ತಿಳಿದುಕೊಳ್ಳಬೇಕಿಲ್ಲ. ಗುರುಗಳು, ಹಿರಿಯರಿಂದ ತಿಳಿಯಬೇಕು. ಆದರೆ, ಪ್ರಸಕ್ತ ದಿನದಲ್ಲಿ ಯಾರು ಯಾರ ಮಾತನ್ನು ಕೇಳುವ ತಾಳ್ಮೆಯಿಲ್ಲವಾಗಿದೆ ಎಂದು ತಿಳಿಸಿದರು.

    ದೇವರು ನಮಗೆ ಪ್ರಾಕೃತಿಕವಾಗಿ ಕೆಲ ಸೂಚನೆ ನೀಡುತ್ತಾನೆ. ಭಗವಂತ ನಮಗೆ ಸಮಾಜದ ಮಧ್ಯದಿಂದ ನಾನಾ ರೂಪದಲ್ಲಿ ಮಾರ್ಗದರ್ಶನ ನೀಡುತ್ತಾನೆ. ನಾವು ಸರಿಯಾಗಿ ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

    ಹರಿವಾಯುಗುರು ಸೇವಾ ಸಂಘದ ಪ್ರಮುಖರಾದ ಹುಲಿರಾಜ್ ಜೋಯಿಸ್, ಟಿ.ಎಸ್.ಗೋಪಾಲಕಷ್ಣ , ಟಿ.ಕೆ.ನಾಗರಾಜ್ ಇತರರಿದ್ದರು.

    31ರಂದು ಹರಿದಾಸ ಹಬ್ಬದಲ್ಲಿ: ಬೆಳಗ್ಗೆ 8ರಿಂದ 9ರ ವರೆಗೆ ಉತ್ತರಾದಿ ಮಠದಲ್ಲಿ ಶ್ರೀಕೃಷ್ಣಾಮೃತ ಮಹಾರ್ಣವ ಪ್ರವಚನ. ಸಂಜೆ 6ರಿಂದ 6.30ರ ವರೆಗೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ. 6.30ರಿಂದ 7ರ ವರೆಗೆ ಸಪ್ತಗಿರಿ ಭಜನಾ ಮಂಡಳಿಯಿಂದ ದಾಸರ ಕೃತಿಗಳಲ್ಲಿ ಮುಖ್ಯಪ್ರಾಣದೇವರು ಕುರಿತು ಗೋಧೂಳಿಯಲ್ಲಿ ಗೋವಿಂದ ಗೀತಾಮೃತ. 7ರಿಂದ 8.15ರ ವರೆಗೆ ಶ್ರೀ ಸತ್ತಾತ್ಮತೀರ್ಥ ಶ್ರೀಪಾದಂ ಅವರಿಂದ ಶ್ರೀಮನ್ ಮಹಾಭಾರತ-ಭೀಷ್ಮ ಪರ್ವ ಕುರಿತು ಪ್ರವಚನ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts