More

    ಮಧ್ಯಪ್ರದೇಶದಲ್ಲಿ ದುರ್ಗದ ವಿದ್ಯಾರ್ಥಿಗಳು

    ಚಿತ್ರದುರ್ಗ: ಹಿರಿಯೂರು ತಾಲೂಕು ಉಡುವಳ್ಳಿ ಜವಾಹರ ನವೋದಯ ವಿದ್ಯಾಲಯದ 23 ವಿದ್ಯಾರ್ಥಿಗಳು ಮಧ್ಯಪ್ರದೇಶದಲ್ಲಿ ಕಾಲ ನೂಕುವಂತಾಗಿದೆ.

    ಎಜುಕೇಷನ್ ಆ್ಯಂಡ್ ಕಲ್ಚರಲ್ ಎಕ್ಸಚೆಂಜ್ ಕಾರ್ಯಕ್ರಮದಡಿ ಮಧ್ಯಪ್ರದೇಶ ಇಂದೋರು ಸಮೀಪದ ಚಂದ್ರಶೇಖರ ಡ್ಯಾಂ ಜವಾಹರ ನವೋದಯ ವಿದ್ಯಾಲಯಕ್ಕೆ ನವೋದಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿಗಳು ತೆರಳಿದ್ದರು.

    ಕರೊನಾ ಗಲಾಟೆ ಆರಂಭವಾಗುತ್ತಿದ್ದಂತೆ ಎಲ್ಲ ವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಮಧ್ಯ ಪ್ರದೇಶದಲ್ಲಿದ್ದ ಚಿತ್ರದುರ್ಗದ ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ರೈಲು ಮೂಲಕ ಕಳಿಸಲು ಅಲ್ಲಿನ ವಿದ್ಯಾಲಯದ ಆಡಳಿತ ಮಾ.22 ಟಿಕೆಟ್ ಬುಕ್ ಮಾಡಿತ್ತು.

    ಆದರೆ, ದೇಶಾದ್ಯಂತ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದರಿಂದಾಗಿ ವಿದ್ಯಾರ್ಥಿಗಳು ಈಗ ಅಲ್ಲಿಯೇ ಉಳಿಯುವಂತಾಗಿದೆ. ಈಗ ಅವರನ್ನು ವಿಮಾನದಲ್ಲಿ ಕರೆತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ಕರೆತರಲು ಹೊಸದಿಲ್ಲಿಯಲ್ಲಿರುವ ವಿದ್ಯಾಲಯದ ಆಯುಕ್ತರ ಅನುಮತಿ ಬೇಕಿದ್ದು, ಸಂಸದರ ಮೂಲಕ ಅನುಮತಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಕಚೇರಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts