More

    ಕುರಿಗಾಹಿಗಳಿಗೆ ಪ್ಯಾಕೇಜ್ ವಿಸ್ತರಿಸಿ

    ಚಿತ್ರದುರ್ಗ: ಲಾಕ್‌ಡೌನ್‌ನಿಂದಾಗಿ ಕಷ್ಟಕ್ಕೆ ಸಿಲುಕಿರುವ ಕುರುಬ ಸಮುದಾಯಕ್ಕೂ ವಿಶೇಷ ಪ್ಯಾಕೇಜ್ ವಿಸ್ತರಿಸುವಂತೆ ಜಿಲ್ಲಾ ಹಾಲುಮತ ಮಹಾ ಸಭಾ ಗುರುವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

    ಶ್ರಮಿಕ ವರ್ಗಗಳಿಗೆ ನೆರವಿನ ಹಸ್ತವನ್ನು ನೀಡುವ ಸಂದರ್ಭದಲ್ಲಿ ನಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ. ಕುರುಬರು, ಗೊಲ್ಲರು ಮತ್ತು ನಾಯಕ ಸಮುದಾಯವನ್ನು ಮರೆತಿರುವುದು ಸರಿಯಲ್ಲ. ಈ ಸಮುದಾಯಗಳು ಕುರಿ, ಆಡು, ಗೋವುಗಳನ್ನು ಕಾಯುವ ಕಾಯಕ ಮಾಡುತ್ತೇವೆ.

    ಅದರಲ್ಲಿ ಹಾಲುಮತದ ಕುರುಬ ಸಮುದಾಯವೂ ಕುರಿಪಾಲನೆ, ಉಣ್ಣೆ, ಕಂಬಳಿ ತಯಾರಿಸುವ ಕೆಲಸವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಾರೆ. ಈ ಮಧ್ಯೆ ಲಾಕ್‌ಡೌನ್‌ನಿಂದಾಗಿ ನಮಗೆ ಆಗಿರುವ ನಷ್ಟ ಅಪಾರ.

    ಆದ್ದರಿಂದ, ವಿಶೇಷ ಪ್ಯಾಕೇಜ್‌ನ್ನು ವಿಸ್ತರಿಸುವ ಮೂಲಕ ನೆರವು ನೀಡಬೇಕು ಹಾಗೂ ಕುರಿ, ಇತರೆ ಜಾನುವಾರು ಆಕಸ್ಮಿಕ ಮರಣಕ್ಕೆ ಪರಿಹಾರ ಕೊಡಲು ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಅನುಗ್ರಹ ಯೋಜನೆ ಮುಂದುವರಿಸಬೇಕೆಂದು ಒತ್ತಾಯಿಸಿ ಎಡಿಸಿ ಸಿ.ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

    ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಟಿ.ಜಗದೀಶ್, ಮುಖಂಡರಾದ ಎಮ್ಮೆಹಟ್ಟಿ ಹನುಮಂತಪ್ಪ, ಮಾಲತೇಶ್ ಅರಸ್, ಎಸ್.ಬಿ.ಗಣೇಶ್, ಸುರೇಶ್, ಸಿ.ಯೋಗೇಶ್, ಬಿ.ಯೋಗರಾಜ್, ಟಿ.ಎಲ್.ಮಂಜುನಾಥ್, ಎಲ್.ಬಸವರಾಜ್, ಎನ್.ಅಂಜೀನಪ್ಪ, ಸಿ.ಎ.ಷಣ್ಮುಖ, ಈ.ಆರ್.ಕುಮಾರ್, ಎಂ.ನಿಶಾನಿ ಶಂಕರ್, ಜಿ.ಎನ್.ಜಗದೀಶ್, ಎಂ.ಜೆ.ರಾಘವೇಂದ್ರ, ಅಣ್ಣಪ್ಪ, ರವೀಂದ್ರ, ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts