More

    ಜಿಲ್ಲೇಲಿ 6130 ಪ್ರಕರಣಗಳ ಇತ್ಯರ್ಥ

    ಚಿತ್ರದುರ್ಗ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ಪ್ರಸಕ್ತ ವರ್ಷದ ಮೊದಲ ರಾಷ್ಟ್ರೀಯ ಅದಾಲತ್ ನಡೆಯಿತು.

    ಇದಕ್ಕೆಂದೇ ಗುರುತಿಸಿದ್ದ 7 ಸಾವಿರ ಬಾಕಿ ಪ್ರಕರಣಗಳಲ್ಲಿ 6130 ರಾಜೀ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತಿಳಿಸಿದೆ.

    ಜಿಲ್ಲಾ ಕೇಂದ್ರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ.ವಟವಟಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ಥಳೀಯ ನ್ಯಾಯಾಧೀಶರ ನೇತೃತ್ವದಲ್ಲಿ ಆದಾಲತ್ ನಡೆದಿದೆ.

    ಮೊದಲ ಆದಾಲತ್‌ಗೆ ಜಿಲ್ಲೆಯ ಬಾಕಿ ಇರುವ 28,465 ಪ್ರಕರಣಗಳಲ್ಲಿ 6130 ಇತ್ಯರ್ಥವಾಗಿದ್ದು, 5.11 ಕೋಟಿ ರೂ. ಹಾಗೂ ವ್ಯಾಜ್ಯಪೂರ್ವದ 535 ಪ್ರಕರಣಗಳಲ್ಲಿ 35 ಅನ್ನು ಇತ್ಯರ್ಥ ಪಡಿಸಿ 9.31 ಲಕ್ಷ ರೂ. ರಾಜಿ ಮೊತ್ತ ಪಾವತಿಗೆ ಕಕ್ಷಿದಾರರಿಗೆ ಪಾವತಿಸುವಂತೆ ಆದೇಶಿಸಲಾಗಿದೆ.

    ಚೆಕ್‌ಬೌನ್ಸ್, ಬ್ಯಾಂಕ್ ವಸೂಲಿ, ಮೋಟಾರ್ ಅಪಘಾತ, ಉದ್ಯೋಗ, ವಿದ್ಯುತ್ ಹಾಗೂ ನೀರಿನ ಶುಲ್ಕ, ವಿಚ್ಚೇದನ ಹೊರತಾದ ಕುಟುಂಬ ಕಲಹ, ಬಾಡಿಗೆ ಅನುಭೋಗ ಹಕ್ಕು, ರಾಜಿ ಆಗಬಲ್ಲ ಅಪರಾಧಿ ಪ್ರಕರಣಗಳು, ಪಿಂಚಣಿ, ಭೂ ಸ್ವಾಧೀನ, ವೇತನ, ಭತ್ಯೆ ಸಹಿತ ಸೇವಾ ಪ್ರಕರಣಗಳು, ಕಂದಾಯ ಇತ್ಯಾದಿ ಪ್ರಕರಣಗಳು ಇತ್ಯರ್ಥಗೊಂಡಿವೆ.

    ಚಿತ್ರದುರ್ಗದ ನ್ಯಾಯಲಯದಲ್ಲಿ ಜರುಗಿದ ಆದಾಲತ್‌ನಲ್ಲಿ ನ್ಯಾಯಾಧೀಶರಾದ ಬಸವರಾಜ ಎಸ್.ಚೇಗರೆಡ್ಡಿ, ಆರ್.ಬನ್ನಿಕಟ್ಟಿ ಹನುಮಂತಪ್ಪ, ಬಿ.ಕೆ.ಗಿರೀಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts